ನವದೆಹಲಿ:ಏಪ್ರಿಲ್ 1 ರಿಂದ ಆರು ಅಂಕಿಗಳ ಹಾಲ್​​ಮಾರ್ಕ್ ವಿಶಿಷ್ಟ ಗುರುತು (ಎಚ್​ಯುುಐಡಿ) ಸಂಖ್ಯೆ ಹೊಂದಿರದ ಚಿನ್ನಾಭರಣ ಮತ್ತು ಚಿನ್ನದ ಕಲಾಕೃತಿಗಳನ್ನು ಮಾರಾಟ ಮಾಡುವಂತಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ಗ್ರಾಹಕರ ಹಿತದೃಷ್ಟಿಯಿಂದ 2023ರ ಮಾರ್ಚ್ 31ರ ನಂತರ ಎಚ್​ಯುುಐಡಿ ಇಲ್ಲದ ಚಿನ್ನದ ಆಭರಣಗಳ ಮಾರಾಟಕ್ಕೆ ಅನುಮತಿ ನೀಡಲಾಗುವುದಿಲ್ಲ ಎಂದು ಗ್ರಾಹಕ ವ್ಯವಹಾರಗಳ ಇಲಾಖೆಯ ಹೆಚ್ಚುವರಿ ಕಾರ್ಯದರ್ಶಿ ನಿಧಿ ಖರೆ ತಿಳಿಸಿದ್ದಾರೆ.
ಹಾಲ್​​ಮಾರ್ಕ್ ಯೂನಿಕ್ ಐಡೆಂಟಿಪಿಕೇಷನ್- ಎಚ್​ಯುುಐಡಿ ಇದು ವರ್ಣಮಾಲೆಗಳು ಮತ್ತು ಸಂಖ್ಯೆಗಳನ್ನು ಒಳಗೊಂಡಿರುವ 6 ಅಂಕಿಯ ಅಲ್ಪಾನ್ಯೂಮರಿಕ್ ಕೋಡ್ ಆಗಿದೆ. ಎಚ್​ಯುುಐಡಿ ಅನ್ನು ಬ್ಯೂರೋ ಆಫ್ ಇಂಡಿಯನ್ ಸ್ಟ್ಯಾಂಡರ್ಡ್​​ನಿಂದ(ಬಿಐಎಸ್) ಪ್ರಮಾಣೀಕೃತಗೊಂಡ ಕೇಂದ್ರಗಳಲ್ಲಿ (ಅಸ್ಸೇಯಿಂಗ್ ಮತ್ತು ಹಾಲ್​ವಾರ್ಕಿಂಗ್ ಸೆಂಟರ್ ) ಈ ವಿಶಿಷ್ಟ ಗುರುತನ್ನು ಹಾಕಲಾಗುತ್ತದೆ. ಇದಕ್ಕೂ ಮೊದಲು ಎಚ್​ಯುುಐಡಿ ನಾಲ್ಕು ಅಂಕಿಗಳಾಗಿತ್ತು. ಪ್ರಸ್ತುತ 4 ಮತ್ತು 6 ಅಂಕಿಯ ಎಚ್​ಯುುಐಡಿಗಳನ್ನು ಬಳಸಲಾಗುತ್ತಿದೆ. ಮಾರ್ಚ್ 31ರ ನಂತರ 6 ಅಂಕಿಯ ಆಲ್ಪಾ ನ್ಯೂಮರಿಕ್ ಕೋಡ್ ಹೊಂದಿರುವ ಆಭರಣಗಳ ಮಾರಾಟಕ್ಕೆ ಮಾತ್ರ ಅನುಮತಿ ದೊರೆಯಲಿದೆ.
ಗ್ರಾಹಕ ವ್ಯವಹಾರಗಳ ಇಲಾಖೆ ಪ್ರಕಾರ ಎಚ್​ಯುುಐಡಿ ಕೋಡ್ ಪ್ರತಿಯೊಂದು ಚಿನ್ನದ ಆಭರಣಕ್ಕೆ ವಿಶಿಷ್ಟ ಗುರುತನ್ನು ನೀಡುವುದರಿಂದ ಇದು ಕಳುವಾದ ಚಿನ್ನದ ಆಭರಣಗಳ ಪತ್ತೆ ಹಚ್ಚುವಿಕೆಯನ್ನು ಸುಲಭಗೊಳಿಸುತ್ತದೆ. ಆಭರಣಗಳ ಮೇಲಿನ ಹಾಲ್​ಮಾರ್ಕಿಂಗ್ ಚಿಹ್ನೆಗಳಿಗೆ ವಿಶ್ವಾಸಾರ್ಹತೆ ನೀಡುತ್ತದೆ. ಬಿಐಎಸ್ ಬಿಡುಗಡೆ ಮಾಡಿರುವ ಬಿಐಎಸ್ ಕೇರ್ ಆಪ್​ನಲ್ಲಿ ಎಚ್​ಯುುಐಡಿ ಕೋಡ್​ನ ದೃಢೀಕರಣವನ್ನು ಪರಿಶೀಲಿಸಬಹುದು. ಇದರಲ್ಲಿ ವ್ಯತ್ಯಾಸ ಕಂಡುಬಂದರೆ ಖರೀದಿದಾರರು ದೂರು ಸಲ್ಲಿಸಬಹುದು.
ಎಚ್​ಯುುಐಡಿ ಆಧಾರಿತ ಹಾಲ್​​ಮಾರ್ಕಿಂಗ್ ಆಭರಣಗಳ ನೋಂದಣಿಯು ಮಾನವ ಹಸ್ತಕ್ಷೇಪವಿಲ್ಲದೆ ಸ್ವಯಂಚಾಲಿತವಾಗಿರುತ್ತದೆ. ಇದು ಹಾಲ್​​ಮಾರ್ಕ್ ಮಾಡಿದ ಆಭರಣಗಳ ಶುದ್ಧತೆ ಖಾತ್ರಿಪಡಿಸುವ ಮತ್ತು ಯಾವುದೇ ಮೋಸವನ್ನು ಪರಿಶೀಲಿಸುವ ಗುರಿ ಹೊಂದಿದೆ. ಇದೊಂದು ಸುರಕ್ಷಿತ ವ್ಯವಸ್ಥೆಯಾಗಿದೆ. ಡೇಟಾ ಗೌಪ್ಯತೆ ಕಾಪಾಡಲಾಗುತ್ತದೆ.
ಕೇಂದ್ರ ಸರ್ಕಾರವು ಈಗಾಗಲೇ 2021ರ ಜೂ.16 ರಿಂದ ಚಿನ್ನದ ಆಭರಣಗಳು ಮತ್ತು ಕಲಾಕೃತಿಗಳ ಮಾರಾಟಕ್ಕೆ ಬಿಐಎಸ್ ಹಾಲ್​​ಮಾರ್ಕ್ ಕಡ್ಡಾಯಗೊಳಿಸಿದ್ದು, ಅವುಗಳ ಚಿಹ್ನೆಗಳನ್ನು ಪರಿಷ್ಕರಿಸಿದೆ. ಈಗಿನ ಪರಿಷ್ಕೃತ ಚಿಹ್ನೆಗಳೆಂದರೆ ಬಿಐಎಸ್ ಲೋಗೋ, ಶುದ್ಧತೆ ಮತ್ತು ಉತ್ತಮತೆಯ ಗ್ರೇಡ್ ಹಾಗೂ 6 ಅಂಕಿಯ ಎಚ್​ಯುುಐಡಿ ಕೋಡ್.
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:18 − 14 =
Remember me
