ಪಟನಾ:ಕಾರೊಂದಕ್ಕೆ ರೈಲು ಡಿಕ್ಕಿಯಾದ ಪರಿಣಾಮ ನಾಲ್ಕು ವರ್ಷದ ಬಾಲಕ ಸೇರಿ ಒಂದೇ ಕುಟುಂಬದ ಮೂವರು ಸಾವಿಗೀಡಾಗಿರುವ ಘಟನೆ ಬಿಹಾರದ ಪಟನಾ ಜಿಲ್ಲೆಯಲ್ಲಿ ಶನಿವಾರ ನಡೆದಿದೆ.
ಇದನ್ನೂ ಓದಿ:ಅರೆಬೆತ್ತಲೆ ದೇಹದ ಮೇಲೆ ಮಕ್ಕಳು ಡ್ರಾಯಿಂಗ್ ಮಾಡಿದ್ದರಲ್ಲಿ ಅಶ್ಲೀಲತೆ ಏನಿದೆ? ಸರ್ಕಾರಕ್ಕೆ ರೆಹನಾ ತಿರುಗೇಟು!
ಕಾರು ಪೊಟಾಹಿ ಮತ್ತು ನದ್ವಾನ್​ ನಡುವಿನ ರೈಲ್ವೇ ಹಳಿ ಕ್ರಾಸ್​ ಮಾಡುವಾಗ ಪಟನಾ-ರಾಂಚಿ ಜನ್​ಶತಾಬ್ದಿ ಸ್ಪೆಷನ್​ ಟ್ರೈನ್​ ಡಿಕ್ಕಿ ಹೊಡೆದಿದೆ. ಇಂದು ಬೆಳಗ್ಗೆ 6.35ರ ಸುಮಾರಿಗೆ ಘಟನೆ ನಡೆದಿದೆ ಎಂದು ಪೂರ್ವ ಕೇಂದ್ರ ರೈಲ್ವೆ ವಲಯದ ಸಿಪಿಆರ್​ಒ ರಾಜೇಶ್​ ಕುಮಾರ್​ ಮಾಹಿತಿ ನೀಡಿದ್ದಾರೆ.
ಇದು ಕಾರು ಚಾಲಕನ ಸಂಪೂರ್ಣ ನಿರ್ಲಕ್ಷ್ಯವಾಗಿದೆ. ಸಿಗ್ನಲ್​ ಇದ್ದರೂ ಅನಧಿಕೃತವಾಗಿ ಹಳಿ ಕ್ರಾಸ್​ ಮಾಡಲು ಯತ್ನಿಸಿದರು. ಗಯಾಗೆ ತೆರಳುತ್ತಿದ್ದ ರೈಲು ಇದೇ ವೇಳೆ ಡಿಕ್ಕಿ ಹೊಡೆದಿದೆ ಎಂದು ಕುಮಾರ್​ ಹೇಳಿದ್ದಾರೆ.
ಮೃತರನ್ನು ಸುಜಿತ್​ (32) ಪತ್ನಿ ನಿಲಿಮಾ (26) ಎಂದು ತಿಳಿದುಬಂದಿದೆ. ಮಗುವಿನ ಹೆಸರು ತಿಳಿದುಬರಬೇಕಿದೆ. ಇವರು ಪಟನಾ ನಗರದ ಆನಂದಪುರಿ ಏರಿಯಾದವರು ಎಂದು ಪನ್​ಪನ್​ ಪೊಲೀಸ್​ ಠಾಣೆಯ ಎಸ್​ಎಚ್​ಒ ಹೇಳಿದ್ದಾರೆ.
ಇದನ್ನೂ ಓದಿ:ಕೊನೆಗೂ ನಿಜವಾಯ್ತಾ ನೆಟ್ಟಿಗರ ಊಹೆ? ಎಲ್ಲಿ ಹೋಯ್ತು ಡ್ರೋನ್​ ಪ್ರತಾಪ್​ ಫ್ಯಾನ್ಸ್ ಕ್ಲಬ್ ಪೇಜ್​?
ಈ ಸಂಬಂಧ ದೂರು ದಾಖಲಾಗಿದ್ದು, ಮೃತದೇಹಗಳನ್ನು ಮರಣೋತ್ತರ ವರದಿಗೆ ಕಳುಹಿಸಲಾಗಿದೆ.(ಏಜೆನ್ಸೀಸ್​)
ಪಶ್ಚಿಮ ಬಂಗಾಳದಲ್ಲಿ ಬಡಿದಾಡಿಕೊಂಡ ಬಿಜೆಪಿ, ಟಿಎಂಸಿ ಕಾರ್ಯಕರ್ತರು; ವಾಹನಗಳೆಲ್ಲ ಧ್ವಂಸ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × one =
Remember me
