ಶ್ರೀನಗರ: ಜಮ್ಮು-ಕಾಶ್ಮೀರದ ಪೂಂಛ್​ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಸಮೀಪ ಪಾಕಿಸ್ತಾನದ ಸೇನಾ ಪಡೆ ಅಪ್ರಚೋದಿತ ದಾಳಿ ನಡೆಸಿತ್ತು. ಕಳೆದ ಆರು ದಿನಗಳ ಅವಧಿಯಲ್ಲಿ ಪಾಕ್ ಸೇನೆ ನಡೆಸಿದ ಮೂರನೇ ಅಪ್ರಚೋದಿತ ದಾಳಿ ಇದಾಗಿತ್ತು. ಇದಕ್ಕೆ ಶುಕ್ರವಾರ ಬೆಳಗ್ಗೆ ಪ್ರತಿದಾಳಿ ನಡೆಸಿದ ಭಾರತೀಯ ಸೇನೆ, ಸರಿಯಾದ ಉತ್ತರವನ್ನೇ ನೀಡಿತ್ತು.
ಇದನ್ನೂ ಓದಿ:ಎಲ್​ಜಿ ಪಾಲಿಮರ್ಸ್​ಗೆ 50 ಕೋಟಿ ರೂಪಾಯಿ ಮಧ್ಯಂತರ ಜುಲ್ಮಾನೆ
ಮೂಲಗಳ ಪ್ರಕಾರ, ಭಾರತೀಯ ಸೇನೆ ನಡೆಸಿದ ಪ್ರತಿದಾಳಿಗೆ ಪಾಕಿಸ್ತಾನ ಸೇನೆಯ ಕನಿಷ್ಠ 3-4 ಸೈನಿಕರು ಮೃತಪಟ್ಟಿದ್ದಾರೆ. ಅಲ್ಲದೆ, ಐವರು ಗಂಭೀರ ಗಾಯಗೊಂಡಿದ್ದು, ನಾಲ್ಕು ಸೇನಾ ಪೋಸ್ಟ್​ಗಳಿಗೆ ಹಾನಿಯಾಗಿದೆ ಎಂದು ಹೇಳಲಾಗುತ್ತಿದೆ. ಆದರೆ, ಈ ದಾಳಿ ಕುರಿತ ಇನ್ನಷ್ಟು ಮಾಹಿತಿ ಸಿಗಬೇಕಾಗಿದೆ.
ಇದನ್ನೂ ಓದಿ:ರಿಲಯನ್ಸ್​ ಜಿಯೋಕ್ಕೆ ಮತ್ತೊಂದು ಜಾಕ್​ಪಾಟ್​, ಹರಿದು ಬಂತು 11,367 ಕೋಟಿ ರೂ. ಬಂಡವಾಳ
ಇದಕ್ಕೂ ಮುನ್ನ, ಗುರುವಾರ ಪಾಕಿಸ್ತಾನ ಸೇನೆ ಪೂಂಛ್​ ವಲಯದ ಮೂರು ಸೇನಾ ಪೋಸ್ಟ್​ಗಳ ಮೇಲೆ ನಡೆಸಿದ ಶೆಲ್ ದಾಳಿಗೆ ಎಲ್​ಒಸಿಯಲ್ಲಿನ ಗ್ರಾಮಗಳ ಎರಡು ಮನೆಗಳು ಹಾನಿಗೀಡಾಗಿವೆ. ಒಬ್ಬ ನಾಗರಿಕ ಗಾಯಗೊಂಡಿದ್ದ. ಆತನನ್ನು ಕಸಬಾ ಗ್ರಾಮದ ನಿಸಾರ್ ಅಲಿ ಎಂದು ಗುರುತಿಸಲಾಗಿದೆ. ಆತನನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಗೊಳಪಡಿಸಲಾಗಿದೆ ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ. (ಏಜೆನ್ಸೀಸ್)
ಮದ್ಯಕ್ಕೆ ಇನ್ಮುಂದೆ ಆಧಾರ್​ ಕಡ್ಡಾಯ, ವಾರಕ್ಕೆರಡೇ ದಿನ ಖರೀದಿ- ಇದು ಹೈಕೋರ್ಟ್​ ತೀರ್ಪು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
