ಕುಡಿಯುವ ನೀರಿನ ಟ್ಯಾಂಕ್​ನಲ್ಲಿ 30 ಕೋತಿಗಳ ಶವ ಪತ್ತೆಯಾಗಿದ್ದು, ಮಂಗಗಳ ಮಾರಣಹೋಮಕ್ಕೆ ಕೆರಳಿದ ಭಾರತ ರಾಷ್ಟ್ರ ಸಮಿತಿ (ಬಿಆರ್‌ಎಸ್) ಮುಖಂಡ ಮತ್ತು ತೆಲಂಗಾಣ ಮಾಜಿ ಸಚಿವ ಕೆ.ಟಿ. ರಾಮರಾವ್ (ಕೆಟಿಆರ್) ನಲ್ಗೊಂಡಾದಲ್ಲಿನ ಟ್ಯಾಂಕ್‌ನಲ್ಲಿ ಸತ್ತ ಕೋತಿಗಳ ಸಾವಿಗೆ ಕಾರಣವೇನು? ಎಂದು ರೇವಂತ್ ರೆಡ್ಡಿ ನೇತೃತ್ವದ ತೆಲಂಗಾಣ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಇದನ್ನೂ ಓದಿ:HD Kumaraswamy; ಗೆದ್ದರೇ ಕೇಂದ್ರ ಸಚಿವರಾಗುವ ಭಾಗ್ಯ ಇದೆಯಂತೆ ಹೌದಾ ಸರ್..?
ಕಾಂಗ್ರೆಸ್ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಕೆಟಿಆರ್, “ಕಾಂಗ್ರೆಸ್ ಸರ್ಕಾರ ಸಾರ್ವಜನಿಕರ ಆರೋಗ್ಯಕ್ಕಿಂತ ರಾಜಕೀಯಕ್ಕೆ ಹೆಚ್ಚು ಆದ್ಯತೆ ನೀಡಿದ್ದರಿಂದ ಆಡಳಿತವು ತೀವ್ರ ಹದಗೆಟ್ಟಿದೆ. ತೆಲಂಗಾಣ ಮುನ್ಸಿಪಲ್ ಇಲಾಖೆಯಲ್ಲಿ ಎಂತಹ ನಾಚಿಕೆಗೇಡಿನ ಸ್ಥಿತಿ ಉಂಟಾಗಿದೆ. ಅನುಸರಿಸಬೇಕಾದ ಪ್ರಮಾಣಿತ ಪ್ರೋಟೋಕಾಲ್‌ಗಳಾದ ನಿಯತಕಾಲಿಕ ಶುಚಿಗೊಳಿಸುವಿಕೆ ಮತ್ತು ದಿನನಿತ್ಯದ ನಿರ್ವಹಣೆಯನ್ನು ಸಹ ಆಡಳಿತ ನಿರ್ಲಕ್ಷಿಸಿದೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದರು.
What a shameful state of affairs in the Telangana Municipal department
Periodical cleaning & routine Maintenance which are standard protocols to be followed are being neglected
Governance has been in shambles because the Congress government prioritised politics over public…https://t.co/Ooz7RnFOVE
— KTR (@KTRBRS)April 3, 2024

ನಯಿನಿ ಅನುರಾಗ್ ರೆಡ್ಡಿ ಎಂಬ ಬಳಕೆದಾರರ ಟ್ವೀಟ್ ಅನ್ನು ಕೆಟಿಆರ್ ಹಂಚಿಕೊಂಡು, ನೇರ ಆರೋಪ ಎಸಗಿದ್ದಾರೆ. ವರದಿಗಳ ಪ್ರಕಾರ, ಸತ್ತ ಕೋತಿಗಳಿಂದ ತುಂಬಿದ್ದ ನೀರನ್ನೇ ಕಳೆದ ಕೆಲವು ದಿನಗಳಿಂದ ಯಾವುದೇ ತಪಾಸಣೆಯಿಲ್ಲದೆ ಜನರಿಗೆ ಕುಡಿಯಲು ಸರಬರಾಜು ಮಾಡಲಾಗಿದೆ. ನಿರ್ಲಕ್ಷ್ಯ ತೋರಿರುವ ಪುರಸಭೆ ಅಧಿಕಾರಿಗಳು ಟ್ಯಾಂಕ್​​​ನ ಓಪನ್ ಮಾಡಿದ್ದೇ ಮಂಗಗಳ ಸಾವಿಗೆ ಕಾರಣವಾಗಿದೆ ಎಂದು ಸಾಮಾಜಿಕ ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ.
ಇದನ್ನೂ ಓದಿ:ಬೆಂಗಳೂರಿನಲ್ಲಿ ಹೆಚ್ಚುತ್ತಿದೆ ಕಾಲರಾ ರೋಗ; ಸಿಲಿಕಾನ್​ ಸಿಟಿ ಜನರೇ ಎಚ್ಚರ
ವರದಿಗಳ ಪ್ರಕಾರ, ನಂದಿಕೊಂಡ ಪುರಸಭೆಯ ಅಧಿಕಾರಿಗಳು ಕಳೆದ ಕೆಲವು ದಿನಗಳಿಂದ ನಿವಾಸಿಗಳಿಗೆ ಓವರ್‌ಹೆಡ್ ಟ್ಯಾಂಕ್‌ನಿಂದ ನೀರು ಒದಗಿಸುತ್ತಿದ್ದು, ಅದರೊಳಗೆ ಮಂಗಗಳ ಶವ ತೇಲುತ್ತಿರುವುದು ಇತ್ತೀಚೆಗೆ ಪತ್ತೆಯಾಗಿದೆ,(ಏಜೆನ್ಸೀಸ್).
2021ರಲ್ಲಿ ಮುಂಬೈ ಇಂಡಿಯನ್ಸ್​ ಬಿಟ್ಟಿದ್ದೂ ಇದೇ ಕಾರಣಕ್ಕೆ… ಮುಖಕ್ಕೆ ಹೊಡದಂಗೆ ಹೇಳಿದ್ರು ರವಿಶಾಸ್ತ್ರಿ

26 ವರ್ಷಕ್ಕೆ 22 ಮಗುವಿನ ತಾಯಿ ಈ ಯುವತಿ! 105 ಮಕ್ಕಳನ್ನು ಪಡೆಯುವುದೇ ಈಕೆಯ ಗುರಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve − 4 =
Remember me
