ಕೊಲ್ಕತ :ಪಶ್ಚಿಮ ಬಂಗಾಳದ ರಾಜಧಾನಿ ಕೊಲ್ಕತದಲ್ಲಿ, ಕೋವಿಡ್​ ನಿಯಮಾವಳಿಗಳನ್ನು ಗಾಳಿಗೆ ತೂರಿ ಫೈವ್​ ಸ್ಟಾರ್ ಹೋಟೆಲ್​ನಲ್ಲಿ ಪಾರ್ಟಿ ಮಾಡುತ್ತಿದ್ದ 37 ಜನರನ್ನು ಪೊಲೀಸರು ಬಂಧಿಸಿದ್ದಾರೆ.
ರಾಜ್ಯದಲ್ಲಿ ರಾತ್ರಿ 9 ಗಂಟೆಯಿಂದ ಬೆಳಗಿನ ಜಾವ 5 ಗಂಟೆವರೆಗೆ ಜನಸಂಚಾರ ಮತ್ತು ಹೊರಾಂಗಣ ಚಟುವಟಿಕೆಗಳ ಮೇಲೆ ನಿರ್ಬಂಧ ಚಾಲ್ತಿಯಲ್ಲಿದೆ. ಆದರೆ, ಬಂಧಿತರು ಮಧ್ಯರಾತ್ರಿಯ ವೇಳೆ ದ ಪಾರ್ಕ್​ ಎಂಬ ಫೈವ್​ ಸ್ಟಾರ್​ ಹೋಟೆಲ್​ನ ಎರಡನೇ ಮತ್ತು ಮೂರನೇ ಮಹಡಿಗಳಲ್ಲಿ ಡಿಜೆ ಸಂಗೀತದೊಂದಿಗೆ ಪಾರ್ಟಿ ಮಾಡುತ್ತಿದ್ದರು ಎನ್ನಲಾಗಿದೆ.
ಇದನ್ನೂ ಓದಿ:ಜನಸಂಖ್ಯೆ ನಿಯಂತ್ರಿಸಲು ಸಜ್ಜಾಯ್ತು ಈ ರಾಜ್ಯ! 2026 ರೊಳಗೆ ಜನನ ದರ ಇಳಿಸುವ ಗುರಿ
ಮಧ್ಯರಾತ್ರಿ 1.15 ಕ್ಕೆ ಕೊಲ್ಕತ ಪೊಲೀಸರು ನಡೆಸಿದ ದಾಳಿಯಲ್ಲಿ 37 ಜನರನ್ನು ಬಂಧಿಸಲಾಗಿದೆ. ಎರಡು ಕಾರುಗಳನ್ನು ಜಪ್ತಿಪಡಿಸಿಕೊಳ್ಳಲಾಗಿದೆ. ಪಾರ್ಟಿಯ ಸ್ಥಳದಿಂದ ಗಾಂಜಾ, ಮದ್ಯದ ಬಾಟಲಿಗಳು ಮತ್ತು ಅತಿಥಿಗಳ ಪಟ್ಟಿ ಮುಂತಾದವನ್ನು ವಶ ಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.(ಏಜೆನ್ಸೀಸ್)
ವಿಶ್ವವಿಖ್ಯಾತ ದೊಡ್ಡ ಆಲದ ಮರ ವೀಕ್ಷಣೆಗೆ ಪ್ರವಾಸಿಗರ ದಂಡು

ಮನೆ ಮುಂದೆ ನಿಲ್ಲಿಸುವ ದ್ವಿಚಕ್ರವಾಹನಗಳೇ ಈತನ ಟಾರ್ಗೆಟ್!


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:11 + sixteen =
Remember me
