ನವದೆಹಲಿ:ಐಡಿಎಫ್​ಸಿ ಫಸ್ಟ್ ಬ್ಯಾಂಕ್​ನ ಆಡಳಿತ ನಿರ್ದೇಶಕ ಮತ್ತು ಸಿಇಒ ವಿ. ವೈದ್ಯನಾಥನ್ ತಮ್ಮ ಮಾಜಿ ಶಿಕ್ಷಕಿಗೆ 30 ಲಕ್ಷ ರೂಪಾಯಿ ಮೌಲ್ಯದ ಷೇರುಗಳನ್ನು ನೀಡಿದ್ದಾರೆ. ಬಾಲ್ಯದಲ್ಲಿ ನೆರವಾದ ಶಿಕ್ಷಕಿ ಗುರುದಯಾಳ್ ಸರೂಪ್ ಸೈನಿ ಅವರಿಗೆ ವೈದ್ಯನಾಥನ್ ಕೃತಜ್ಞತಾಪೂರ್ವಕವಾಗಿ ಒಂದು ಲಕ್ಷ ಷೇರುಗಳನ್ನು ವರ್ಗಾಯಿಸಿದ್ದಾರೆ.
ಅವರ ತೆರಿಗೆಗಳನ್ನೂ ತಾವೇ ಕಟ್ಟುವುದಾಗಿ ವೈದ್ಯನಾಥನ್ ಸ್ಪಷ್ಟಪಡಿಸಿದ್ದಾರೆ. ವೈಯಕ್ತಿಕ ಪಾಲಿನ ಷೇರುಗಳಲ್ಲಿ ಒಂದು ಲಕ್ಷ ಷೇರುಗಳನ್ನು ವೈದ್ಯನಾಥನ್ ಕೊಡುಗೆಯಾಗಿ ಕೊಟ್ಟಿದ್ದಾರೆ ಎಂದು ಬ್ಯಾಂಕ್ ವಿವರಿಸಿದೆ. ವೈದ್ಯನಾಥನ್ ಬ್ಯಾಂಕೇತರ ಹಣಕಾಸು ಸಂಸ್ಥೆ ಕ್ಯಾಪಿಟಲ್ ಫಸ್ಟ್​ನ ಸಂಸ್ಥಾಪಕರು. 2018 ಡಿಸೆಂಬರ್​ನಲ್ಲಿ ಅದು ಐಡಿಎಫ್​ಸಿ ಬ್ಯಾಂಕ್​ನೊಂದಿಗೆ ವಿಲೀನವಾಗಿ ಐಡಿಎಫ್​ಸಿ ಫಸ್ಟ್ ಬ್ಯಾಂಕ್ ರಚನೆಯಾಗಿತ್ತು. 2018ರಲ್ಲಿ, ಕ್ಯಾಪಿಟಲ್ ಫಸ್ಟ್​ನ ಅಧ್ಯಕ್ಷರಾಗಿದ್ದಾಗ ವೈದ್ಯನಾಥನ್ 20 ಕೋಟಿ ರೂಪಾಯಿಗೂ ಹೆಚ್ಚು ಮೊತ್ತದ ಷೇರುಗಳನ್ನು ತಮ್ಮ ಚಾಲಕರು, ಮೂವರು ಮನೆಕೆಲಸದವರು, ಕೆಲವು ಸಹೋದ್ಯೋಗಿಗಳು ಮತ್ತು ಕುಟುಂಬ ಸದಸ್ಯರಿಗೆ ಕೊಡುಗೆಯಾಗಿ ನೀಡಿದ್ದರು.
ಜನವರಿಯಲ್ಲಿ ಸಿಗಲಿದೆ ಕರೊನಾ ಲಸಿಕೆ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:9 − eight =
Remember me
