ಮುಂಬೈ:ಅತ್ಯಾಚಾರ ಪ್ರಕರಣದ ಆರೋಪದಲ್ಲಿ ಜೈಲು ಸೇರಿ, ಪೆರೋಲ್​ ಮೇಲೆ ಹೊರಬಂದಿದ್ದ ಅಪರಾಧಿಯೊಬ್ಬ ರೇಪ್​ ಮತ್ತು ಮರ್ಡರ್​ ಪ್ರಕರಣದಲ್ಲಿ ಮತ್ತೊಮ್ಮೆ ಜೈಲು ಸೇರಿದ್ದಾನೆ. ಮೂರು ವರ್ಷದ ಮಗುವಿನ ಮೇಲೆ ಆತ ರೇಪ್​ ಮಾಡಿದ್ದಾಗಿ ವರದಿಯಾಗಿದೆ.
ಇದನ್ನೂ ಓದಿ:ಪಾಕ್​ ಮಹಿಳೆ ಭಾರತದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ! ತನಿಖೆಯಿಂದ ಬಯಲಾಯಿತು ಮಹಿಳೆಯ ನಿಜ ಬಣ್ಣ
ಮಹಾರಾಷ್ಟ್ರದ ರಾಯಗಡ ಜಿಲ್ಲೆಯಲ್ಲಿ ಇಂತದ್ದೊಂದು ಘಟನೆ ನಡೆದಿದೆ. ಆದೇಶ್​ ಪಾಟೀಲ್​ ಹೆಸರಿನ ವ್ಯಕ್ತಿ ಬಂಧಿತ ಆರೋಪಿ. ಈತ ಅತ್ಯಾಚಾರ ಪ್ರಕರಣವೊಂದರಲ್ಲಿ ಬಂಧಿತನಾಗಿದ್ದ. ಕಳೆದ 10 ದಿನಗಳ ಹಿಂದಷ್ಟೇ ಈತನಿಗೆ ಪೆರೋಲ್​ ಸಿಕ್ಕಿದ್ದು, ಜೈಲಿನಿಂದ ಹೊರ ಕಳುಹಿಸಲಾಗಿತ್ತು.
ಡಿಸೆಂಬರ್​ 30ರಂದು ಜಿಲ್ಲೆಯ ಗ್ರಾಮವೊಂದರಲ್ಲಿ ಕುಟುಂಬವೊಂದು ತಮ್ಮ 3 ವರ್ಷದ ಮಗಳೊಂದಿಗೆ ಗುಡಿಸಲಿನಲ್ಲಿ ಮಲಗಿತ್ತು. ಭದ್ರವಾದ ಬಾಗಿಲು ಇಲ್ಲದ ಗುಡಿಸಲಿನಲ್ಲಿ ಮಲಗಿದ್ದ ಹೆಣ್ಣು ಮಗುವನ್ನು ಆದೇಶ್​ ಪಾಟೀಲ್​ ಎತ್ತಿಕೊಂಡು ಹೋಗಿದ್ದಾನೆ. ಗ್ರಾಮದ ಶಾಲೆಯ ಹಿಂದಿದ್ದ ಪೊದೆಗಳಲ್ಲಿ ಮಗುವಿನ ಮೇಲೆ ಅತ್ಯಾಚಾರವೆಸಗಿದ್ದಾನೆ. ನಂತರ ಮಗುವನ್ನು ಕೊಲೆ ಮಾಡಿದ್ದಾನೆ. ಮಗುವನ್ನು ವಾಪಾಸು ತಂದು ಗುಡಿಸಲಿನಲ್ಲಿ ಮಲಗಿಸಿದ್ದಾನೆ. ಈ ಸಮಯದಲ್ಲಿ ಮಗುವಿನ ಅಜ್ಜಿ ಎಚ್ಚರಗೊಂಡಿದ್ದು, ಜೋರಾಗಿ ಕೂಗಿಕೊಂಡಿದ್ದಾರೆ. ಆದರೆ ಆದೇಶ್ ಅಲ್ಲಿಂದ ಪರಾರಿಯಾಗಿದ್ದಾನೆ.
ಇದನ್ನೂ ಓದಿ:ಸಿವಿಲ್ ಆಸ್ಪತ್ರೆಯಲ್ಲೇ ಮಹಿಳೆಯ ಮರ್ಡರ್! ಪ್ರೀತಿಸಿ ಮೋಸ ಮಾಡಿದವಳ ಜೀವವನ್ನೇ ತೆಗೆದ ಪಾಗಲ್​ ಪ್ರೇಮಿ!
ಗುರುವಾರದಂದು ಆದೇಶ್​ನ ವಿರುದ್ಧ ಪೊಲೀಸ್​ ಪ್ರಕರಣ ದಾಖಲಿಸಲಾಗಿದ್ದು, ಸ್ಥಳೀಯ ಪೊಲೀಸರು ಆತನನ್ನು ಹುಡುಕಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅತ್ಯಾಚಾರ, ಕೊಲೆ, ಪೋಸ್ಕೋ ಪ್ರಕರಣಗಳನ್ನು ದಾಖಲಿಸಿಕೊಳ್ಳಲಾಗಿದೆ. ಅದಷ್ಟೇ ಅಲ್ಲದೆ ಆತನ ವಿರುದ್ಧ ದರೋಡೆ, ಬೆದರಿಕೆ, ಕಳ್ಳತನ ಪ್ರಕರಣಗಳೂ ಇರುವುದಾಗಿ ತಿಳಿಸಲಾಗಿದೆ. (ಏಜೆನ್ಸೀಸ್​)
ಪ್ರವಾಸಿ ಮಹಿಳೆಯನ್ನೇ ರೇಪ್​ ಮಾಡಿದ ಆಟೋ ಡ್ರೈವರ್​! ಪ್ರಕರಣ ದಾಖಲಾಗಿ 12 ಗಂಟೆಗಳಲ್ಲೇ ಆರೋಪಿ ಸೆರೆ

ಹೆಂಡತಿಯ ಸೀಮಂತಕ್ಕೆ ಸಿದ್ಧತೆ ನಡೆಸುತ್ತಿದ್ದ ಗಂಡ ರಸ್ತೆಯಲ್ಲೇ ಬಲಿಯಾದ! ಮಗನ ಜತೆ ತಾಯಿಯೂ ದುರ್ಮರಣ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
