ಶ್ರೀಲಂಕಾ:ಎರಡು ಪ್ರತ್ಯೇಕ ಘಟನೆಗಳಲ್ಲಿ ಒಟ್ಟು 37 ಭಾರತೀಯ ಮೀನುಗಾರರನ್ನು ಬಂಧಿಸಿದ್ದು, ಅವರ ಐದು ದೋಣಿಗಳನ್ನು ಇದೀಗ ಶ್ರೀಲಂಕಾ ನೌಕಾಪಡೆಯು ಭಾನುವಾರ (ಅ.29) ವಶಪಡಿಸಿಕೊಂಡಿದೆ.
ಇದನ್ನೂ ಓದಿ:ಗೂಗ್ಲಿ ನಟಿ ಕೃತಿ ಕರಬಂಧ 33ನೇ ವರ್ಷದ ಹುಟ್ಟುಹಬ್ಬ; ಹೌಸ್‌ಫುಲ್ 5 ನಟಿಯ ಟಾಪ್ 10 ಚಲನಚಿತ್ರಗಳು ಇವು..!
ಈ ವಿಷಯದ ಗೌಪ್ಯ ಮೂಲಗಳ ಪ್ರಕಾರ, ಶ್ರೀಲಂಕಾದ ಕಡಲಿನಲ್ಲಿ ಚೀನಾದ ನೌಕಾಪಡೆಯ ಬೇಹುಗಾರಿಕಾ ಹಡಗು ಲಂಗರು ಹಾಕಿದ ಬೆನ್ನಲ್ಲೇ ನೌಕಾಪಡೆಯು ಗಸ್ತು ಚಟುವಟಿಕೆಗಳನ್ನು ಮತ್ತಷ್ಟು ತೀವ್ರಗೊಳಿಸಿದೆ.
ಘಟನೆಯೊಂದರಲ್ಲಿ, ಶ್ರೀಲಂಕಾ ನೌಕಾಪಡೆಯ ಬಹು ತಂಡಗಳು ತಲೈಮನ್ನಾರ್ ಬಳಿ ಮೀನುಗಾರಿಕೆ ನಡೆಸುತ್ತಿದ್ದ ರಾಮೇಶ್ವರಂನಿಂದ 23 ಭಾರತೀಯ ಮೀನುಗಾರರನ್ನು ಸುತ್ತುವರೆದು, ತದನಂತರ ಅವರನ್ನು ಬಂಧಿಸಿದೆ. ಮೀನುಗಾರರ ಮೂರು ದೋಣಿಗಳನ್ನು ತಲೈಮನ್ನಾರ್ ನೌಕಾ ಶಿಬಿರಕ್ಕೆ ಕರೆದೊಯ್ಯುವ ಮುನ್ನ ವಶಪಡಿಸಿಕೊಂಡಿದೆ.
ಇದನ್ನೂ ಓದಿ:ಹಬ್ಬದ ದಿನ ಸ್ಥಳೀಯತೆಗೆ ಆದ್ಯತೆ ಇರಲಿ: ಮತ್ತೆ ವೋಕಲ್​ ಫಾರ್​ ಲೋಕಲ್​​ ಮಂತ್ರ ಜಪಿಸಿದ ಪ್ರಧಾನಿ ಮೋದಿ
ಇದೇ ರೀತಿಯ ಮತ್ತೊಂದು ಘಟನೆಯಲ್ಲಿ ನೆಡುಂತೀವು ಬಳಿ 14 ಮೀನುಗಾರರನ್ನು ಬಂಧಿಸಲಾಗಿದ್ದು, ಅವರ ಎರಡು ದೋಣಿಗಳನ್ನು ವಶಪಡಿಸಿಕೊಳ್ಳಲಾಗಿದೆ. ನಂತರ ಅವರನ್ನು ಮಾಯಿಲಟ್ಟಿ ಶಿಬಿರಕ್ಕೆ ಕರೆದೊಯ್ಯಲಾಗಿದೆ. ಅಕ್ಟೋಬರ್ 14 ರಿಂದ ಇಲ್ಲಿಯವರೆಗೂ ಶ್ರೀಲಂಕಾ ನೌಕಾಪಡೆಯು 64 ಮೀನುಗಾರರನ್ನು ಬಂಧಿಸಿದೆ ಮತ್ತು ಪ್ರತ್ಯೇಕ ಘಟನೆಗಳಲ್ಲಿ 10 ದೋಣಿಗಳನ್ನು ವಶಪಡಿಸಿಕೊಂಡಿದೆ ಎಂದು ವರದಿ ಉಲ್ಲೇಖಿಸಿದೆ.
ಬಂಧಿತ ಮೀನುಗಾರರ ಪರ ನಿಂತ ಸಿಎಂ ಸ್ಟಾಲಿನ್:ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಶನಿವಾರ(ಅ.28) ಕೇಂದ್ರ ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರಿಗೆ ಪತ್ರ ಬರೆದಿದ್ದು, ಮಾಲ್ಡೀವ್ಸ್ ಕೋಸ್ಟ್ ಗಾರ್ಡ್ ವಶದಲ್ಲಿರುವ 12 ಮೀನುಗಾರರನ್ನು ಮತ್ತು ಅವರ ಮೀನುಗಾರಿಕಾ ದೋಣಿಗಳನ್ನು ಬಿಡುಗಡೆ ಮಾಡುವಂತೆ ಮನವಿ ಮಾಡಿದರು.
ಇದನ್ನೂ ಓದಿ:ಕೆ.ಆರ್​. ಪೇಟೆಯಲ್ಲಿ ಇಬ್ಬರು ಮಹಿಳಾ ಕಾನ್​ಸ್ಟೆಬಲ್​ಗಳಿಗೆ ಠಾಣೆಯಲ್ಲೇ ಶಾಸ್ತ್ರೋಕ್ತ ಸೀಮಂತ! ಸಾರ್ವಜನಿಕರಿಂದ ಮೆಚ್ಚುಗೆ
ಅಕ್ಟೋಬರ್ 1 ರಂದು ತೂತುಕುಡಿ ಜಿಲ್ಲೆಯಿಂದ ಮೀನುಗಾರಿಕೆಗೆ ತೆರಳಿದ ಮೀನುಗಾರರನ್ನು ಅಕ್ಟೋಬರ್ 23 ರಂದು ಬಂಧಿಸಲಾಯಿತು ಎಂದು ಪತ್ರದಲ್ಲಿ ಸ್ಟಾಲಿನ್ ಉಲ್ಲೇಖಿಸಿದ್ದಾರೆ. ಮೀನುಗಾರರ ಬಿಡುಗಡೆ ಕುರಿತಂತೆ ಜೈಶಂಕರ್ ಅವರು ಮಾಲ್ಡೀವ್ಸ್ ಅಧಿಕಾರಿಗಳೊಂದಿಗೆ ಮಾತನಾಡುವಂತೆ ಪತ್ರದ ಮುಖೇನ ಮನವಿ ಸಲ್ಲಿಸಿದ್ದಾರೆ,(ಏಜೆನ್ಸೀಸ್).
‘ಡ್ಯಾಡ್’ ಟೀಸರ್​​ಗೆ ಬಾಲಿವುಡ್ ನಿರ್ದೇಶಕ ಸುಭಾಶ್ ಘಾಯ್ ಫಿದಾ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:six − three =
Remember me
