ಲಕ್ನೋ: ಬ್ರಿಟಿಷರ ಕಾಲದ 303 ರೈಫಲ್​​ಗಳನ್ನು ಉತ್ತರ ಪ್ರದೇಶ ಸರ್ಕಾರ ಗಣರಾಜ್ಯೋತ್ಸವ ದಿನದಂದು ನಿಷ್ಕ್ರಿಯಗೊಳಿಸಲು ಮುಂದಾಗಿದೆ.ಅಂದಾಜು 75 ವರ್ಷಗಳ ಕಾಲ ಪೊಲೀಸರು ಈ ರೈಫಲ್​ಗಳನ್ನು ಬಳಸಿದ್ದಾರೆ. ಈಗ ರೈಫಲ್​ಗಳನ್ನು ನಿಷ್ಕ್ರಿಯಗೊಳಿಸುತ್ತಿರುವುದು ಒಂದು ಯುಗದ ಅಂತ್ಯ ಎಂದೆ ಭಾವಿಸಲಾಗಿದೆ.ಮಾಜಿ ಪೊಲೀಸ್ ಮಹಾನಿರ್ದೇಶಕ ಬ್ರಿಜ್ ಲಾಲ್ ಮಾತನಾಡಿ, 303 ರೈಫಲ್‌ಗಳು ಉತ್ತರ ಪ್ರದೇಶ ಪೊಲೀಸರ ನೆಚ್ಚಿನ ಆಯುಧವಾಗಿತ್ತು. ಅಂದಾಜು 70 ವರ್ಷಗಳಿಗೂ ಹೆಚ್ಚು ಕಾಲ ಪೊಲೀಸರು ಇದನ್ನು ಬಳಕೆ ಮಾಡಿದ್ದಾರೆ. ಈ ರೈಫಲ್​ಗಳು ಯಾವಾಗಲೂ ಅಪೇಕ್ಷಿತ ಫಲಿತಾಂಶಗಳನ್ನು ನೀಡುತ್ತಿತ್ತು ಎಂದು ಅವರು ಹೇಳಿದ್ದಾರೆ.ಈ ಬಂದೂಕುಗಳು ಮಾರಕವಾಗಿದ್ದವು. ಸಮಾಜಘಾತುಕ ಶಕ್ತಿಗಳು ಈ ಬಂದೂಕುಗಳಿಗೆ ಹೆದರುತ್ತಿದ್ದರು. ದೊಡ್ಡ ಡಕಾಯಿತರ ಮತ್ತು ದರೋಡೆಕೋರರ ಹಲವು ದುಷ್ಕೃತ್ಯಗಳನ್ನು ಈ ಆಯುಧ ಬಳಸಿ ತಡೆಯಲಾಗಿದೆ. 303 ರೈಫಲ್​ಗಳು ವಿಪರೀತ ಹವಮಾನ ಪರಿಸ್ಥಿತಿಯಲ್ಲೂ ಉತ್ತಮವಾಗಿ ಕಾರ್ಯನಿರ್ವಹಿಸಿವೆ. ಈ ರೈಫಲ್​ಗಳನ್ನು 1945ರಲ್ಲಿ ಪರಿಚಯಿಸಲಾಯಿತು ಎಂದು ಅವರು ಹೇಳಿದರು.ವಿಶ್ವದ ಮೊದಲ ಹಾಗೂ ಎರಡನೆ ಮಹಾ ಯುದ್ಧದ ವೇಳೆ ಈ ಬಂದೂಕುಗಳನ್ನು ತಯಾರಿಸಲಾಗಿದೆ. ಗಟ್ಟಿಮುಟ್ಟಾದ ವಸ್ತುಗಳಿಂದ ಬಂದೂಕು ತಯಾರಾಗಿದೆ. ಹೀಗಾಗಿ ಎಲ್ಲರಿಗೂ ಈ ಬಂದೂಕು ಇಷ್ಟವಾಗುತ್ತಿತ್ತು ಎಂದರು.ನಾನು ಸುಮಾರು 23 ವರ್ಷಗಳ ಕಾಲ ಇಟ್ಟುಕೊಂಡಿದ್ದ 303 ರೈಫಲ್​ ಉತ್ತಮವಾದುದು. ಈ ಆಯುಧದ ಬಗ್ಗೆ ನನಗೆ ತುಂಬಾ ಪ್ರೀತಿ. ಈಗ ಅದು ತಪ್ಪಿ ಹೋಗುತ್ತಿದೆ ಎಂಬ ಬೇಸರ ಇದೆ ಎಂದು ಯುಪಿಯ ಗೋರಖ್‌ಪುರ ಜಿಲ್ಲೆಯ ಗಘಾ ಪೊಲೀಸ್ ಠಾಣೆ ಸಬ್ ಇನ್ಸ್‌ಪೆಕ್ಟರ್ ಸರೋಜ್ ಹೇಳಿದ್ದಾರೆ. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:8 + five =
Remember me
