ನವದೆಹಲಿ:ಒಡಿಶಾದ ಕಾಂಗ್ರೆಸ್ ರಾಜ್ಯಸಭಾ ಸಂಸದ ಧೀರಜ್ ಸಾಹು ಅವರಿಗೆ ಸಂಬಂಧಿಸಿದ ಸ್ಥಳದ ಮೇಲೆ ಆದಾಯ ತೆರಿಗೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ವಶಪಡಿಸಿಕೊಂಡ ನಗದು ಮೊತ್ತ -ಠಿ;335 ಕೋಟಿ ರೂ. ತಲುಪಿದೆ. ನಗದು ತುಂಬಿದ ಹಲವಾರು ಬ್ಯಾಗ್​ಗಳ ಎಣಿಕೆ ಇನ್ನೂ ನಡೆಯುತ್ತಿದ್ದು, ಈ ಮೊತ್ತ ಮತ್ತಷ್ಟು ಹೆಚ್ಚಾಗುವ ನಿರೀಕ್ಷೆಯಿದೆ.
ಒಡಿಶಾದ ಬೋಲಂಗಿರ್​ನಲ್ಲಿರುವ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಮುಖ್ಯ ಶಾಖೆಯಲ್ಲಿ ನಗದು ಎಣಿಕೆ ನಡೆಯುತ್ತಿದೆ. ಭಾನುವಾರ ಬೆಳಗ್ಗೆ ಎಸ್​ಬಿಐನ ಪ್ರಾದೇಶಿಕ ವ್ಯವಸ್ಥಾಪಕ ಭಗತ್ ಬೆಹೆರಾ ನೇತೃತ್ವ ತಂಡ 176 ಬ್ಯಾಗ್​ಗಳಲ್ಲಿನ ನಗದು ಎಣಿಕೆ ಕಾರ್ಯ ಆರಂಭಿಸಿದೆ. ಅವುಗಳಲ್ಲಿ 140 ಬ್ಯಾಗ್ ನಗದನ್ನು ಎಣಿಸಲಾಗಿದೆ. ಬ್ಯಾಂಕಿನ 50 ಅಧಿಕಾರಿಗಳು, 25 ಯಂತ್ರಗಳನ್ನು ಬಳಸಿ ನಗದು ಎಣಿಕೆ ಮಾಡಲಾಗುತ್ತಿದೆ. ಬೌದ್ ಡಿಸ್ಟಿಲರಿ ಪ್ರೖೆವೇಟ್ ಲಿಮಿಟೆಡ್, ಅದರ ಪ್ರವರ್ತಕರು ಮತ್ತು ಇತರರ ವಿರುದ್ಧ ಆದಾಯ ತೆರಿಗೆ ದಾಳಿ ಐದನೇ ದಿನ ಪೂರೈಸಿದೆ. ತೆರಿಗೆ ವಂಚನೆ ಆರೋಪದ ಮೇಲೆ ಡಿ. 6ರಂದು ದಾಳಿ ಆರಂಭಿಸಲಾಗಿತ್ತು. ರಾಂಚಿ ಮತ್ತು ಇತರ ಸ್ಥಳಗಳಲ್ಲಿ ಧೀರಜ್ ಸಾಹುಗೆ ಸಂಬಂಧಿಸಿದ ಸ್ಥಳಗಳಲ್ಲಿ ಸಹ ಶೋಧ ಕಾರ್ಯ ನಡೆಯುತ್ತಿದೆ. ಸಂಸದ ಸಾಹು ಮನೆಯಲ್ಲಿ ಏನೇನು ಪತ್ತೆಯಾಗಿದೆ ಎಂಬುದು ಈವರೆಗೆ ಸ್ಪಷ್ಟವಾಗಿಲ್ಲ.
ಅಂತರ ಕಾಯ್ದುಕೊಂಡ ಕಾಂಗ್ರೆಸ್:ಕಾಂಗ್ರೆಸ್ ಈ ಪ್ರಕರಣದಿಂದ ಅಂತರ ಕಾಯ್ದುಕೊಂಡಿದೆ. ಆದರೆ ಸಂಸದ ಸಾಹು ಬಳಿ ಸ್ಪಷ್ಟನೆ ಕೇಳಿದೆ ಎನ್ನಲಾಗಿದೆ. ಇಷ್ಟು ದೊಡ್ಡ ಮೊತ್ತದ ಹಣ ಹೇಗೆ ಬಂತು ಎಂಬ ಬಗ್ಗೆ ಅಧಿಕೃತ ಹೇಳಿಕೆ ನೀಡಬೇಕು ಎಂದು ಜಾರ್ಖಂಡ್ ಕಾಂಗ್ರೆಸ್ ಮುಖ್ಯಸ್ಥ ಅವಿನಾಶ್ ಪಾಂಡೆ ಸೂಚನೆ ನೀಡಿದ್ದಾರೆ.
ಭ್ರಷ್ಟಾಚಾರವೇ ಕೈ ಗ್ಯಾರಂಟಿ:ಭ್ರಷ್ಟಾಚಾರ ಕಾಂಗ್ರೆಸ್​ನ ಗ್ಯಾರಂಟಿ ಯಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಭಾನುವಾರ ಟೀಕಾ ಪ್ರಹಾರ ಮಾಡಿದ್ದಾರೆ. ಭ್ರಷ್ಟಾಚಾರ ವಿರೋಧಿ ಕಾರ್ಯಾಚರಣೆ ಪ್ರಧಾನಿ ನರೇಂದ್ರ ಮೋದಿಯವರ ಗ್ಯಾರಂಟಿಯಾಗಿದೆ ಎಂದು ಅವರು ಹೇಳಿದ್ದಾರೆ. ಸಾಹು ನಿವಾಸದಿಂದ ವಶಪಡಿಸಿಕೊಳ್ಳಲಾದ ಹಣ ದೇಶದಲ್ಲಿ ಈವರೆಗೆ ವಶಪಡಿಸಿಕೊಳ್ಳಲಾದ ಅತಿ ದೊಡ್ಡ ನಗದು ಮೊತ್ತವಾಗಿದೆ. ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಇದಕ್ಕೆ ಉತ್ತರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಇದು ಹೊಸ ಭಾರತವಾಗಿದ್ದು ರಾಜ ಕುಟುಂಬದ (ರಾಯಲ್ ಫ್ಯಾಮಿಲಿ) ಹೆಸರಿನಲ್ಲಿ ಶೋಷಣೆ ಮಾಡಲು ಜನರು ಬಿಡುವುದಿಲ್ಲ. ನೀವು ಓಡಿ ಓಡಿ ಆಯಾಸಗೊಳ್ಳುತ್ತೀರಿ. ಆದರೆ ಕಾನೂನು ನಿಮ್ಮನ್ನು ಬಿಡುವುದಿಲ್ಲ ಎಂದಿದ್ದಾರೆ.
ರಾಹುಲ್ ಗಾಂಧಿ ಅವರ ಆಪ್ತ ಸ್ನೇಹಿತ, ರಾಜ್ಯಸಭಾ ಸಂಸದ ಧೀರಜ್ ಸಾಹು ಅವರ ಕಚೇರಿಗಳಿಂದ -ಠಿ;300 ಕೋಟಿ ನಗದನ್ನು ಐಟಿ ವಶಪಡಿಸಿಕೊಂಡಿದೆ. ನೀವು ಈ ಬಗ್ಗೆ ಸಾಮಾಜಿಕ ಮಾಧ್ಯಮದಲ್ಲಿ ಏಕೆ ಪೋಸ್ಟ್ ಮಾಡಿಲ್ಲ? ಏಕೆಂದರೆ ಕಾಂಗ್ರೆಸ್ ಯಾವಾಗಲೂ ಭ್ರಷ್ಟಾಚಾರವನ್ನು ಬೆಂಬಲಿಸುತ್ತದೆ.
| ಜಿ. ಕಿಶನ್ ರೆಡ್ಡಿ ಕೇಂದ್ರ ಸಚಿವ
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two × 4 =
Remember me
