ಕೊಚ್ಚಿ:ಕೇರಳದ ಕಳ್ಳಸಾಗಾಣಿಕೆದಾರರು ಚಿನ್ನವನ್ನು ಕಳ್ಳಸಾಗಣೆ ಮಾಡಲು ವಿನೂತನ ಮಾರ್ಗಗಳನ್ನು ಕಂಡುಕೊಳ್ಳುತ್ತಿದ್ದಾರೆ. ಕೆಲ ದಿನಗಳ ಹಿಂದೆ ಯುವತಿಯೊಬ್ಬಳು 1 ಕೆಜಿಗೂ ಹೆಚ್ಚು ಚಿನ್ನವನ್ನು ತನ್ ಒಳಉಡುಪಿನಲ್ಲಿ ಬಚ್ಚಿಟ್ಟಿದ್ದಳು. ಇದೀಗ ಮತ್ತೊಂದು ಪ್ರಕರಣದಲ್ಲಿ ಮಹಿಳೆಯೊಬ್ಬಳು 1 ಕೋಟಿ ರೂ. ಮೌಲ್ಯದ ಚಿನ್ನವನ್ನು ಒಳಉಡುಪಿನಲ್ಲಿ ಇಟ್ಟು ಕದ್ದು ಸಾಗಿಸುವಾಗ ಕಸ್ಟಮ್ಸ್​ ಅಧಿಕಾರಿಗಳ ಕೈಗೆ ಸಿಕ್ಕಿಬಿದ್ದಿದ್ದಾಳೆ.
ಬಂಧಿತಳನ್ನು ಕೊಯಿಕ್ಕೋಡ್​ನ ನರಿಕುಣಿ ಮೂಲದ ಕಂದನ್ ಪ್ಲಾಕಿಲ್ ಅಜ್ಮಾಬೀವಿ (32) ಎಂದು ಗುರುತಿಸಲಾಗಿದೆ. ಅಧಿಕಾರಿಗಳ ಪ್ರಕಾರ, ಅಜ್ಮಾಬೀವಿ ತನ್ನ ಖಾಸಗಿ ಅಂಗಗಳ ಮೇಲೆ ಹರಡಿದ ಪ್ಲಾಸ್ಟಿಕ್ ಹಾಳೆಯ ಮೇಲೆ ಜಿಗುಟು ರೂಪದಲ್ಲಿ ಚಿನ್ನವನ್ನು ಇಟ್ಟು ಸಾಗಿಸುತ್ತಿದ್ದಳು.
ಇದನ್ನೂ ಓದಿ:ಗೋವಾದಲ್ಲಿ ಹೋಟೆಲ್​ ಸಿಬ್ಬಂದಿ ವಿರುದ್ಧ ದೂರು ನೀಡಿದ ಬೆನ್ನಲ್ಲೇ ಕುಟುಂಬಕ್ಕೆ ಕಾದಿತ್ತು ಭಾರೀ ಆಘಾತ!
ಕೊಯಿಕ್ಕೋಡ್​ನ ಕಾರಿಪುರ ವಿಮಾನ ನಿಲ್ದಾಣದಲ್ಲಿ ಅಜ್ಮಾಬೀವಿಯನ್ನು ಬಂಧಿಸಲಾಗಿದೆ. ಅಧಿಕಾರಿಗಳ ಪ್ರಕಾರ ಅಜ್ಮಾಬೀವಿ ತನ್ನ ಒಳ ಉಡುಪುಗಳಲ್ಲಿ ಚಿನ್ನದ ಮಿಶ್ರಣವನ್ನು ಬಚ್ಚಿಟ್ಟಿದ್ದಳು. ಚಿನ್ನದ ತೂಕ 2,031 ಗ್ರಾಂ. ಆಕೆ ದುಬೈನಿಂದ ಏರ್ ಇಂಡಿಯಾ ಎಕ್ಸ್​​ಪ್ರೆಸ್ ವಿಮಾನದಲ್ಲಿ ಬರುತ್ತಿದ್ದಳು. ಈ ಬಗ್ಗೆ ದೊರೆತ ಸುಳಿವಿನ ಆಧಾರದ ಮೇಲೆ ಅಧಿಕಾರಿಗಳು ದಾಳಿ ಮಾಡಿ ಬಂಧನ ಮಾಡಿದ್ದಾರೆ.
ಇತ್ತೀಚೆಗೆ ಕಳ್ಳಸಾಗಣೆದಾರರು ಚಿನ್ನದ ಕಳ್ಳ ಸಾಗಣೆಗೆ ಮಹಿಳೆಯನ್ನು ಹೆಚ್ಚೆಚ್ಚು ಬಳಸಿಕೊಳ್ಳುತ್ತಿದ್ದಾರೆ. ಹೆಚ್ಚಿನ ಮಹಿಳಾ ಕಳ್ಳಸಾಗಾಣಿಕೆದಾರರು ತಮ್ಮ ಗುದನಾಳ ಅಥವಾ ಯೋನಿಯಲ್ಲಿ ಕ್ಯಾಪ್ಸುಲ್‌ಗಳಲ್ಲಿ ಚಿನ್ನವನ್ನು ಬಚ್ಚಿಡುತ್ತಾರೆ. ಅಲ್ಲದೆ, ಕೆಲ ಪುರುಷರು ತಮ್ಮೊಳಗೆ 2 ಕೆಜಿಯಷ್ಟು ಚಿನ್ನವನ್ನು ಒಯ್ಯುತ್ತಾರೆ. ಎಲ್ಲ ಚಿನ್ನ ಕಳ್ಳಸಾಗಣೆದಾರರು ನಿರ್ದಿಷ್ಟ ಸಮುದಾಯದವರು ಎಂಬುದೇ ಗಮನಾರ್ಹ ವಿಷಯವಾಗಿದೆ.
ಇದನ್ನೂ ಓದಿ:ಪದೋನ್ನತಿಗೆ ರಾಜ್ಯ ಸರ್ಕಾರ ತರಾತುರಿ: 13 ಜಿಲ್ಲೆಗಳ ಪಿಡಿಒಗಳಿಗೆ ಅನ್ಯಾಯ; ನ್ಯಾಯಾಲಯದ ಸೂಚನೆಗಿಲ್ಲ ಕಿಮ್ಮತ್ತು
ವಶಪಡಿಸಿಕೊಂಡ ಚಿನ್ನದ ಪರಿಶುದ್ಧತೆಯನ್ನು ಪರಿಶೀಲಿಸಲು ಅಕ್ಕಸಾಲಿಗರನ್ನು ಕರೆಸಲಾಗಿತ್ತು. ಟೆಸ್ಟ್​ ಮಾಡಿದಾಗ 1.769 ಕೆಜಿ 24 ಕ್ಯಾರೆಟ್ ಚಿನ್ನ ಎಂಬುದು ದೃಢವಾಗಿದೆ. ಇದರ ಮೌಲ್ಯ ಬರೋಬ್ಬರಿ 99.68 ಲಕ್ಷ ರೂಪಾಯಿ. ಆರೋಪಿಯನ್ನು ಬಂಧಿಸಲಾಗಿದ್ದು, ವಿಚಾರಣೆಗೆ ಒಳಪಡಿಸಲಾಗಿದೆ.(ಏಜೆನ್ಸೀಸ್​)
ನಟಿ ಮೀನಾಗೆ ಈ ನಟನ ಮೇಲೆ ನಿಜವಾಗಿ ಲವ್​ ಆಗಿತ್ತಂತೆ! ಮದ್ವೆ ದಿನ ಕಣ್ಣೀರು ಸಹ ಹಾಕಿದ್ದರಂತೆ

ನಂದಮೂರಿ ಬಾಲಕೃಷ್ಣ ಅಭಿನಯದ ಹೊಸ ಚಿತ್ರದಲ್ಲಿ ಶ್ರೀಲೀಲಾ … ನಾಯಕಿಯೋ? ತಂಗಿಯೋ?

ನನ್ನ ಏಳ್ಗೆಗೆ ನಾನೇ ಶಿಲ್ಪಿ: ಮನೋಲ್ಲಾಸ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:fifteen − 13 =
Remember me
