ಭುವನೇಶ್ವರ:ಎರಡು ಸಾವಿರ ರೂಪಾಯಿ ನೋಟುಗಳ ಚಲಾವಣೆಯನ್ನು ರದ್ದುಪಡಿಸಿ, ಈ ನೋಟುಗಳನ್ನು ಬದಲಾವಣೆ ಮಾಡಿಕೊಳ್ಳಲು ನೀಡಿರುವ ಕಾಲಾವಕಾಶದ ಕಡೆಯ ದಿನಗಳು ಸಮೀಪಿಸುತ್ತಿರುವ ಸಾಧ್ಯತೆ ಹಿನ್ನೆಲೆ ಯಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ (ಆರ್​ಬಿಐ) ಕೌಂಟರ್ ಬಳಿ ಉದ್ದನೆಯ ಸರದಿ ಸಾಲು ಕಂಡುಬರುತ್ತಿದೆ.
ಈ ನೋಟುಗಳನ್ನು ಮರಳಿಸಿ ಬೇರೆ ನೋಟುಗಳನ್ನು ಪಡೆಯಲು ಸರದಿಯಲ್ಲಿ ನಿಂತಿರುವ ಜನರನ್ನು ಒಡಿಶಾ ಪೊಲೀಸ್ ಇಲಾಖೆಯ ಆರ್ಥಿಕ ಅಪರಾಧ ವಿಭಾಗದ (ಇಒಡಬ್ಲ್ಯು) ಅಧಿಕಾರಿಗಳು ಅನುಮಾನದ ಕಣ್ಣಿನಲ್ಲಿ ನೋಡುತ್ತಿದ್ದು, ವಿಚಾರಣೆಗೆ ಒಳಪಡಿಸುತ್ತಿದ್ದಾರೆ. 20,000 ಮೌಲ್ಯದವರೆಗಿನ 2,000 ಮುಖಬೆಲೆಯ ನೋಟುಗಳನ್ನು ಆರ್​ಬಿಐನಲ್ಲಿ ಜಮಾ ಮಾಡಿ ಅದಕ್ಕೆ ಬದಲಿಯಾಗಿ ಬೇರೆ ಮುಖಬೆಲೆಯ ನೋಟುಗಳನ್ನು ಪಡೆಯಲು ಆರ್​ಬಿಐ ಅವಕಾಶ ಕಲ್ಪಿಸಿದೆ. ಹೀಗೆ 2000 ರೂ. ಮೌಲ್ಯದ ನೋಟು ಬದಲಾವಣೆಗೆ ಸರದಿಯಲ್ಲಿ ನಿಂತವರು ತಮ್ಮದೇ ಹಣ ಬದಲಾವಣೆ ಮಾಡಿಕೊಳ್ಳಲು ಸರದಿಯಲ್ಲಿ ನಿಂತಿದ್ದಾರೋ? ಅಥವಾ ತೆರಿಗೆ ವಂಚಿತರ ಕಪು್ಪಹಣ ವಿನಿಮಯ ಮಾಡಿಕೊಡಲು ಅವರಿಂದ ಕೂಲಿ ಹಣ ಪಡೆದು ಸರದಿಯಲ್ಲಿ ನಿಂತಿದ್ದಾರೋ ಎಂಬ ಅನುಮಾನ ಪೊಲೀಸರದ್ದು. ನೋಟು ವಿನಿಮಯ ಮಾಡಿಕೊಡಲು 300 ರೂಪಾಯಿ ಕೂಲಿ ಪಡೆಯುತ್ತಿದ್ದಾರೆಂದು ಮಾಧ್ಯಮಗಳಲ್ಲಿ ಪ್ರಕಟವಾದ ವರದಿಗಳ ಬೆನ್ನಲ್ಲಿ ಇಒಡಬ್ಲ್ಯು ಅಧಿಕಾರಿಗಳು ಕಾರ್ಯಾಚರಣೆಗಿಳಿದು ವಿಚಾರಣೆ ನಡೆಸುತ್ತಿದ್ದಾರೆ.
ಎಲ್ಲರ ಬಳಿ 10 ನೋಟು:2,000ರ ಕರೆನ್ಸಿ ನೋಟುಗಳ ವಿನಿಮಯಕ್ಕೆ ಕೆಲವು ಜನರು ಏಜೆಂಟರನ್ನು ನೇಮಿಸಿಕೊಂಡಿದ್ದಾರೆಂಬ ವರದಿಗಳ ಹಿನ್ನೆಲೆಯಲ್ಲಿ ತಾವು ಇಲ್ಲಿಗೆ ಬಂದಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಸರದಿಯಲ್ಲಿ ನಿಂತಿರುವವರ ಆಧಾರ್ ಕಾರ್ಡ್ ಪರಿಶೀಲಿಸಿ ಅವರ ಉದ್ಯೋಗದ ವಿವರ ಕೇಳುತ್ತಿದ್ದೇವೆ ಎಂದು ಒಬ್ಬ ಅಧಿಕಾರಿ ತಿಳಿಸಿದರು. ಸರದಿಯಲ್ಲಿರುವವರ ಅನೇಕ ಜನರ ಕೈಯಲ್ಲಿ ನಿಖರವಾಗಿ 10 ನೋಟುಗಳು ಇರುವುದು ಕಂಡು ಬಂದಿದ್ದು, ಇದು ಅಧಿಕಾರಿಗಳಲ್ಲಿ ಅನುಮಾನಕ್ಕೆ ಕಾರಣವಾಗಿದೆ. ‘ಬಹುತೇಕ ಜನರ ಕೈಯಲ್ಲಿ ನಿಖರ ವಾಗಿ 2,000 ರೂ. ಮೌಲ್ಯದ ಕರೆನ್ಸಿಯ 10 ನೋಟುಗಳು ಇರಲು ಹೇಗೆ ಸಾಧ್ಯ?’ ಎಂಬುದು ಅಧಿಕಾರಿಗಳ ಪ್ರಶ್ನೆಯಾಗಿದೆ. ತಮ್ಮ ಪರವಾಗಿ ನೋಟು ವಿನಿಮಯಕ್ಕೆ ಇವರನ್ನು ಬೇರೆಯವರು ನೇಮಿಸಿದ್ದಾರೆಂದು ಅನುಮಾನ ಪಡುವುದಕ್ಕೆ ಕಾರಣಗಳಿವೆ ಎಂದು ಅವರು ಹೇಳಿದ್ದಾರೆ. ಸರದಿ ಸಾಲಲ್ಲಿರುವವರ ಸಿಸಿಟಿವಿ ಫೂಟೇಜ್​ಗಳನ್ನು ಕೂಡ ಇಒಡಬ್ಲ್ಯು ಅಧಿಕಾರಿಗಳು ಪರಿಶೀಲಿಸಿದ್ದಾರೆ.
ಅಂಚೆ ಮೂಲಕವೂ ಸ್ವೀಕಾರ:ಜನರು ತಮ್ಮ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲು 2,000ದ ನೋಟುಗಳನ್ನು ಇನ್​ಶೂರ್ಡ್ ಅಂಚೆ ಮೂಲಕ ಪೋಸ್ಟ್ ಮಾಡಬಹುದು ಎಂದು ಆರ್​ಬಿಐ ಪ್ರಾದೇಶಿಕ ನಿರ್ದೇಶಕ ರೋಹಿತ್ ಪಿ ದಾಸ್ ತಿಳಿಸಿದ್ದಾರೆ. ಆರ್​ಬಿಐನ ನಿರ್ದಿಷ್ಟ ಪ್ರಾದೇಶಿಕ ಕಚೇರಿಗಳಿಗೆ ಕಳಿಸಬಹುದು, ಬ್ಯಾಂಕ್ ಖಾತೆಗಳಿಗೆ ಜಮೆ ಮಾಡಲು ಟ್ರಿಪಲ್ ಲಾಕ್ ರೆಸೆಪ್ಟಾಕಲ್ (ಟಿಎಲ್​ಆರ್) ಸೌಲಭ್ಯ ಕೂಡ ಒದಗಿಸಲಾಗುತ್ತದೆ ಎಂದಿದ್ದಾರೆ.
ಆರ್​ಬಿಐ ಸ್ಪಷ್ಟನೆ:ಆರ್ಥಿಕ ಅಪರಾಧ ವಿಭಾಗದ ಯಾವುದೇ ಅಧಿಕಾರಿ ತಮ್ಮನ್ನು ಭೇಟಿಯಾಗಿಲ್ಲ, ಯಾವುದೇ ತನಿಖಾ ಸಂಸ್ಥೆ ಯಾವುದೇ ಸ್ಪಷ್ಟನೆ ಕೇಳಿದರೆ ತಾವು ಸಹಕಾರ ನೀಡಲು ಸಿದ್ಧ ಎಂದು ಆರ್​ಬಿಐ ಪ್ರಾದೇಶಿಕ ನಿರ್ದೇಶಕ ಎಸ್.ಪಿ. ಮೊಹಂತಿ ತಿಳಿಸಿದ್ದಾರೆ. ಜನರು ತಮ್ಮ ಖಾತೆಗಳಿಗೆ ಹಣ ಜಮೆ ಮಾಡುವ ಬದಲು ಕೌಂಟರ್ ಬಳಿ ಕ್ಯೂನಲ್ಲಿ ನಿಂತು ವಿನಿಮಯ ಮಾಡಿಕೊಳ್ಳುತ್ತಿರುವುದೇಕೆ? ಎಂದು ಪ್ರಶ್ನಿಸಿದಾಗ, ‘ಎರಡೂ ಸೌಲಭ್ಯ ಲಭ್ಯವಿದೆ’ ಎಂದಷ್ಟೇ ಮೊಹಂತಿ ಪ್ರತಿಕ್ರಿಯಿಸಿದರು. ಪ್ರತಿ ದಿನ 2 ಕೋಟಿ ರೂ. ಮೌಲ್ಯದ 2,000 ಮುಖಬೆಲೆ ನೋಟುಗಳು ಬರುತ್ತಿದ್ದು, ಅದರಲ್ಲಿ ಶೇ.95ರಷ್ಟನ್ನು ವಿನಿಮಯ ಮಾಡಿ ಕೊಳ್ಳಲಾಗುತ್ತಿದೆ. ಕೇವಲ ಶೇ. 5ರಷ್ಟು ಮಾತ್ರ ಬ್ಯಾಂಕ್ ಖಾತೆಗಳಿಗೆ ಜಮೆಯಾಗುತ್ತಿದೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಬೆಟ್ಟಿಂಗ್​ ಆ್ಯಪ್​ನಿಂದಲೂ ಚುನಾವಣೆಗೆ ಹಣ!; ದೊಡ್ಡ ಮೊತ್ತವನ್ನೇ ವಶಪಡಿಸಿಕೊಂಡ ಜಾರಿ ನಿರ್ದೇಶನಾಲಯ

ಪಕ್ಷದ ರಾಜ್ಯಾಧ್ಯಕ್ಷರೇ ಟ್ರಕ್​ ಕ್ಲೀನರ್ ಥರ ನಟಿಸಿ ಭ್ರಷ್ಟಾಚಾರ ಬಯಲಿಗೆಳೆದ್ರು!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen − 3 =
Remember me
