ನಳಂದ:ಮೂರು ವರ್ಷದ ಮಗುವೊಂದು 100 ಅಡಿ ಆಳದ ತೆರೆದ ಬೋರ್‌ವೆಲ್‌ಗೆ ಬಿದ್ದಿರುವ ಘಟನೆ ಬಿಹಾರದ ನಳಂದದ ಕುಲ್ ಗ್ರಾಮದಲ್ಲಿ ನಡೆದಿದೆ.
ಇದನ್ನೂ ಓದಿ:ಕೆಲಸದ ಸಮಯದಲ್ಲಿ ಫೋನ್​ ಬಳಸಿದ ಯುವತಿ: ವಜಾ ಮಾಡಿ ಮನೆಗೆ ಕಳುಹಿಸಿದ ಮಾಲೀಕ
ಮಗುವನ್ನು ಶಿವಂ ಕುಮಾರ್ ಎಂದು ಗುರುತಿಸಲಾಗಿದ್ದು, ಮಗುವಿನ ತಾಯಿ ಹೊಲದ ಕೆಲಸಕ್ಕೆ ಬಂದಿದ್ದ ವೇಳೆ ಮಗವಿನ ಜತೆಗೆ ಬಂದಿದ್ದಳು. ಈ ಸಮಯದಲ್ಲಿ ಮಗು ತೆರೆದ ಬೋರ್‌ವೆಲ್‌ಗೆ ಬಿದ್ದು ಈ ದುರಂತ ಘಟನೆ ಸಂಭವಿಸಿದೆ.
#WATCH| Rescue operation underway to rescue a child who fell into a borewell in Kul village of Nalanda, Bihar.
Police and district administration officials are present on the spot.pic.twitter.com/7kVAmebCWd
— ANI (@ANI)July 23, 2023
ಸುದ್ದಿ ತಿಳಿದು ಸ್ಥಳಕ್ಕಾಗಿಮಿಸಿದ NDRF ಮತ್ತು ಇತರ ರಕ್ಷಣಾ ತಂಡಗಳು ಮಗುವನ್ನು ರಕ್ಷಿಸಲು ಮುಂದಾಗಿದ್ದು, 100 ಅಡಿ ಆಳ ತೆರೆದ ಬೋರ್‌ವೆಲ್‌ಗೆ ಬಿದ್ದು ಸುಮಾರು 40-50 ಅಡಿ ಆಳದಲ್ಲಿ ಸಿಲುಕಿಕೊಂಡಿದ್ದನ್ನು ಪತ್ತೆ ಹಚ್ಚಿವೆ. ಮಗುವಿಗೆ ಪೈಪ್​ ಮೂಲಕ ಆಮ್ಲಜನಕ ಪೂರೈಕೆ ಮಾಡುತ್ತಿದ್ದು, ಮಗು ಇನ್ನೂ ಜೀವಂತವಾಗಿದ್ದು ಆತನ ಧ್ವನಿಯನ್ನು ಕೇಳುತ್ತಿದೆ. ರೈತನೊಬ್ಬರು ಬೋರ್‌ವೆಲ್ ಕೊರೆಸಿ ಅದನ್ನು ಮುಚ್ಚದೇ ಹಾಗೆಯೇ ಬಿಟ್ಟಿದ್ದರಿಂದ ಈ ದುರಂತ ಘಟನೆ ಸಂಭವಿಸಿದೆ ಎಂದು ಹೇಳಲಾಗಿದ್ದು, ಜೆಸಿಬಿ ಮೂಲಕ ಕಾರ್ಯಾಚರಣೆ ನಡೆಸಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್​)
Sign in to your account
Please enter an answer in digits:5 − 4 =
Remember me
