ನವದೆಹಲಿ:ಕರೊನಾ ಮಾರಿಗೆ ಭಾರತದಲ್ಲಿ ಬಲಿಯಾದವರ ಸಂಖ್ಯೆ 2,400ಕ್ಕಿಂತ ಹೆಚ್ಚಾಗಿದ್ದು, ಸೋಂಕಿತರ ಸಂಖ್ಯೆ 73 ಸಾವಿರದ ಗಡಿ ದಾಟಿದೆ. ಕಳೆದ 24 ತಾಸಿನಲ್ಲಿ 114 ಹೊಸ ಸಾವು ಪ್ರಕರಣಗಳು ವರದಿಯಾಗುವುದರೊಂದಿಗೆ ಒಟ್ಟು ಮೃತರ ಸಂಖ್ಯೆ 2,408ಕ್ಕೆ ಏರಿದೆ. ಜತೆಗೆ 3212 ಹೊಸ ಪ್ರಕರಣಗಳೊಂದಿಗೆ ಸೋಂಕಿತರ ಸಂಖ್ಯೆ 73,981ಕ್ಕೆ ಏರಿಕೆಯಾಗಿದೆ. 40 ಸಾವಿರದ ಬಳಿಕ ಸೋಂಕಿತರ ಸಂಖ್ಯೆ ಅತೀ ವೇಗವಾಗಿ ಏರಿಕೆಯಾಗಿದೆ. ಮೇ 3ರಂದು ದೇಶದಲ್ಲಿ ಸೋಂಕು ಪ್ರಕರಣಗಳು 40 ಸಾವಿರದ ಗಡಿ ದಾಟಿದ್ದವು. ನಂತರ ಕೇವಲ 8 ದಿನಗಳ ಅಂತರದಲ್ಲಿ ಬರೋಬ್ಬರಿ 30 ಸಾವಿರ ಪ್ರಕರಣಗಳು ವರದಿಯಾಗಿವೆ. ಇದರ ಜತೆಗೆ ಗುಣಮುಖರ ಪ್ರಮಾಣ ಭಾರಿ ಏರಿಕೆಯಾಗಿದ್ದರಿಂದ 24 ಸಾವಿರಕ್ಕೂ ಅಧಿಕ ಜನರು ಗುಣಮುಖರಾಗಿದ್ದು, ಸದ್ಯ 47 ಸಾವಿರಕ್ಕೂ ಅಧಿಕ ಸಕ್ರಿಯ ಪ್ರಕರಣಗಳಿವೆ.
ಇದನ್ನೂ ಓದಿ:ಕರೊನಾ ಬಿಕ್ಕಟ್ಟು ನಿರ್ವಹಣೆಗಾಗಿ 20 ಲಕ್ಷ ಕೋಟಿ ರೂ.ವಿಶೇಷ ಆರ್ಥಿಕ ಪ್ಯಾಕೇಜ್​ ಘೋಷಿಸಿದ ಪ್ರಧಾನಿ ಮೋದಿ
ಮಹಾರಾಷ್ಟ್ರದಲ್ಲೇ 24 ಸಾವಿರಕ್ಕೂ ಅಧಿಕ ಪ್ರಕರಣಗಳಿದ್ದು, ನಂತರ ಗುಜರಾತ್ ಹಾಗೂ ತಮಿಳುನಾಡಿನಲ್ಲಿ ತಲಾ 8 ಸಾವಿರ, ದೆಹಲಿಯಲ್ಲಿ 7 ಸಾವಿರ, ರಾಜಸ್ಥಾನದಲ್ಲಿ 4 ಸಾವಿರ, ಮಧ್ಯಪ್ರದೇಶ ಮತ್ತು ಉತ್ತರಪ್ರದೇಶದಲ್ಲಿ ತಲಾ 3 ಸಾವಿರ, ಪಶ್ಚಿಮ ಬಂಗಾಳ ಮತ್ತು ಆಂಧ್ರಪ್ರದೇಶದಲ್ಲಿ ತಲಾ 2 ಸಾವಿರ, ಪಂಜಾಬ್ ಮತ್ತು ತೆಲಂಗಾಣದಲ್ಲಿ ತಲಾ 1 ಸಾವಿರಕ್ಕೂ ಅಧಿಕ ಸೋಂಕು ಪ್ರಕರಣಗಳು ವರದಿಯಾಗಿವೆ. ಮಹಾರಾಷ್ಟ್ರದಲ್ಲಿ ಈವರೆಗೆ 921ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದು, ಗುಜರಾತ್​ನಲ್ಲಿ 530, ಮಧ್ಯಪ್ರದೇಶದಲ್ಲಿ 220, ಪಶ್ಚಿಮ ಬಂಗಾಳದಲ್ಲಿ 190 ಹಾಗೂ ರಾಜಸ್ಥಾನದಲ್ಲಿ 100ಕ್ಕೂ ಅಧಿಕ ರೋಗಿಗಳು ಸಾವನ್ನಪ್ಪಿದ್ದಾರೆ.
ದೇಶದಲ್ಲಿ ಕರೊನಾ ಪ್ರಕರಣಗಳು ದ್ವಿಗುಣಗೊಳ್ಳುವ ದಿನಗಳ ಪ್ರಮಾಣ 10.9 ದಿನಗಳಿಂದ 12.2 ದಿನಗಳಿಗೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಡಾ. ಹರ್ಷವರ್ಧನ್ ಹೇಳಿದ್ದಾರೆ. ದೇಶದಲ್ಲಿ ಕರೊನಾ ರೋಗಿಗಳ ಮರಣ ಪ್ರಮಾಣ ಶೇಕಡಾ 3.2ಕ್ಕೆ ಇಳಿಕೆಯಾಗಿದ್ದು, ಗುಣಮುಖರ ಪ್ರಮಾಣ 31.74ಕ್ಕೆ ಏರಿದೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಬಂತು..ಕಂಟ್ರೋಲ್ ಮಾಡೋಕೆ ಆಗ್ಲಿಲ್ಲ; ತೆಲಂಗಾಣ ಸಿಎಂ ಪುತ್ರನ ಪಜೀತಿ, ಜತೆಗಿದ್ದವರಿಗೆ ಗಾಬರಿ…!
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × two =
Remember me
