ಚಂಡೀಗಢ​:ಕರೊನಾ ವೈರಸ್​ ತಡೆಗೆ ಸರ್ಕಾರ ಅನೇಕ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಂಡಿದೆ. ಹಾಗಿದ್ದರೂ ಬೇರೆ ದೇಶಗಳಿಂದ ಭಾರತಕ್ಕೆ ಬರುತ್ತಿರುವ ಪ್ರಯಾಣಿಕರಿಂದ ಕರೊನಾ ಸಮಸ್ಯೆ ಹೆಚ್ಚುತ್ತಲೇ ಸಾಗಿದೆ. ಪಂಜಾಬ್​ಗೆ ಕರೊನಾ ಪೀಡಿತ ದೇಶಗಳಿಂದ ಸಾವಿರಾರು ಜನರು ಬಂದಿದ್ದು, ಅದರಲ್ಲಿ 335 ಜನರು ವೈದ್ಯಕೀಯ ಪರೀಕ್ಷೆ ನಡೆಸುವುದಕ್ಕೆ ಸಿಕ್ಕಿಲ್ಲ ಎಂದು ಅಲ್ಲಿನ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಮಾರ್ಚ್​ 13ರವರೆಗೆ ಪಂಜಾಬ್​ನ ವಿಮಾನ ನಿಲ್ದಾಣಗಳಿಗೆ ಒಟ್ಟು 6,692 ಜನರು ಕರೊನಾ ಪೀಡಿತ ದೇಶಗಳಿಂದ ಬಂದಿಳಿದಿದ್ದಾರೆ. ಈ ಪೈಕಿ 6011 ಜನರನ್ನು ವಿಮಾನ ನಿಲ್ದಾಣಗಳಲ್ಲಿ ತಪಾಸಣೆ ಮಾಡಲಾಗಿದೆ. ಉಳಿದಂತೆ 353 ಜನರನ್ನು ಜಿಲ್ಲಾ ವೈದ್ಯಕೀಯ ಕೇಂದ್ರಗಳಲ್ಲಿ ತಪಾಸಣೆ ಮಾಡಲಾಗುತ್ತಿದೆ. ಆದರೆ ಇನ್ನುಳಿದ 335 ಜನರು ವೈದ್ಯಕೀಯ ತಪಾಸಣೆಗೆ ಲಭ್ಯವಾಗಿಲ್ಲ. ಈ ಪ್ರಯಾಣಿಗರು ಎಲ್ಲಿದ್ದಾರೆ ಎನ್ನುವ ಮಾಹಿತಿಯೂ ಲಭಿಸಿಲ್ಲ.
ಕರೊನಾ ಪೀಡಿತ ದೇಶಗಳಿಂದ ಬಂದಿರುವ ಪ್ರಯಾಣಿಗರ ಪೈಕಿ 2241 ಪ್ರಯಾಣಿಗರನ್ನು ತಪಾಸಣೆಯಲ್ಲಿಡಲಾಗಿದೆ. ಅದರಲ್ಲಿ ಏಳು ಜನರಲ್ಲಿ ಮಾ.13ರಂದು ಕರೊನಾ ಗುಣಲಕ್ಷಣಗಳು ಕಂಡುಬಂದಿವೆ ಎಂದು ಇಲಾಖೆ ತಿಳಿಸಿದೆ.
ಕರೊನಾ ಪೀಡಿತ ದೇಶಗಳಿಂದ ಪಂಜಾಬ್​ಗೆ ಬಂದು ನಾಪತ್ತೆಯಾಗಿರುವ 335 ಪ್ರಯಾಣಿಗರು ಪಂಜಾಬ್​ನಲ್ಲಿಯೇ ಇದ್ದಾರಾ ಅಥವಾ ಬೇರೆ ಬೇರೆ ರಾಜ್ಯಗಳಿಗೆ ಭೇಟಿ ನೀಡಿದ್ದಾರಾ ಎನ್ನುವುದರ ಕುರಿತಾಗಿಯೂ ಯಾವುದೇ ಮಾಹಿತಿ ಇಲ್ಲ.(ಏಜೆನ್ಸೀಸ್​)
ಸಾಯಿಸಿಬಿಡುತ್ತಾರೆಂಬ ಭಯಕ್ಕೆ ತನ್ನದೇ ಪ್ರತಿಮೆಗಳನ್ನು ನಿರ್ಮಿಸಿಕೊಂಡ ಶಾಸಕ!

ಐಟಿ ದಾಳಿ ಬಳಿಕ ಹೊರಬಿತ್ತು ಸ್ಪೋಟಕ ಮಾಹಿತಿ: ಬಿಗಿಲ್, ಮಾಸ್ಟರ್​ ಚಿತ್ರಕ್ಕೆ ವಿಜಯ್​ ಪಡೆದ ಸಂಭಾವನೆ ಕೇಳಿ ಶಾಕ್​!​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + one =
Remember me
