ಜಮ್ಮು ಮತ್ತು ಕಾಶ್ಮೀರ:ಶುಕ್ರವಾರ (ಆ.04) ರಾತ್ರಿ ಜಮ್ಮು ಮತ್ತು ಕಾಶ್ಮೀರದ ಕುಲ್ಗಾಮ್ ಜಿಲ್ಲೆಯಲ್ಲಿ ಭಾರತೀಯ ಸೇನೆಯ ಮೂವರು ಸೈನಿಕರು ಹುತಾತ್ಮರಾಗಿದ್ದಾರೆ. ಈ ಘಟನೆ ನಡೆದದ್ದು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದು ಮಾಡುವ ಆಟಿಕಲ್ 370ಯನ್ನು ರದ್ದು ಮಾಡಿದ 4ನೇ ವಾರ್ಷಿಕೋತ್ಸವದ ಹಿಂದಿನ ದಿನದಂದು.
ದಕ್ಷಿಣ ಕಾಶ್ಮೀರದ ಕುಲ್ಗಾಮ್ ಜಿಲ್ಲೆಯ ಮೇಲ್ಭಾಗದಲ್ಲಿರುವ ಹಲನ್​ ಭಾಗದಲ್ಲಿ ಭಯೋತ್ಪಾದಕರ ಜತೆ ಸೈನಿಕರ ಮುಖಾಮುಖಿ ನಡೆದಿದ್ದು ಈ ಸಂದರ್ಭ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಹಲನ್ ಅರಣ್ಯ ಪ್ರದೇಶದಲ್ಲಿ ಉಗ್ರರು ಅಡಗಿರುವ ಕುರಿತು ಭದ್ರತಾ ಸಿಬ್ಬಂದಿಗೆ ನಿಖರ ಮಾಹಿತಿ ಲಭಿಸಿದ್ದು ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆ ನಡೆಸಿದಾಗ ಗುಂಡಿನ ಚಕಮಕಿ ನಡೆದಿದೆ. ಉಗ್ರರು ಏಕಾಏಕಿ ದಾಳಿ ನಡೆಸಿದ ಪರಿಣಾಮ ಮೂವರು ಯೋಧರು ಹುತಾತ್ಮರಾಗಿದ್ದಾರೆ.
ಸೇನೆ ಹಾಗೂ ಜಮ್ಮು-ಕಾಶ್ಮೀರ ಪೊಲೀಸರು ಜಂಟಿಯಾಗಿ ಈ ಕಾರ್ಯಾಚರಣೆ ಆರಂಭಿಸಿದ್ದು, ತಡರಾತ್ರಿವರೆಗೆ ಶೋಧ ನಡೆದಿದೆ. ತಡರಾತ್ರಿ ಸೇನೆ ಹಾಗೂ ಉಗ್ರರ ಮಧ್ಯೆ ಗುಂಡಿನ ಚಕಮಕಿ ಆರಂಭವಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
Operation Halan#KulgamOn specific inputs regarding presence of terrorists on higher reaches of Halan in Kulgam, operations launched by Security Forces on 04 Aug 23. In exchange of firing with terrorists, three personnel sustained injuries and later succumbed.Search operations…pic.twitter.com/NJ3DZa2OpK— Chinar Corps🍁 – Indian Army (@ChinarcorpsIA)August 4, 2023
Operation Halan#KulgamOn specific inputs regarding presence of terrorists on higher reaches of Halan in Kulgam, operations launched by Security Forces on 04 Aug 23. In exchange of firing with terrorists, three personnel sustained injuries and later succumbed.Search operations…pic.twitter.com/NJ3DZa2OpK
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × 2 =
Remember me
