ಕೊಚ್ಚಿ:ಪತ್ನಿಯೊಂದಿಗೆ ಮೊಬೈಲ್​ನಲ್ಲಿ ಮಾತನಾಡುವಾಗ ಆಕಸ್ಮಿಕವಾಗಿ ಬಾವಿಗೆ ಬಿದ್ದು ವ್ಯಕ್ತಿಯೊಬ್ಬ ದುರಂತ ಸಾವಿಗೀಡಾಗಿರುವ ಘಟನೆ ಕೇರಳದ ಪೆರುಂಬವೂರ್​ನಲ್ಲಿ ನಡೆದಿದೆ.
ಮನೀಶ್​ ಅಲಿಯಾಸ್​ ಮನು (35) ಮೃತ ದುರ್ದೈವಿ. ಈತ ಪೆರುಂಬವೂರ್​ನ ಇಮುರಿ ನಿವಾಸಿ. ಈ ಘಟನೆ ಶುಕ್ರವಾರ ರಾತ್ರಿ 9 ಗಂಟೆಗೆ ನಡೆದಿದೆ.
ಪತಿಯಿಂದ ಬರದ ಪ್ರತಿಕ್ರಿಯೆಮನೀಶ್​ ಪತ್ನಿ ಒಂದು ವಾರಗಳ ಕಾಲ ತವರಿಗೆ ಹೋಗಿದ್ದಳು. ಹೀಗಾಗಿ ಪ್ರತಿ ದಿನ ಪತ್ನಿಗೆ ಕರೆ ಮಾಡಿ ಮಾತನಾಡುತ್ತಿದ್ದ. ಅದೇ ರೀತಿ ಶುಕ್ರವಾರ ರಾತ್ರಿಯೂ ಕರೆ ಮಾಡಿದ್ದ. ಇಬ್ಬರು ಮಾತನಾಡುತ್ತಿರುವಾಗ ಇದ್ದಕ್ಕಿದ್ದಂತೆಯೇ ಪತಿಯಿಂದ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಬಳಿಕ ಮನೀಶ್​ ಪತ್ನಿ ನೆರೆಮನೆಯವರಿಗೆ ಮಾಹಿತಿ ಮುಟ್ಟಿಸಿದಳು.
ಇದನ್ನೂ ಓದಿ:ಕಣ್ಣಿಗೊಂದು ಸವಾಲ್​: ಕೇವಲ 10 ಸೆಕೆಂಡ್​ನಲ್ಲಿ ಈ ಫೋಟೋದಲ್ಲಿರೋ ಬೆಕ್ಕು ಪತ್ತೆ ಹಚ್ಚಬಲ್ಲಿರಾ?
ಸುದ್ದಿ ಕೇಳಿ ಪತ್ನಿಗೆ ಆಘಾತಗಂಡನಿಗೆ ಅನೇಕ ಬಾರಿ ಕರೆ ಮಾಡಿದರೂ ಯಾವುದೇ ಪ್ರತಿಕ್ರಿಯೆ ಬರಲಿಲ್ಲ. ಮಾಹಿತಿ ತಿಳಿದು ಸ್ಥಳಕ್ಕೆ ಬಂದ ನೆರೆಮನೆಯವರು ಮನೀಶ್​ಗಾಗಿ ಹುಡುಕಾಡಿದ್ದಾರೆ. ಈ ವೇಳೆ ಆತ ಬಾವಿಯಲ್ಲಿ ಪತ್ತೆಯಾಗಿದ್ದಾನೆ. ಮೇಲಕ್ಕೆ ಎತ್ತಿ ನೋಡಿದಾಗ ಆತ ಅಷ್ಟರಲ್ಲಾಗಲೇ ಮೃತಪಟ್ಟಿದ್ದ. ಈ ಸುದ್ದಿ ಕೇಳಿ ಪತ್ನಿಗೆ ಆಘಾತವಾಗಿದ್ದು, ಆಕ್ರಂದನ ಮುಗಿಲು ಮುಟ್ಟಿತು.
ಮೃತ ಮನೀಶ್​ ಆಲುವಾ-ಕೋತಮಂಗಲಂ ಮಾರ್ಗದಲ್ಲಿ ಸೇವೆ ಸಲ್ಲಿಸುವ ಬಸ್ ಯಾತ್ರಾಸ್‌ನ ಚಾಲಕರಾಗಿದ್ದರು. ಆತ ಮಜುವನ್ನೂರು ಮೂಲದ ತಮ್ಮ ಪತ್ನಿ ಕವಿತಾಮೋಳ್​ರನ್ನು ಅಗಲಿದ್ದಾರೆ.(ಏಜೆನ್ಸೀಸ್​)
ಗರ್ಭದಲ್ಲಿರುವಾಗಲೇ ಎರಡು ಶಿಶುಗಳಿಗೆ ತಗುಲಿದ ಕರೊನಾ!

ಸಾಕಷ್ಟು ದೂರುಗಳು ಬಂದ ಬೆನ್ನಲ್ಲೇ ಪ್ರೇಮಿಗಳಿಗೆ ಶಾಕ್ ನೀಡಿದ ಕಬ್ಬನ್ ಪಾರ್ಕ್ ಆಡಳಿತ ಮಂಡಳಿ!

ಚುನಾವಣೆ ಇದೆ ಅಂತ ನೆಪ ಮಾಡ್ಕೊಂಡು ಬರ್ತಿದಾರೆ ಮೋದಿ: ಡಿಕೆಶಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × 4 =
Remember me
