ನವದೆಹಲಿ:ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದ್ದು, ನಾಲ್ಕು ಅಥವಾ ಐದು ಜನರು ಕುಳಿತು ಪ್ರಯಾಣಿಸಬಹುದಾದ ಕಾರಿನಲ್ಲಿ ಲೋಡ್ ಮಟ್ಟವನ್ನು ಮೀರಿ ಚಲಿಸುತ್ತಿರುವುದನ್ನು ಗಮನಿಸಿದ ಸ್ಥಳೀಯರು, ತಕ್ಷಣವೇ ಕಾರನ್ನು ತಡೆದು ಡಿಕ್ಕಿ ಓಪನ್ ಮಾಡಿದಾಗ ಕಂಡುಬಂದ ದೃಶ್ಯ ನೋಡಿ ಬೆಚ್ಚಿಬಿದ್ದ ಭಯಾನಕ ಘಟನೆ ದೆಹಲಿಯ ಸಿವಿಲ್ ಲೈನ್ಸ್ ಪ್ರದೇಶದಲ್ಲಿ ವರದಿಯಾಗಿದೆ.
ಇದನ್ನೂ ಓದಿ:ಸೀರೆಯುಟ್ಟು ಜಿಮ್​​ನಲ್ಲಿ ಪ್ರೀ ವೆಡ್ಡಿಂಗ್ ಫೋಟೋಶೂಟ್ ವರ್ಕೌಟ್‌; ವಿಡಿಯೋ ವೈರಲ್
ಮಾರುತಿ ಸುಜುಕಿ ಸ್ವಿಫ್ಟ್ ಡಿಜೈರ್ ಕಾರಿನೊಳಗೆ ಬರೋಬ್ಬರಿ 30ಕ್ಕೂ ಹೆಚ್ಚು ಮೇಕೆಗಳು ಮತ್ತು ಕುರಿಗಳನ್ನು ಅಕ್ರಮವಾಗಿ ಸಾಗಿಸುತ್ತಿದ್ದವರನ್ನು ಸೆರೆಹಿಡಿದ ಸ್ಥಳೀಯರು ಚಾಲಕನನ್ನು ಹಿಗ್ಗಾಮುಗ್ಗಾ ಜಾಡಿಸಿದ ವಿಡಿಯೋ ಸದ್ಯ ಸೋಷಿಯಲ್ ಮೀಡಿಯಾದಲ್ಲಿ ವ್ಯಾಪಕವಾಗಿ ಹರಿದಾಡಿದೆ. ಈ ದೃಶ್ಯ ನೋಡಿದ ನೆಟ್ಟಿಗರು ಇಂಥ ಕ್ರೂರಿಗಳಿಗೆ ಎಂತಹ ಕಠಿಣ ಶಿಕ್ಷೆ ಕೊಟ್ಟರು ಸಾಲದು, ಇವರನ್ನು ಬಿಡಬೇಡಿ ಎಂದು ಕಮೆಂಟ್ ಮೂಲಕ ಮನವಿ ಮಾಡಿದ್ದಾರೆ.
दिल्ली थाना सिविल लाइन्स में एक पीसीआर कॉल प्राप्त हुई थी जिसमें बताया गया था कि ग्रे रंग की स्विफ्ट कार में बड़ी मात्रा में बकरियां रखी गई हैंपुलिस ने जांच की स्विफ्ट कार में 30 बकरियां और एक भेड़ रखी गई थी,कार को जानवरों सहित डीएसपीसीए, तीस हजारी में आगे की आवश्यक कार्रवाई के…pic.twitter.com/R2yxPdMRHI
— Lavely Bakshi (@lavelybakshi)April 24, 2024

ಬಲವಂತವಾಗಿ ಕಾರಿನೊಳಗೆ 30ಕ್ಕೂ ಹೆಚ್ಚು ಮೇಕೆ ಮತ್ತು ಕುರಿಗಳನ್ನು ತುಂಬಿ ಬಚ್ಚಿಟ್ಟಿರುವ ಬಗ್ಗೆ ದೆಹಲಿ ಪೊಲೀಸರಿಗೆ ಮಾಹಿತಿ ಲಭಿಸಿದೆ ಎಂದು ವರದಿಗಳು ಹೇಳಿವೆ. ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೇಕೆ, ಕುರಿಗಳನ್ನು ಕಾರಿನಿಂದ ರಕ್ಷಿಸಿದ್ದು, ಕಾರಿನೊಳಗೆ ಪ್ರಾಣಿಗಳನ್ನು ಹೇಗೆ ತುಂಬಿಸಲಾಯಿತು? ಎಂಬ ಭಯಾನಕ ಸಂಗತಿಯನ್ನು ತನಿಖೆ ಮಾಡುತ್ತಿದ್ದಾರೆ.
ಇದನ್ನೂ ಓದಿ:ವಿಶ್ವದ ಅತಿವೇಗದ ಓಟಗಾರ ಉಸೇನ್​ ಬೋಲ್ಟ್​ ಟಿ20 ವಿಶ್ವಕಪ್​ಗೆ ಪ್ರಚಾರ ರಾಯಭಾರಿ
ಸದ್ಯ ಪೊಲೀಸರು ಮೇಕೆಗಳು ಮತ್ತು ಕಾರನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದು, ಈ ಬಗ್ಗೆ ತನಿಖೆ ಆರಂಭಿಸಿದ್ದಾರೆ ಎಂದು ವರದಿಯಾಗಿದೆ. ಪೊಲೀಸರು ಪ್ರಾಣಿಗಳನ್ನು ಕಾರಿನೊಂದಿಗೆ ಡಿಎಸ್‌ಪಿಸಿಎ, ಟಿಸ್ ಹಜಾರಿಯಲ್ಲಿ ಠೇವಣಿ ಮಾಡಿದ್ದು, ಹೆಚ್ಚಿನ ಮಾಹಿತಿಗಾಗಿ ಈ ವಿಷಯದ ಕುರಿತು ಮುಂದಿನ ಅಗತ್ಯ ಕ್ರಮ ಜರುಗಿಸಿದ್ದಾರೆ,(ಏಜೆನ್ಸೀಸ್).
ಆಕೆಗೆ ತವರು ಮನೆ ಜವಾಬ್ದಾರಿ ಇದೆ! ತಂಗಿಗೆ ಹೆಚ್ಚು ಲೀಡ್ ಕೊಟ್ಟು ಗೆಲ್ಲಿಸಿ: ಶಾಸಕ ಕಾಶಪ್ಪನವರ್ ಮನವಿ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:16 + two =
Remember me
