ಅಯೋಧ್ಯೆ:ಜ. 22ರಂದು ಅಯೋಧ್ಯೆಯಲ್ಲಿ ನಡೆಯಲಿರುವ ರಾಮಮಂದಿರದ ‘ಪ್ರಾಣ ಪ್ರತಿಷ್ಠಾ’ ಸಮಾರಂಭಕ್ಕೂ ಮೊದಲು ದೇಶಾದ್ಯಂತ 343ಕ್ಕೂ ಹೆಚ್ಚು ರಾಮನ ಹೆಸರಿನಲ್ಲಿರುವ ರೈಲ್ವೆ ನಿಲ್ದಾಣಗಳನ್ನು ಅಲಂಕಾರಗೊಳಿಸಿ, ಲೈಟಿಂಗ್ಸ್​ನಿಂದ ಮಿಂಚಿಸಲು ಇದೀಗ ಭಾರತೀಯ ರೈಲ್ವೇ ಇಲಾಖೆಯು ಸಕಲ ಸಿದ್ಧತೆಗಳನ್ನು ಮಾಡಿಕೊಂಡಿದೆ.
ಇದನ್ನೂ ಓದಿ:ಮೀಸಲು ಹೊಣೆ ಕೇಂದ್ರಕ್ಕೆ ರವಾನೆ; ಜವಾಬ್ದಾರಿ ವರ್ಗಾಯಿಸಿ ‘ಕೈ’ತೊಳೆದುಕೊಂಡ ರಾಜ್ಯ ಸರ್ಕಾರ
ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳು ರಾಮನ ಹೆಸರಿನ ಅತಿ ಹೆಚ್ಚು ರೈಲ್ವೇ ನಿಲ್ದಾಣಗಳನ್ನು ಹೊಂದಿದ್ದು, ಕ್ರಮವಾಗಿ 55 ಮತ್ತು 54 ಸ್ಟೇಷನ್​ಗಳನ್ನು ಹೊಂದಿದೆ. ರಾಮನ ಹೆಸರಿನಲ್ಲಿ ಅಧಿಕ ನಿಲ್ದಾಣಗಳನ್ನು ಹೊಂದಿರುವ ಸಾಲಿನಲ್ಲಿ ಬಿಹಾರ ಮೂರನೇ ಸ್ಥಾನದಲ್ಲಿದೆ.
ಆಂಧ್ರಪ್ರದೇಶದ ರಾಮಚಂದ್ರಪುರಂ, ರಾಮಪುರಂ, ಕರ್ನಾಟಕದ ರಾಮಗಿರಿ, ರಾಮನಗರ, ತೆಲಂಗಾಣದ ರಾಮಗುಂಡಂ ಮತ್ತು ರಾಮಕಿಸ್ತಪುರಂ, ರಾಮಣ್ಣಪೇಟ್, ಉತ್ತರ ಪ್ರದೇಶದ ರಾಮಚಂದ್ರಾಪುರ, ರಾಮ್‌ಗಂಜ್ ಮತ್ತು ರಾಮಚೌರಾ ಸೇರಿದಂತೆ ಹಲವಾರು ನಿಲ್ದಾಣಗಳನ್ನು ಅಲಂಕರಿಸಿ, ಲೈಟಿಂಗ್ಸ್​​ನಿಂದ ಮಿಂಚಿಸಲು ಸದ್ಯ ರೈಲ್ವೇ ಇಲಾಖೆ ಸಜ್ಜಾಗಿದೆ.
ಇದನ್ನೂ ಓದಿ:ಇಂದಿನಿಂದ ಭವಿಷ್ಯದ ತಾರೆಯರ ಸೆಣಸಾಟ; ಆರನೇ ಪ್ರಶಸ್ತಿ ಕನಸಿನಲ್ಲಿ ಭಾರತದ ಕಿರಿಯರು
ಜ.22 ರಂದು ಅಯೋಧ್ಯೆ ರಾಮಮಂದಿರಕ್ಕೆ ಭೇಟಿ ನೀಡಲು ವಿವಿಧ ಸ್ಥಳಗಳಿಂದ ಪ್ರಯಾಣಿಸಲು ಬಯಸುವ ಭಕ್ತರಿಗೆ ‘ಆಸ್ತಾ ವಿಶೇಷ’ ರೈಲುಗಳನ್ನು ಬಿಡಲು ರೈಲ್ವೇ ಇಲಾಖೆ ನಿರ್ಧರಿಸಿದ್ದು, ಈ ಮುಖೇನ ಯಾವುದೇ ಅಡಚಣೆಯಿಲ್ಲದೆ ಭಕ್ತಾಧಿಗಳು ತಮ್ಮ ಪ್ರದೇಶದಿಂದ ದೇವಾಲಯಕ್ಕೆ ಆಗಮಿಸಿ ನಂತರ ಹಿಂತಿರುಗುವ ವ್ಯವಸ್ಥೆಯನ್ನು ಮಾಡಿದೆ. ಈ ವಿಶೇಷ ರೈಲುಗಳು ಕೆಲವೆಡೆ ಮಾತ್ರ ನಿಲ್ಲಿಸುವುದೇ ಹೊರತು ಉಳಿದ ನಿಲ್ದಾಣಗಳಲ್ಲಿ ಸ್ಟಾಪ್ ನೀಡುವುದಿಲ್ಲ.
ಈ ವಿಶೇಷ ರೈಲಿನಲ್ಲಿ ಪ್ರಯಾಣಿಸಲು ಇಚ್ಛಿಸುವ ಭಕ್ತಾಧಿಗಳು ಮುಂಚಿತವಾಗಿಯೇ ಟಿಕೆಟ್​ ಬುಕ್ಕಿಂಗ್​ ಮಾಡತಕ್ಕದ್ದು, ಅತೀ ಮುಖ್ಯವಾಗಿ ರಿಟರ್ನ್​​ ಟಿಕೆಟ್​ ಕೂಡ ಬುಕ್ ಮಾಡಿಕೊಳ್ಳುವುದು ಒಳಿತು ಎಂದು ಇಲಾಖೆ ತಿಳಿಸಿದೆ,(ಏಜೆನ್ಸೀಸ್).
ಈ ರಾಶಿಯವರಿಗಿಂದು ಆರ್ಥಿಕ ಸಮಸ್ಯೆಯಿಂದ ಮುಕ್ತಿ: ನಿತ್ಯಭವಿಷ್ಯ

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:eleven − seven =
Remember me
