ನವದೆಹಲಿ :ಭಾರತೀಯ ನೌಕಾ ಪಡೆಯ ಅಧಿಕಾರಿಗಳು ಅರೇಬಿಯನ್ ಸಮುದ್ರದಲ್ಲಿ ಗಸ್ತು ತಿರುಗುತ್ತಿದ್ದಾಗ ಮೀನು ಹಿಡಿಯುವ ದೋಣಿಯೊಂದರಿಗಂದ ಸುಮಾರು 3,000 ಕೋಟಿ ರೂ. ಬೆಲೆಯ ಮಾದಕ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಹೆಚ್ಚಿನ ತನಿಖೆಗಾಗಿ ದೋಣಿ ಮತ್ತು ಅದರ ಸಿಬ್ಬಂದಿಯನ್ನು ಕೊಚ್ಚಿಗೆ ಕರೆದೊಯ್ಯಲಾಗಿದೆ. ಈ ದೋಣಿಯು ಭಾರತಕ್ಕೆ ಸೇರಿದ್ದಲ್ಲ ಎಂದು ಮೂಲಗಳು ತಿಳಿಸಿವೆ.
ಪರಿವೀಕ್ಷಣೆಯಲ್ಲಿದ್ದಾಗ ಅರಬ್ಬಿ ಸಮುದ್ರದಲ್ಲಿ ಅನುಮಾನಾಸ್ಪದ ಚಲನವಲನವನ್ನು ಪ್ರದರ್ಶಿಸುತ್ತಿದ್ದ ದೋಣಿಯೊಂದನ್ನು ಐಎನ್​ಎಸ್​ ಸುವರ್ಣ ಪತ್ತೆ ಹಚ್ಚಿತು. ನೌಕಾ ಪಡೆಯ ಸಿಬ್ಬಂದಿ ಅದನ್ನು ಪರಿಶೀಲನೆ ಮಾಡಿದಾಗ 300 ಕೆಜಿಗೂ ಹೆಚ್ಚು ಡ್ರಗ್ಸ್​ ಸಿಕ್ಕಿದೆ. ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇದರ ಬೆಲೆ 3,000 ಕೋಟಿ ರೂಪಾಯಿ ಇದೆ ಎಂದು ನೌಕಾ ಪಡೆಯು ಹೇಳಿಕೆ ನೀಡಿದೆ.
“ಇದು ಪ್ರಮಾಣ ಮತ್ತು ಬೆಲೆಯ ದೃಷ್ಟಿಯಿಂದ ಮಾತ್ರವಲ್ಲದೆ ಮಕ್ರಾನ್ ಕರಾವಳಿಯಿಂದ ಹೊರಹೊಮ್ಮುವ ಮತ್ತು ಭಾರತೀಯ, ಮಾಲ್ಡೀವಿಯನ್ ಮತ್ತು ಶ್ರೀಲಂಕಾದತ್ತ ಸಾಗುವ ಅಕ್ರಮ ಮಾದಕವಸ್ತುಗಳ ಕಳ್ಳಸಾಗಣೆ ಮಾರ್ಗಗಳನ್ನು ಅಡ್ಡಿಪಡಿಸಿದ ದೃಷ್ಟಿಕೋನದಿಂದ ಕೂಡ ಒಂದು ಪ್ರಮುಖ ಕಾರ್ಯಾಚರಣೆಯಾಗಿದೆ” ಎಂದು ಅಧಿಕಾರಿಗಳು ಹೇಳಿದ್ದಾರೆ.(ಏಜೆನ್ಸೀಸ್)
50:50 ಲಸಿಕೆ ಹಂಚಿಕೆ; ಸರ್ಕಾರಿ ಕೇಂದ್ರಗಳಲ್ಲಿ ಯಥಾಸ್ಥಿತಿ, ಖಾಸಗಿ ಕೇಂದ್ರಗಳಲ್ಲಿ 18 ಮೇಲ್ಪಟ್ಟವರಿಗೆ ಲಸಿಕೆ ಲಭ್ಯ!

‘ದೆಹಲಿ ಪೊಲೀಸರು ಚಕ್ರವರ್ತಿಗಳಂತೆ ವರ್ತಿಸುತ್ತಿದ್ದಾರೆ’ ಎಂದ ದೀಪ್ ಸಿಧು ವಕೀಲ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:ten − 7 =
Remember me
