ನವದೆಹಲಿ:ವಲಸೆ ಕಾರ್ಮಿಕರನ್ನು ಅವರವರ ಊರುಗಳಿಗೆ ತಲುಪಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಈ ತಿಂಗಳ ಆರಂಭದಲ್ಲಿ ಶುರು ಮಾಡಿರುವ ಶ್ರಮಿಕ್​ ರೈಲು ಹೆರಿಗೆ ವಾರ್ಡ್​ ಆಗಿ ಪರಿಣಮಿಸುತ್ತಿದೆ.
ಕಾರಣ ಏನೆಂದರೆ ಇದಾಗಲೇ 30 ಮಕ್ಕಳು ಈ ರೈಲಿನಲ್ಲಿ ಜನಿಸಿದ್ದಾರೆ. ಮೇ 1ರಿಂದ ಇಲ್ಲಿಯವರೆಗೆ 30 ಮಂದಿಗೆ ಹೆರಿಗೆಯಾಗಿದೆ. ತಮ್ಮೂರಿಗೆ ಗರ್ಭಿಣಿಯರು ತಲುಪುವ ಮೊದಲೇ ರೈಲಿನಲ್ಲಿಯೇ ಹೆರಿಗೆ ಆಗುತ್ತಿದೆ. ವಲಸೆ ಕಾರ್ಮಿಕರಲ್ಲಿ ಜನಸಂಖ್ಯೆ ನಿಯಂತ್ರಣದ ಬಗ್ಗೆ ಸರಿಯಾದ ತಿಳಿವಳಿಕೆ ಇರದ ಹಿನ್ನೆಲೆಯಲ್ಲಿ, ಮಹಿಳೆಯರು ಮೇಲಿಂದ ಮೇಲೆ ಗರ್ಭವತಿಯಾಗುತ್ತಿರುವುದು ಇದಕ್ಕೆ ಕಾರಣ ಎಂದಿದ್ದಾರೆ ರೈಲ್ವೆ ಅಧಿಕಾರಿಗಳು.
ಇದನ್ನೂ ಓದಿ:ಈ ಪುಟಾಣಿಗೆ ಇನ್​ಸ್ಟಾಗ್ರಾಮ್​ನಲ್ಲಿ 13 ಲಕ್ಷ ಫಾಲೋವರ್ಸ್​: ಅಂಥದ್ದೇನು ವಿಶೇಷ ಅಂತೀರಾ?
ಲಾಕ್​ಡೌನ್​ ಸಮಯದಲ್ಲಿ ಅದಾಗಲೇ ಅನೇಕರು ತುಂಬು ಗರ್ಭಿಣಿಯರಾಗಿದ್ದರು. ಇದೇ ಸಮಯದಲ್ಲಿ ಅವರನ್ನು ರೈಲುಗಳ ಮೂಲಕ ಅವರವರ ಊರುಗಳಿಗೆ ಕಳುಹಿಸಲಾಗಿತ್ತು. ಹೆರಿಗೆ ಸಮಯ ಹತ್ತಿರ ಬಂದ ಹಿನ್ನೆಲೆಯಲ್ಲಿ ರೈಲಿನಲ್ಲಿಯೇ ಪ್ರಸವವಾಗಿದೆ.
ಸುಮಾರು ಎರಡು ತಿಂಗಳಿಂನಿಂದ ಲಾಕ್​ಡೌನ್​ ಹಿನ್ನೆಲೆಯಲ್ಲಿ ಸರಿಯಾದ ಆಹಾರ, ನೀರು ಇರದ ಕಾರಣ ಹಾಗೂ ಗರ್ಭಿಣಿಯರು ಅತೀವ ಮಾನಸಿಕ ಗೊಂದಲಕ್ಕೆ ಈಡಾಗಿರುವ ಹಿನ್ನೆಲೆಯಲ್ಲಿ ಅನೇಕ ಮಂದಿ ಹೆರಿಗೆಯ ವೇಳೆ ಅಪಾರ ನೋವು, ತೊಂದರೆ ಅನುಭವಿಸಿದ್ದಾರೆ ಎಂದು ರೈಲ್ವೇ ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಮುಸ್ಲಿಮೇತರ ವೈದ್ಯರ ಮೇಲೆ ಹಲ್ಲೆ ಮಾಡಿ ಎಂದು ಭಾಷಣ- ವೀಡಿಯೋ ಬ್ಲಾಕ್​ ಮಾಡಿ ಎಂದ ಕೋರ್ಟ್​
ಈ ನಡುವೆ, ಮೇ 1 ರಿಂದ ಇಲ್ಲಿಯವರೆಗೆ ಭಾರತೀಯ ರೈಲ್ವೆ ಇಲಾಖೆ ಸುಮಾರು 37 ಲಕ್ಷ ವಲಸೆ ಕಾರ್ಮಿಕರನ್ನು 2,818 ಶ್ರಮಿಕ ವಿಶೇಷ ರೈಲುಗಳಲ್ಲಿ ಅವರವರ ಊರುಗಳಿಗೆ ತಲುಪಿಸಿದೆ ಎಂದು ರೈಲ್ವೆ ಸಚಿವಾಲಯ ರವಿವಾರ ತಿಳಿಸಿದೆ.
ಫೇಸ್​ಬುಕ್​ನ ವಿಭಿನ್ನ ಪ್ರೇಮ್​ ಕಹಾನಿ! 62ರ ಅಜ್ಜಿಗೆ ಮಿಸ್​ ಆಗಿ ಸಿಕ್ಕ 26ರ ಯುವಕ, ಮುಂದೆ?

ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
Sign in to your account
Please enter an answer in digits:three × four =
Remember me
