ಭುವನೇಶ್ವರ :ತನ್ನ ಸಂಬಂಧಿಯೊಬ್ಬನ ಸಾವಿಗೆ ಕಾರಣಳಾದ ಮಹಿಳೆಯೊಬ್ಬಳ ಕತ್ತರಿಸಿದ ತಲೆಯನ್ನು ಹಿಡಿದುಕೊಂಡು 30 ವರ್ಷದ ವ್ಯಕ್ತಿಯೊಬ್ಬ ಒಂದು ಕಿಲೋಮೀಟರ್ ನಡೆದು ಒಡಿಶಾದ ಜಾಜ್‌ಪುರ ಜಿಲ್ಲೆಯ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ ಎಂದು ಅಧಿಕಾರಿಯೊಬ್ಬರು ಗುರುವಾರ ತಿಳಿಸಿದ್ದಾರೆ.ದಾನಗಡಿ ಪೊಲೀಸ್ ಠಾಣೆ ವ್ಯಾಪ್ತಿಯ ಛತರಾ ಗ್ರಾಮದಲ್ಲಿ ಬುಧವಾರ ರಾತ್ರಿ ಈ ಘಟನೆ ನಡೆದಿದೆ ಎಂದು ಅವರು ತಿಳಿಸಿದ್ದಾರೆ.ಅನಾರೋಗ್ಯದಿಂದ ಸೋದರಸಂಬಂಧಿ ಸಾವಿಗೀಡಾದ ಕೆಲವು ದಿನಗಳ ನಂತರ ಕಾರ್ತಿಕ್ ಕೇರೈ 62 ವರ್ಷದ ನಂದಿನಿ ಪುರ್ತಿಯನ್ನು ಕೊಡಲಿಯಿಂದ ಕೊಚ್ಚಿ ಕೊಲೆ ಮಾಡಿದ್ದಾನೆ ಎಂದು ಜಾಜಪುರ ರಸ್ತೆಯ ಉಪ-ವಿಭಾಗೀಯ ಪೊಲೀಸ್ ಅಧಿಕಾರಿ (ಎಸ್‌ಡಿಪಿಒ), ಚಿನ್ಮಯ ನಾಯಕ್ ತಿಳಿಸಿದ್ದಾರೆ.
ಇದನ್ನೂ ಓದಿ :ಬಾಲಿವುಡ್​ನ ದೊಡ್ಡ ದೊಡ್ಡ ಹೆಸರುಗಳು ಸುಶಾಂತ್​ ಸಾವನ್ನು ಮುಚ್ಚಿಹಾಕಲು ಯತ್ನಿಸುತ್ತಿವೆ
“ಶವವನ್ನು ವಶಪಡಿಸಿಕೊಂಡು ತನಿಖೆ ಪ್ರಾರಂಭಿಸಿದ್ದೇವೆ. ಘಟನೆಗೆ ಕಾರಣವಾದ ಸಂದರ್ಭ ತಿಳಿಯಲು ಆರೋಪಿಯ ವಿಚಾರಣೆ ನಡೆಸಲಾಗುತ್ತಿದೆ” ಎಂದು ತಿಳಿಸಿದ್ದಾರೆ.ಕೇರೈ ಅವರ ಸೋದರಸಂಬಂಧಿಯೊಬ್ಬ ಇತ್ತೀಚೆಗೆ ಅನಾರೋಗ್ಯಕ್ಕೆ ತುತ್ತಾಗಿದ್ದ ಮತ್ತು ಸ್ಥಳೀಯವಾಗಿ ಮಾಟ ಮಂತ್ರ ತಿಳಿದಿದ್ದ ಮಹಿಳೆಯ ಬಳಿ ಆತನನ್ನು ಚಿಕಿತ್ಸೆಗೆ ಕರೆದೊಯ್ದಿದ್ದ ಎಂದು ಗ್ರಾಮಸ್ಥರು ಪೊಲೀಸರಿಗೆ ತಿಳಿಸಿದ್ದಾರೆ.ಆತ ಗುಣಮುಖನಾಗುತ್ತಾನೆ ಎಂದು ಆಕೆ ಭರವಸೆ ನೀಡಿದ ನಂತರ ಕೇರೈ ಮತ್ತು ಅವನ ಸೋದರಸಂಬಂಧಿ ಮನೆಗೆ ಮರಳಿಳಿದ್ದಾರೆ.ಆದರೆ ಆ ರೋಗಿಯ ಸ್ಥಿತಿ ದಿನದಿಂದ ದಿನಕ್ಕೆ ಹದಗೆಡುತ್ತ ಬಂದು ಕಟಕ್‌ನ ಎಸ್‌ಸಿಬಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಆತ ಆಸ್ಪತ್ರೆಯಲ್ಲಿ ನಿಧನನಾದ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
23 ವರ್ಷಗಳಿಂದ ಪೊಲೀಸರಿಗೆ ವಂಚಿಸುತ್ತಿದ್ದ, ಅದೃಷ್ಟ ಕೈಕೊಟ್ಟು ಕೊನೆಗೂ ಸಿಕ್ಕಿಬಿದ್ದ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − seventeen =
Remember me
