ನವದೆಹಲಿ:ರಾಷ್ಟ್ರಪತಿ ಭವನದಲ್ಲಿ ಆಯೋಜಿಸಿದ್ದ ಸಮಾರಂಭದಲ್ಲಿ ದ್ರೌಪದಿ ಮುರ್ಮು ಅವರು ಸಶಸ್ತ್ರ ಪಡೆಗಳು, ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳು ಮತ್ತು ರಾಜ್ಯ ಮತ್ತು ಕೇಂದ್ರಾಡಳಿತ ಪ್ರದೇಶದ ಪೊಲೀಸರಿಗೆ 10 ಕೀರ್ತಿ ಚಕ್ರಗಳನ್ನು (ಮರಣೋತ್ತರವಾಗಿ ಏಳು) ಮತ್ತು 26 ಶೌರ್ಯ ಚಕ್ರಗಳನ್ನು (ಮರಣೋತ್ತರವಾಗಿ ಏಳು) ಪ್ರದಾನ ಮಾಡಿದರು. ದೇಶ ರಕ್ಷಣೆಯಲ್ಲಿ ಅದಮ್ಯ ಧೈರ್ಯ, ತ್ಯಾಗ, ಸಮರ್ಪಣಾ ಮನೋಭಾವನೆ ತೋರಿದ ಯೋಧರನ್ನು ರಾಷ್ಟ್ರಪತಿಯವರು ಸನ್ಮಾನಿಸಿದರು. ಈ ಸಂದರ್ಭದಲ್ಲಿ ಉಪರಾಷ್ಟ್ರಪತಿ ಜಗದೀಪ್ ಧಂಖರ್, ಪ್ರಧಾನಿ ಮೋದಿ, ರಕ್ಷಣಾ ಸಚಿವ ರಾಜನಾಥ್ ಸಿಂಗ್, ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಸೇರಿ ಹಲವು ಸಚಿವರು ಉಪಸ್ಥಿತರಿದ್ದರು.
ಇದನ್ನು ಓದಿ:NEET-UG ಕೌನ್ಸೆಲಿಂಗ್​ ಮುಂದೂಡಿಕೆ; ಹೊಸ ದಿನಾಂಕ ಯಾವಾಗ.. ಇಲ್ಲಿದೆ ಮಾಹಿತಿ
ಕಳೆದ ವರ್ಷ ಸಿಯಾಚಿನ್ ಗ್ಲೇಸಿಯರ್‌ನಲ್ಲಿ ಭಾರತೀಯ ಸೇನೆಯ ಹಲವು ಟೆಂಟ್‌ಗಳಲ್ಲಿ ಸಂಭವಿಸಿದ ಬೆಂಕಿಯನ್ನು ನಿಯಂತ್ರಿಸಿ ಭಾರತೀಯ ಸೈನಿಕರನ್ನು ಪ್ರಾಣಾಪಾಯದಿಂದ ರಕ್ಷಿಸಿದ ಹುತಾತ್ಮ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರ ಶೌರ್ಯಕ್ಕೆ ರಾಷ್ಟ್ರಪತಿಗಳು ಮರಣೋತ್ತರ ಕೀರ್ತಿ ಚಕ್ರ ಪ್ರಶಸ್ತಿ ನೀಡಿ ಗೌರವಿಸಿದರು. ಮೂಲತಃ ಉತ್ತರ ಪ್ರದೇಶದ ಡಿಯೋರಿಯಾ ಜಿಲ್ಲೆಯ ದಲ್ಪತ್ ಗ್ರಾಮದ ನಿವಾಸಿಯಾದ ಕ್ಯಾಪ್ಟನ್ ಅಂಶುಮಾನ್ ಸಿಂಗ್ ಅವರು ತನ್ನ ಜೀವವನ್ನು ತ್ಯಾಗ ಮಾಡುವ ಮೂಲಕ ನಾಲ್ವರು ಸೈನಿಕರ ಜೀವವನ್ನು ಉಳಿಸಿದ್ದರು. ಕೀರ್ತಿ ಚಕ್ರವು ಅಂಶುಮಾನ್ ಅವರ ಕುಟುಂಬಕ್ಕೆ ನೀಡಲಾದ ಭಾರತದ ಎರಡನೇ ಅತ್ಯುನ್ನತ ಶಾಂತಿಕಾಲದ ಶೌರ್ಯ ಪ್ರಶಸ್ತಿಯಾಗಿದೆ.
ವಾಸ್ತವವಾಗಿ 2023 ಜುಲೈ 19ರಂದು ಸಿಯಾಚಿನ್ ಗ್ಲೇಸಿಯರ್‌ನಲ್ಲಿರುವ ಬಂಕರ್‌ನಲ್ಲಿ ಹಠಾತ್ ಬೆಂಕಿ ಕಾಣಿಸಿಕೊಂಡಿತು. ಸೈನಿಕರನ್ನು ರಕ್ಷಿಸಲು ಕ್ಯಾಪ್ಟನ್ ಅಂಶುಮಾನ್ ಸಿಂಗ್ ಬಂಕರ್ ಪ್ರವೇಶಿಸಿ, ನಾಲ್ವರು ಸೈನಿಕರನ್ನು ಸುರಕ್ಷಿತವಾಗಿ ಬಂಕ್​ನಿಂದ ಹೊರತಂದರು. ಆದರೆ ಅವರೇ ಒಳಗೆ ಬೆಂಕಿಯಲ್ಲಿ ಸಿಲುಕಿಕೊಂಡರು. ತೀವ್ರ ಸುಟ್ಟಗಾಯಗಳನ್ನು ಅನುಭವಿಸಿದ ಅವರನ್ನು ಹೆಲಿಕಾಪ್ಟರ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಚಿಕಿತ್ಸೆ ಫಲಕಾರಿಯಾಗದೆ ಹುತಾತ್ಮರಾದರು.
ಇನ್​​​ಸ್ಪೆಕ್ಟರ್​ ದಿಲೀಪ್ ಕುಮಾರ್ ದಾಸ್, ಹೆಡ್​​​​ ಕಾನ್​ಸ್ಟೆಬಲ್​​ ರಾಜ್ ಕುಮಾರ್ ಯಾದವ್, ಕಾನ್​​​ಸ್ಟೆಬಲ್​​ ಬಬ್ಲು ರಾಭಾ, ಕಾನ್​​ಸ್ಟೆಬಲ್ ಶಂಭು ರಾಯ್, ಕಾನ್​​ಸ್ಟೆಬಲ್​ ಪವನ್ ಕುಮಾರ್, ಕ್ಯಾಪ್ಟನ್ ಅಂಶುಮಾನ್ ಸಿಂಗ್, ಹವಾಲ್ದಾರ್ ಅಬ್ದುಲ್ ಮಜೀದ್ ಅವರಿಗೆ ಮರಣೋತ್ತರವಾಗಿ ಕೀರ್ತಿ ಚಕ್ರ ನೀಡಿ ಗೌರವಿಸಲಾಯಿತು. ಕಾನ್‌ಸ್ಟೆಬಲ್​​ ಸೈಫುಲ್ಲಾ ಖಾದ್ರಿ, ಮೇಜರ್ ವಿಕಾಸ್ ಭಂಭು, ಮೇಜರ್ ಮುಸ್ತಫಾ ಬೋಹ್ರಾ, ರೈಫಲ್‌ಮ್ಯಾನ್ ಕುಲಭೂಷಣ್ ಮಾಂತಾ, ಹವಾಲ್ದಾರ್ ವಿವೇಕ್ ಸಿಂಗ್ ತೋಮರ್, ರೈಫಲ್‌ಮ್ಯಾನ್ ಅಲೋಕ್ ರಾವ್, ಕ್ಯಾಪ್ಟನ್ ಎಂವಿ ಪ್ರಾಂಜಲ್ ಅವರಿಗೆ ಮರಣೋತ್ತರವಾಗಿ ಶೌರ್ಯ ಚಕ್ರವನ್ನು ನೀಡಲಾಯಿತು.
ಮೇಜರ್​​​​​​​​​​​​​ ದಿಗ್ವಿಜಯ್​​​​​​ ಸಿಂಗ್ ರಾವತ್​​​​​​​​​, ಮೇಜರ್ ದೀಪೇಂದ್ರ ವಿಕ್ರಮ್​​​​​​ ಬಾಸ್ನೆಟ್ ಮತ್ತು ನಾಯಬ್ ಸುಬೇದಾರ್ ಪವನ್ ಕುಮಾರ್ ಯಾದವ್ ಅವರಿಗೆ ಕೀರ್ತಿ ಚಕ್ರ ಪ್ರದಾನ ಮಾಡಲಾಯಿತು. ಕಾನ್‌ಸ್ಟೆಬಲ್ ಗಮಿತ್ ಮುಕೇಶ್ ಕುಮಾರ್, ಸಬ್ ಇನ್‌ಸ್ಪೆಕ್ಟರ್ ಅಮಿತ್ ರೈನಾ, ಸಬ್ ಇನ್‌ಸ್ಪೆಕ್ಟರ್ ಫಿರೋಜ್ ಅಹ್ಮದ್ ದಾರ್, ಕಮಾಂಡೆಂಟ್ ಬಿಭೋರ್ ಕುಮಾರ್ ಸಿಂಗ್, ಕಾನ್​ಸ್ಟೆಬಲ್​ ವರುಣ್ ಸಿಂಗ್, ಪೊಲೀಸ್ ವರಿಷ್ಠಾಧಿಕಾರಿ ಮೋಹನ್ ಲಾಲ್, ಮೇಜರ್ ರಾಜೇಂದ್ರ ಪ್ರಸಾದ್ ಜಾಟ್, ಮೇಜರ್ ರವೀಂದ್ರ ಸಿಂಗ್ ರಾವತ್, ನಾಯಕ್ ಭೀಮ್ ಸಿಂಗ್, ಮೇಜರ್ ಸಚಿನ್ ನೇಗಿ, ಮೇಜರ್ ಮಾನಿಯೋ ಫ್ರಾನ್ಸಿಸ್, ವಿಂಗ್ ಕಮಾಂಡರ್ ಶೈಲೇಶ್ ಸಿಂಗ್, ಲೆಫ್ಟಿನೆಂಟ್ ಬಿಮಲ್ ರಂಜನ್ ಬಹೇರಾ, ಹವಾಲ್ದಾರ್ ಸಂಜಯ್ ಕುಮಾರ್, ಫ್ಲೈಟ್ ಲೆಫ್ಟಿನೆಂಟ್ ಹರಿಕೃಷ್ಣ ಜಯನ್, ಕ್ಯಾಪ್ಟನ್ ಅಕ್ಷತ್ ಉಪಾಧ್ಯಾಯ, ನಾಯಬ್ ಸುಬೇದಾರ್ ಸಂಜಯ್ ಕುಮಾರ್, ಮೇಜರ್ ಅಂದೀಪ್ ಜಾಖರ್, ಪರ್ಸೋತ್ತಮ್ ಕುಮಾರ್ ಅವರಿಗೆ ಶೌರ್ಯ ಚಕ್ರ ನೀಡಲಾಯಿತು. (ಏಜೆನ್ಸೀಸ್​​)
ನೀಟ್​​ ಮರುಪರೀಕ್ಷೆಯ ಅಗತ್ಯವಿಲ್ಲ; ಸುಪ್ರೀಂಗೆ ತಿಳಿಸಿದ ಕೇಂದ್ರ ಸರ್ಕಾರ

ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
Sign in to your account
Please enter an answer in digits:one + seven =
Remember me
