ಮುಂಬೈ:ಕಳೆದ ಕೆಲವು ವರ್ಷಗಳಲ್ಲಿ ಮಲ್ಟಿಬ್ಯಾಗರ್ ರಿಟರ್ನ್ಸ್ ನೀಡಿದ ಹಲವು ಪೆನ್ನಿ ಸ್ಟಾಕ್‌ಗಳು ಷೇರು ಮಾರುಕಟ್ಟೆಯಲ್ಲಿವೆ. ಇಂತಹ ಒಂದು ಪೆನ್ನಿ ಸ್ಟಾಕ್ ಸ್ವದೇಶಿ ಪಾಲಿಟೆಕ್ಸ್ (swadeshi polytex) ಆಗಿದೆ.
ಈ ಸ್ಟಾಕ್ ಕಳೆದ 5 ವರ್ಷಗಳಲ್ಲಿ ಹೂಡಿಕೆದಾರರಿಗೆ ಶೇಕಡಾ 10000 ಕ್ಕಿಂತ ಹೆಚ್ಚು ಸ್ಫೋಟಕ ಲಾಭವನ್ನು ನೀಡಿದೆ. ಕಳೆದ 7 ದಿನಗಳಿಂದ ಈ ಸ್ಟಾಕ್ ನಿರಂತರವಾಗಿ ಅಪ್ಪರ್ ಸರ್ಕ್ಯೂಟ್‌ ಹಿಟ್​ ಆಗುತ್ತಿದೆ. ಈಗ ತೀವ್ರ ಏರುಗತಿಯ ಮೂಲಕ ಈ ಷೇರಿನ ಬೆಲೆ ಶುಕ್ರವಾರ ದಾಖಲೆಯ ಗರಿಷ್ಠ ಮಟ್ಟವಾದ ರೂ. 340.10 ತಲುಪಿದೆ.
ಜೂನ್ 6, 2023 ರಂದು ಈ ಷೇರಿನ 52 ವಾರಗಳ ಕನಿಷ್ಠ ಬೆಲೆ ರೂ. 35 ಇತ್ತು. ಅಲ್ಲಿಂದ ಇಲ್ಲಿಯವರೆಗೆ ಈ ಷೇರಿನ ಬೆಲೆ 872 ಪ್ರತಿಶತದಷ್ಟು ಹೆಚ್ಚಾಗಿದೆ.
ಸ್ವದೇಶಿ ಪಾಲಿಟೆಕ್ಸ್ ಷೇರಿನ ಬೆಲೆ 2019 ರ ಏಪ್ರಿಲ್‌ನಲ್ಲಿ ರೂ.3.33 ರಷ್ಟಿತ್ತು. ಅಲ್ಲದೆ, ಮೂರು ವರ್ಷಗಳ ಹಿಂದೆ ಅಂದರೆ 2021 ರ ಏಪ್ರಿಲ್‌ನಲ್ಲಿ ರೂ. 5.45 ರಷ್ಟಿತ್ತು. ಈ ಅವಧಿಯಲ್ಲಿ ಹೂಡಿಕೆದಾರರಿಗೆ 5 ಮತ್ತು 3 ವರ್ಷಗಳಲ್ಲಿ ಕ್ರಮವಾಗಿ 10000% ಮತ್ತು 6140% ನಷ್ಟು ಬೃಹತ್​ ಲಾಭವನ್ನು ಈ ಷೇರು ನೀಡಿದೆ.
ಈ ಸ್ಟಾಕ್ ಬೆಲೆ ಡಿಸೆಂಬರ್ 2023 ರಲ್ಲಿ ರೂ. 91.95 ರಷ್ಟಿತ್ತು. ಈ ವರ್ಷದ ಆರಂಭದಿಂದ ಇದುವರೆಗೆ 270% ರಷ್ಟು ಏರಿಕೆಯನ್ನು ಈ ಷೇರು ಬೆಲೆ ಕಂಡಿದೆ. ಈ ಷೇರಿನ ಬೆಲೆ ಕಳೆದ ಒಂದು ವರ್ಷದ ಅವಧಿಯಲ್ಲಿ 747% ಕ್ಕಿಂತ ಹೆಚ್ಚು ಹೆಚ್ಚಾಗಿದೆ.
ಸ್ವದೇಶಿ ಪಾಲಿಟೆಕ್ಸ್ ಷೇರುಗಳು ಈ ವರ್ಷ ಇದುವರೆಗಿನ ಎಲ್ಲ 5 ತಿಂಗಳಲ್ಲೂ ಏರಿಕೆ ಕಂಡಿವೆ. ಮೇ ತಿಂಗಳಲ್ಲಿ ಈ ಸ್ಟಾಕ್ 40 ಪ್ರತಿಶತಕ್ಕಿಂತ ಹೆಚ್ಚು ಏರಿಕೆಯಾದ. ಇದಲ್ಲದೆ, ಏಪ್ರಿಲ್‌ನಲ್ಲಿ ಅಂದಾಜು 68 ಪ್ರತಿಶತದಷ್ಟು, ಮಾರ್ಚ್‌ನಲ್ಲಿ 18 ಪ್ರತಿಶತಕ್ಕಿಂತ ಹೆಚ್ಚು, ಫೆಬ್ರವರಿಯಲ್ಲಿ ಅಂದಾಜು 24 ಪ್ರತಿಶತ ಮತ್ತು 2024 ರ ಜನವರಿಯಲ್ಲಿ 7 ಪ್ರತಿಶತದಷ್ಟು ಹೆಚ್ಚಾಗಿದೆ.
ಸ್ವದೇಶಿ ಪಾಲಿಟೆಕ್ಸ್‌ ಕಂಪನಿಯ ಆಡಳಿತ ಮಂಡಳಿ ಸಭೆಯು 16 ಮೇ 2024 ರಂದು ನಡೆಯಲಿದೆ. ಮಾರ್ಚ್ ತ್ರೈಮಾಸಿಕ ಫಲಿತಾಂಶಗಳ ಹೊರತಾಗಿ ಇತರ ವಿಷಯಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು.
ರಿಯಲ್ ಎಸ್ಟೇಟ್‌ ವಹಿವಾಟು, ಮಾಲೀಕತ್ವ, ಖರೀದಿ, ಮಾರಾಟ, ಗುತ್ತಿಗೆ, ಉಪ-ಗುತ್ತಿಗೆ, ಬಾಡಿಗೆ ಮತ್ತು ಅಭಿವೃದ್ಧಿ ಮತ್ತು ಇತರ ಸಂಬಂಧಿತ ಚಟುವಟಿಕೆಗಳಲ್ಲಿ ಈ ಕಂಪನಿ ತೊಡಗಿಸಿಕೊಂಡಿದೆ.

ಬಿಜೆಪಿ ಸಂಸದ ಬ್ರಿಜ್ ಭೂಷಣ್ ಸಿಂಗ್​ಗೆ ಮತ್ತೊಂದು ಆಘಾತ: ಲೈಂಗಿಕ ಕಿರುಕುಳ ಪ್ರಕರಣದಲ್ಲಿ ಆರೋಪ ರೂಪಿಸಲು ನ್ಯಾಯಾಲಯ ಆದೇಶ

ಹೂಡಿಕೆದಾರರನ್ನು ಶ್ರೀಮಂತಗೊಳಿಸುತ್ತಿವೆ ಎನರ್ಜಿ ಷೇರುಗಳು: ನಂಬರ್​ ಒನ್ ಕಂಪನಿಯ ಸ್ಟಾಕ್​ನಲ್ಲಿ 1 ಲಕ್ಷವಾಯ್ತು 16 ಕೋಟಿ ರೂಪಾಯಿ

ಷೇರು ಖರೀದಿಸಲು ಇದು ಸೂಕ್ತ ಸಮಯವಲ್ಲ; ಇನ್ನಷ್ಟು ಕುಸಿತಕ್ಕಾಗಿ ಕಾಯಿರಿ: ಮಾರುಕಟ್ಟೆ ತಜ್ಞರು ಹೀಗೇಕೆ ಹೇಳುತ್ತಿದ್ದಾರೆ?

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:5 × three =
Remember me
