ಭೋಪಾಲ್​:ಮಧ್ಯಪ್ರದೇಶದ ಭೋಪಾಲ್​​ನಲ್ಲಿ ಒಟ್ಟು 34 ಪೊಲೀಸ್ ಸಿಬ್ಬಂದಿಗೆ ಕರೊನಾ ಸೋಂಕು ತಗುಲಿದೆ. ಅವರಲ್ಲಿ ಕೆಲವು ಮೇಲಧಿಕಾರಿಗಳೂ ಇದ್ದಾರೆ ಎಂದು ವರದಿಯಾಗಿದೆ.
ಭೋಪಾಲ್​ ಎಡಿಜಿಪಿ ಉಪೇಂದ್ರ ಜೈನ್​ ಈ ಬಗ್ಗೆ ಮಾಹಿತಿ ನೀಡಿದ್ದು, ಇಷ್ಟು ಪೊಲೀಸರಿಗೆ ಕರೊನಾ ವೈರಸ್​ ತಗುಲಲು ತಬ್ಲಿಘಿಗಳೇ ಕಾರಣ ಎಂದಿದ್ದಾರೆ.
ಕಳೆದ ತಿಂಗಳು ದೆಹಲಿಯ ನಿಜಾಮುದ್ದೀನ್​ ಮರ್ಖಜ್​​ನಲ್ಲಿ ನಡೆದಿದ್ದ ತಬ್ಲಿಘಿ ಜಮಾತ್​ನ ಧಾರ್ಮಿಕ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್​ಗೆ ಬಂದಿದ್ದ ಹಲವರು ಅಡಗಿದ್ದರು. ಅವರನ್ನೆಲ್ಲ ಹುಡುಕಿ, ಕ್ವಾರಂಟೈನ್​ಗೆ ಒಳಪಡಿಸುವ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದ ಪೊಲೀಸರಲ್ಲೇ ಹೆಚ್ಚಾಗಿ ಸೋಂಕು ಕಾಣಿಸಿಕೊಂಡಿದೆ ಎಂದು ತಿಳಿಸಿದ್ದಾರೆ.ಸೋಂಕಿತ ಪೊಲೀಸ್ ಸಿಬ್ಬಂದಿಯ ಕುಟುಂಬವೂ ಅಪಾಯದಲ್ಲಿದೆ. ಈಗಾಗಲೇ 30 ಜನರಲ್ಲಿ ಸೋಂಕು ದೃಢಪಟ್ಟಿದೆ. ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆ ಇದೆ ಎಂದಿದ್ದಾರೆ.
ಇದ್ದುದರಲ್ಲಿ ನಗರದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಪೊಲೀಸ್​ ಸಿಬ್ಬಂದಿಯಲ್ಲಿ 2100 ಮಂದಿ ಕರೊನಾ ಕರ್ತವ್ಯ ನಿರ್ವಹಣೆ ಶುರುವಾದಾಗಿನಿಂದಲೂ ತಮ್ಮ ಮನೆಗಳಿಗೆ ಹೋಗಿಲ್ಲ. ಹೋಟೆಲ್​ಗಳಲ್ಲಿ ಸೆಲ್ಫ್​ ಕ್ವಾರಂಟೈನ್​ನಲ್ಲಿ ಇದ್ದಾರೆ. ಅವರಿಗೆಲ್ಲ ಪಿಪಿಇ ಕಿಟ್​ಗಳನ್ನು, ಸ್ಯಾನಿಟೈಸರ್​, ಆಹಾರಗಳನ್ನೆಲ್ಲ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ದೆಹಲಿ ಸಭೆಯಲ್ಲಿ ಪಾಲ್ಗೊಂಡು ಭೋಪಾಲ್​ಗೆ ಬಂದ ಸುಮಾರು 35 ಮಂದಿಗೆ ಕರೊನಾ ಇದೆ. ಅವರಲ್ಲಿ ವಿದೇಶಿ ಮುಸ್ಲಿಮರೂ ಇದ್ದಾರೆ ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. (ಏಜೆನ್ಸೀಸ್​)
ದೇಶಾದ್ಯಂತ ಒಂದೇ ದಿನ ಐದು ಲಕ್ಷ ಜನರ ಪರೀಕ್ಷೆ, 1,409 ಜನರಲ್ಲಿ ಹೊಸದಾಗಿ ಕರೊನಾ ಸೋಂಕು ಪತ್ತೆ

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:three × 4 =
Remember me
