ಪ್ರಯಾಗ್‌ರಾಜ್: ದೆಹಲಿಯ ನಿಜಾಮುದ್ದೀನ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಬಂದಿರುವ ತಬ್ಲಿಘಿಗಳು ಸೇರಿ ಒಟ್ಟು 30 ಜನರನ್ನು ಟ್ರಾವೆಲ್ ಹಿಸ್ಟರಿ ಮುಚ್ಚಿಟ್ಟಿರುವ ಆರೋಪದಡಿಯಲ್ಲಿ ಬಂಧಿಸಿ ಜೈಲಿಗೆ ಕಳಿಸಲಾಗಿದೆ.
ಉತ್ತರ ಪ್ರದೇಶದ ಪ್ರಯಾಗ್‌ರಾಜ್‌ನ ಎರಡು ಮಸೀದಿಗಳಲ್ಲಿ ಅಡಗಿದ್ದ ಆರೋಪಿಗಳನ್ನು 14 ದಿನಗಳ ಕ್ವಾರಂಟೈನ್ ಆದ ನಂತರ ಬಂಧಿಸಲಾಗಿದೆ.
16 ಜನ ವಿದೇಶಿಗರು ಸೇರಿ ಒಟ್ಟು 30 ಜನರು ಟ್ರಾವೆಲ್ ಹಿಸ್ಟರಿಯನ್ನು ಮುಚ್ಚಿಟ್ಟಿದ್ದರು. ಇದರಲ್ಲಿ ಅಹಮದಾಬಾದ್ ವಿಶ್ವವಿದ್ಯಾಲಯದ ಒಬ್ಬ ಪ್ರ್ರಾಧ್ಯಾಪಕನೂ ಸೇರಿದ್ದಾನೆ. ಆತ ದೆಹಲಿಯಿಂದ ಮರಳಿದ ನಂತರ ಕಾಲೇಜಿನಲ್ಲಿ ತರಗತಿ ತೆಗೆದುಕೊಂಡಿರುವುದಷ್ಟೇ ಅಲ್ಲದೆ ಮೌಲ್ಯಮಾಪನದಲ್ಲೂ ಭಾಗವಹಿಸಿದ್ದ!
ಈ ಹಿಂದೆ ಮಾರ್ಚ್ 31ರಂದು ಶಾಹಗಂಜ್‌ನ ಮಸೀದಿಯಲ್ಲಿ ಅಡಗಿದ್ದ 7 ಇಂಡೋನೇಷ್ಯಾ ಪ್ರಜೆಗಳು ಸೇರಿ ಒಟ್ಟು 9 ಜನರನ್ನು ಬಂಧಿಸಲಾಗಿತ್ತು. ಅದೇ ರೀತಿ 9 ಥಾಯ್ಲೆಂಡ್ ಪ್ರಜೆಗಳು ಸೇರಿ 11 ತಬ್ಲಿಘಿಗಳು ಮತ್ತೊಂದು ಮಸೀದಿಯಲ್ಲಿ ವಾಸಿಸುತ್ತಿರುವುದು ಕಂಡುಬಂದಿದ್ದು ಅವರನ್ನು ಕೂಡ ಕ್ವಾರಂಟೈನ್ ಮಾಡಲಾಗಿದೆ. ಅವರ ವಿರುದ್ಧವೂ ಪ್ರಕರಣ ದಾಖಲಾಗಿದ್ದು, ಕ್ವಾರಂಟೈನ್ ಅವಧಿ ಮುಗಿದ ತಕ್ಷಣ ಅವರನ್ನೂ ಬಂಧಿಸಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.
VIDEO| ಲಾಕ್​ಡೌನ್​ ಏಕತಾನತೆ ಮರೆಯಲು ನೃತ್ಯದ ಮೊರೆಹೋದ ಪ್ರಜ್ವಲ್​ ದೇವರಾಜ್​ ದಂಪತಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − 11 =
Remember me
