ನವದೆಹಲಿ :ಕರೊನಾ ಲಸಿಕೆಯ ಬಗ್ಗೆ ಹಲವಾರು ಸುಳ್ಳು ಮಾಹಿತಿಗಳು ಮತ್ತು ವದಂತಿಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವುದು ಸಾಮಾನ್ಯ ವಿಚಾರವಾಗಿದೆ. ಈ ರೀತಿಯ ಸುಳ್ಳು ವದಂತಿಗಳನ್ನು ಹರಡುವ ವ್ಯವಸ್ಥಿತ ಸಂಚೊಂದನ್ನು ಫೇಸ್​ಬುಕ್​ ಪತ್ತೆ ಹಚ್ಚಿದ್ದು, ಈ ಹಿನ್ನೆಲೆಯಲ್ಲಿ ಸುಮಾರು 300 ಫೇಸ್​ಬುಕ್​ ಮತ್ತು ಇನ್ಸ್​​ಟಾಗ್ರಾಂ ಖಾತೆಗಳನ್ನು ತೆಗೆದುಹಾಕಿದೆ.
ಸದರಿ ಖಾತೆಗಳು ಆಸ್ಟ್ರಾಜೆನೆಕಾ ಮತ್ತು ಫೈಜರ್​ನ ಕರೊನಾ ಲಸಿಕೆಗಳು ಮನುಷ್ಯರನ್ನು ಚಿಂಪಾಜೀಗಳನ್ನಾಗಿ ಬದಲಾಯಿಸುತ್ತವೆ ಎಂಬ ಮೀಮ್​ಗಳು ಮತ್ತು ಇತರ ಸಂದೇಶಗಳನ್ನು ಹರಡುತ್ತಿದ್ದವು. ಪ್ಲಾನೆಟ್​ ಆಫ್​ ಏಪ್ಸ್​ ಎಂಬ ಹಾಲಿವುಡ್​ ಚಿತ್ರದ ದೃಶ್ಯವನ್ನು ಬಳಸಿ ಅಪಪ್ರಚಾರ ಮಾಡುತ್ತಿದ್ದವು ಎನ್ನಲಾಗಿದೆ.
ಇದನ್ನೂ ಓದಿ:ಫ್ರಿಜ್ಜಲ್ಲಿ ವೃದ್ಧನ ಶವ ಪತ್ತೆ! ಮೊಮ್ಮಗ ಕೊಟ್ಟ ಕಾರಣಕ್ಕೆ ಪೊಲೀಸರು ತಬ್ಬಿಬ್ಬು
ಈ ಸಂಬಂಧವಾಗಿ, ಇಂಗ್ಲೆಂಡಿನಲ್ಲಿ ನೋಂದಾಯಿಸಲ್ಪಟ್ಟ ಫಾಜ್​​ ಎಂಬ ಮಾರ್ಕೆಟಿಂಗ್​ ಕಂಪೆನಿಯು ಮುಖ್ಯವಾಗಿ ರಷ್ಯಾದಿಂದ ಆಪ್​ರೇಟ್​ ಮಾಡುತ್ತಿದ್ದ 300 ಖಾತೆಗಳು ಪತ್ತೆಯಾದವು. ಇವು ಪ್ರಾಥಮಿಕವಾಗಿ ಭಾರತ ಮತ್ತು ಲ್ಯಾಟಿನ್ ಅಮೆರಿಕಾದ ಜನರಿಗೆ ಸುಳ್ಳು ಮಾಹಿತಿ ನೀಡುವ ಗುರಿ ಹೊಂದಿದ್ದವು ಎಂದು ವರದಿ ಹೇಳಿದೆ.(ಏಜೆನ್ಸೀಸ್)
ಮಹಾರಾಷ್ಟ್ರ: ಡೆಲ್ಟಾ ಪ್ಲಸ್​ ಸೋಂಕಿನಿಂದ ಮೂರು ಸಾವು
ಕೆಲಸದಾಕೆಯ ಕರಾಮತ್ತು: 18 ಲಕ್ಷ ರೂ. ಮೌಲ್ಯದ ಚಿನ್ನಾಭರಣ ಕಳವು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 5 =
Remember me
