ನವದೆಹಲಿ:ತರಂಗಾಂತರ ಮತ್ತು ಎಜಿಆರ್ ಬಾಕಿ ಪಾವತಿಗೆ 4 ವರ್ಷಗಳ ಮೊರಟೋರಿಯಂ ಪಡೆದುಕೊಂಡ ನಷ್ಟ ಪೀಡಿತ ವೊಡಾಫೋನ್ ಐಡಿಯಾ ಕಂಪನಿ ತನ್ನ 1,600 ಕೋಟಿ ಷೇರುಗಳನ್ನು ಸರ್ಕಾರಕ್ಕೆ ನೀಡಲು ಮುಂದಾಗಿದೆ. ಕಂಪನಿಯ ಸಾಲದ ಬಡ್ಡಿ ಅಂದಾಜು 16,000 ಕೋಟಿ ರೂಪಾಯಿ ಇದೆ. ಹೀಗಾಗಿ 10 ರೂಪಾಯಿ ಮುಖಬೆಲೆಯ 1,600 ಕೋಟಿ ಷೇರುಗಳನ್ನು ಸರ್ಕಾರಕ್ಕೆ ಹಸ್ತಾಂತರಿಸುವ ಪ್ರಸ್ತಾವನೆಯನ್ನು ಕಂಪನಿ ಮುಂದಿಟ್ಟಿದೆ. ಈ ಮೊತ್ತಕ್ಕೆ ಸಂಬಂಧಿಸಿ ಟೆಲಿಕಾಂ ಇಲಾಖೆ ಇನ್ನೂ ಸ್ಪಷ್ಟೀಕರಣ ನೀಡಿಲ್ಲ. ಸರ್ಕಾರಕ್ಕೆ ಇಷ್ಟುದೊಡ್ಡ ಮೊತ್ತ ಷೇರುಗಳನ್ನು ಹಸ್ತಾಂತರಿಸಿದರೆ ವೊಡಾಫೋನ್ ಐಡಿಯ ಕಂಪನಿಯಲ್ಲಿ ಸರ್ಕಾರದ ಪಾಲು ಶೇಕಡ 35.8% ಆಗಿರಲಿದೆ. ಅಷ್ಟೇ ಅಲ್ಲ, ಈ ಕಂಪನಿಯಲ್ಲಿ ಇಷ್ಟು ದೊಡ್ಡ ಪಾಲು ಷೇರು ಹೊಂದಿರುವ ಏಕೈಕ ಸಂಸ್ಥೆ ಸರ್ಕಾರವೇ ಆಗಿರಲಿದೆ. ಇದರೊಂದಿಗೆ ವೊಡಾಫೋನ್ ಗ್ರೂಪ್ ಮತ್ತು ಆದಿತ್ಯ ಬಿರ್ಲಾ ಗ್ರೂಪ್​ನ ಒಟ್ಟು ಪಾಲು ಶೇಕಡ 71.2ರಿಂದ ಶೇಕಡ 46.3ಕ್ಕೆ ಇಳಿಯಲಿದೆ. ಸಾರ್ವಜನಿಕ ಹೂಡಿಕೆದಾರರ ಷೇರುಪಾಲು ಶೇಕಡ 27.9ರಿಂದ ಶೇಕಡ 17.9ಕ್ಕೆ ಇಳಿಯಲಿದೆ. ವೊಡಾಫೋನ್ ಐಡಿಯ ಕಂಪನಿಯ ಸಾಲದ ಮೊತ್ತ 1.95 ಲಕ್ಷ ಕೋಟಿ ರೂಪಾಯಿ ಎಂದು ಮೂಲಗಳು ತಿಳಿಸಿವೆ. ವೊಡಾಫೋನ್ ಈ ಪ್ರಸ್ತಾವನೆ ಮಾಡುತ್ತಿದ್ದಂತೆ ಅದರ ಷೇರು ಮೌಲ್ಯ ಶೇ. 21 ಇಳಿಕೆ ಆಗಿದೆ.
ನವದೆಹಲಿ:ವೇತನದಾರರಿಗೆ ತೆರಿಗೆ ಹೊರೆ ಕಡಿಮೆ ಮಾಡಲು ಸ್ಟ್ಯಾಂಡರ್ಡ್ ಡಿಡಕ್ಷನ್ ಅನ್ನು ಶೇ. 30ರಿಂದ 35ರಷ್ಟು ಹೆಚ್ಚಿಸಿ 50 ಸಾವಿರ ರೂಪಾಯಿವರೆಗೆ ಹಿಗ್ಗಿಸಬೇಕು ಎಂದು ಕೈಗಾರಿಕೋದ್ಯಮದ ವಿವಿಧ ಸಂಘಗಳು ಕೇಂದ್ರ ವಿತ್ತ ಸಚಿವಾಲಯಕ್ಕೆ ಸಲಹೆ ನೀಡಿವೆ. ಕೇಂದ್ರದ 2022-23ನೇ ಸಾಲಿನ ಬಜೆಟ್ ಫೆ.1ರಂದು ಮಂಡನೆಯಾಗಲಿದ್ದು, ವಿವಿಧ ವಲಯಗಳಿಂದ ಸಚಿವಾಲಯ ಸಲಹೆಗಳನ್ನು ಆಹ್ವಾನಿಸಿದೆ. ಸ್ಟ್ಯಾಂಡರ್ಡ್ ಡಿಡಕ್ಷನ್ ಏರಿಕೆಯಿಂದ ವೇತನದಾರರ ಜತೆಗೆ, ಹೆಚ್ಚಿನ ಮೊತ್ತದ ಪಿಂಚಣಿ ಪಡೆಯುವ ನಿವೃತ್ತರಿಗೂ ಅನುಕೂಲ ಆಗಲಿದೆ. ಒಟ್ಟು ತೆರಿಗೆ ಮೊತ್ತದಲ್ಲಿ ಸ್ಟ್ಯಾಂಡರ್ಡ್ ಡಿಡಕ್ಷನ್ ಪ್ರಮಾಣ ಹೆಚ್ಚುವುದರಿಂದ ಅನೇಕರು ತೆರಿಗೆ ವ್ಯಾಪ್ತಿಯಿಂದ ಹೊರಗುಳಿದರೆ ಮತ್ತೆ ಹಲವರಿಗೆ ತೆರಿಗೆ ಸ್ಲ್ಯಾಬ್ ಕಡಿಮೆ ಆಗುತ್ತದೆ ಎಂದು ಸಲಹೆ ನೀಡಲಾಗಿದೆ. ಕೋವಿಡ್ ಸಂದರ್ಭ ಮತ್ತು ಬೆಲೆ ಏರಿಕೆಯ ಕಾರಣ ಆರ್ಥಿಕ ಮುಗ್ಗಟ್ಟು ಹೆಚ್ಚಿರುವುದರಿಂದ ಸಚಿವಾಲಯ ಈ ಮನವಿಯನ್ನು ಪುರಸ್ಕರಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ನವದೆಹಲಿ:ಚಿನ್ನ ಮತ್ತು ಬೆಳ್ಳಿ ಧಾರಣೆ ಏರಿಕೆ ಕಂಡಿದ್ದು, ದೆಹಲಿ ಚಿನಿವಾರ ಪೇಟೆಯಲ್ಲಿ ಬಂಗಾರದ ಬೆಲೆ 104 ರೂ. ಹೆಚ್ಚಳ ಆಗುವ ಮೂಲಕ 10 ಗ್ರಾಂ ಅಪರಂಜಿ ಚಿನ್ನದ ಬೆಲೆ 46,606 ರೂ. ಮುಟ್ಟಿದೆ. ಬೆಳ್ಳಿ ದರ 408 ರೂ. ಏರಿಕೆ ಆಗಿದ್ದು, ಕೆ.ಜಿ. ಬೆಲೆ 59,700 ರೂ.ಗೆ ತಲುಪಿದೆ.
18 ಸಾವಿರ ಗಡಿಗೆ ಚೇತರಿಕೆ ಕಂಡ ನಿಫ್ಟಿ:ಷೇರುಪೇಟೆಯಲ್ಲಿ ಮಂಗಳವಾರವೂ ಗೂಳಿ ಓಟ ಮುಂದುವರಿದಿದ್ದು, ಕಂಪನಿಗಳ ಮಾರುಕಟ್ಟೆ ಬಂಡವಾಳ ಮೌಲ್ಯ 275.20 ಲಕ್ಷ ಕೋಟಿ ರೂ.ಗೆ ಏರಿದೆ. ಸೆನ್ಸೆಕ್ಸ್​ನಲ್ಲಿ 221.26 ಅಂಶ ಹೆಚ್ಚಳವಾಗಿ 60,616.89ಕ್ಕೆ ದಿನದ ವಹಿವಾಟು ಮುಗಿದಿದೆ. ನಿಫ್ಟಿಯಲ್ಲಿ 52.45 ಪಾಯಿಂಟ್ ಅಧಿಕವಾಗಿ, 18,055.75ಕ್ಕೆ ಕೊನೆಗೊಂಡಿದೆ. ಎಚ್​ಸಿಎಲ್ ಟೆಕ್, ಎಚ್​ಡಿಎಫ್​ಸಿ, ಟೆಕ್ ಮಹೀಂದ್ರಾ, ಟಿಸಿಎಸ್, ಆರ್​ಐಎಲ್, ಸನ್ ಫರ್ವ, ಎಸ್​ಬಿಐ ಲಾಭ ಕಂಡಿದೆ. ಟಾಟಾ ಸ್ಟೀಲ್ಸ್, ಬಜಾಜ್ ಫೈನಾನ್ಸ್, ಐಟಿಸಿ, ಏಷ್ಯನ್ ಪೇಂಟ್ಸ್, ಕೊಟಾಕ್ ಬ್ಯಾಂಕ್​ಗೆ ನಷ್ಟವಾಗಿದೆ.

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:18 − sixteen =
Remember me
