ದೆಹಲಿಯ ರೆಸ್ಟೋರಂಟ್​ನಲ್ಲಿ ಆತ ಕೆಲಸ ಮಾಡಿಕೊಂಡಿದ್ದ. ದೇಶಾದ್ಯಂತ ಲಾಕ್​ಡೌನ್​ಗೂ ಮುನ್ನ ಹೋಟೆಲ್​ಗಳನ್ನು ತೆರೆದಿರಲು ಅವಕಾಶವಿತ್ತು. ಆದರೆ, ಲೌಕ್​ಡೌನ್​ ಘೋಷಣೆ ಬಳಿಕ ಎಲ್ಲವನ್ನೂ ಮುಚ್ಚಲಾಯ್ತು. ಹೀಗಾಗಿ ದೆಹಲಿಯಿಂದ 300 ಕಿ.ಮೀ. ದೂರವಿದ್ದ ಮನೆಗೆ ನಡೆದುಕೊಂಡು ಹೋಗಲು ಆತ ನಿರ್ಧರಿಸಿದ. ಆದರೆ, 200 ಕಿ.ಮೀ. ದೂರ ಕ್ರಮಿಸುವಷ್ಟರಲ್ಲಿಯೇ ವಿಧಿ ಆತನನ್ನು ಸೆಳೆದುಕೊಂಡಿದೆ.
ರಣವೀರ್​ಸಿಂಗ್​ ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗ್ರಾಮದವನು. ದಕ್ಷಿಣ ದೆಹಲಿಯ ತುಘಲಕಾಬಾದ್ನಲ್ಲಿರುವ ರೆಸ್ಟೋರಂಟ್​ನಲ್ಲಿ ಕೆಲಸಕ್ಕಿದ್ದ. ಲಾಕ್​ಡೌನ್​ ಘೋಷಿಸಿದ ಬಳಿಕ ಆತ ಕೆಲಸಕ್ಕಿದ್ದ ರೆಸ್ಟೋರಂಟ್​ ಬಂದ್​ ಮಾಡಲಾಯಿತು. ಇನ್ನಿಬ್ಬರು ಗೆಳೆಯರೊಂದಿಗೆ ಅಂದಾಜು 300 ಕಿ.ಮೀ. ದೂರದ ಗ್ರಾಮಕ್ಕೆ ಕಾಲ್ನಡಿಗೆಯಲ್ಲಿಯೇ ಸಾಗಲು 38 ವರ್ಷದ ರಣವೀರ್​ಸಿಂಗ್​ ನಿರ್ಧರಿಸಿದ್ದ.ದೆಹಲಿ- ಆಗ್ರಾ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆತನಿಗೆ ಉತ್ತರಪ್ರದೇಶದ ಆಗ್ರಾ ಸಮೀಪಕ್ಕೆ ಬರುತ್ತಿದ್ದಂತೆ ಎದೆನೋವು ಕಾಣಿಸಿಕೊಂಡಿದೆ. ಕುಸಿದು ಬಿದ್ದ ಸ್ಥಳದಲ್ಲಿಯೇ ಆತನ ಪ್ರಾಣಪಕ್ಷಿ ಹಾರಿ ಹೋಗಿದೆ.
ವಾಹನ ಸಂಚಾರ, ಗಡಿ ರಸ್ತೆಗಳ ಬಂದ್​ ಬಳಿಕ ನಗರ ಪ್ರದೇಶಗಳಲ್ಲಿ ಲಕ್ಷಾಂತರ ಜನರು ಸಿಲುಕಿದ್ದಾರೆ. ಈ ಪೈಕಿ ಸಾವಿರಾರು ಜನರು ಕಾಲ್ನಡಿಗೆಯಲ್ಲಿಯೇ ತಮ್ಮ ಊರುಗಳತ್ತ ಸಾಗುತ್ತಿದ್ದಾರೆ. ಕುಡಿಯುವ ನೀರಿಗೂ ತತ್ವಾರ ಎದುರಾಗಿದೆ. ಮರಳಿ ತಮ್ಮೂರಿಗೆ ಗುಳೆಹೋಗುತ್ತಿರುವ ಜನರ ಪೈಕಿ ಮೊದಲ ಸಾವಿನ ಪ್ರಕರಣ ಇದಾಗಿದೆ ಎಂದು ಹೇಳಲಾಗಿದೆ.
ಭಾರತದಲ್ಲಿ ಕ್ಷಣಕ್ಷಣಕ್ಕೂ ಹೆಚ್ಚುತ್ತಿದೆ ಕರೊನಾ ರೋಗಿಗಳ ಸಂಖ್ಯೆ; 979 ಮಂದಿಯಲ್ಲಿ ಸೋಂಕು ದೃಢ, 25 ಸಾವು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen + 10 =
Remember me
