ನವದೆಹಲಿ:ಜವಾಹರಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ ಜನವರಿ 5ರಂದು ನಡೆದ ಹಿಂಸಾಚಾರ, ದಾಳಿಯಲ್ಲಿ ಯೂನಿಟಿ ಅಗೇನಿಸ್ಟ್​ ಲೆಫ್ಟ್ ಎಂಬ ವಾಟ್ಸ್​ಆ್ಯಪ್ ಗ್ರೂಪ್​ನ 37 ಜನರೂ ಭಾಗಿಯಾಗಿದ್ದಾರೆ. ಅವರನ್ನು ಗುರುತಿಸಲಾಗಿದೆ ಎಂದು ಪ್ರಕರಣಧ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರು ತಿಳಿಸಿದ್ದಾರೆ.
ಈ ಪ್ರಕರಣದ ತನಿಖೆಗೆ ನಿಯೋಜಿತವಾಗಿರುವ ವಿಶೇಷ ತನಿಖಾ ತಂಡ (ಎಸ್​ಐಟಿ) ಯೂನಿಟಿ ಅಗೇನಿಸ್ಟ್​ ಲೆಫ್ಟ್ ಎಂಬ ವಾಟ್ಸ್​ಆ್ಯಪ್ ಗ್ರೂಪ್​ ಅನ್ನು ಪತ್ತೆಹೆಚ್ಚಿದ್ದು, ಅದರಲ್ಲಿರುವ 60 ಸದಸ್ಯರ ಪೈಕಿ 37 ಜನ ದಾಳಿಯಲ್ಲಿ ಭಾಗಿಯಾಗಿರುವುದನ್ನು ಖಚಿತಪಡಿಸಿಕೊಂಡಿದೆ. ಪೊಲೀಸ್ ಮಾಹಿತಿ ಪ್ರಕಾರ, ಈ ಗ್ರೂಪನ್ನು ಎಡಪಕ್ಷಗಳನ್ನು ಟಾರ್ಗೆಟ್ ಮಾಡಲು ಜನವರಿ 5ರಂದೇ ರಚಿಸಲಾಗಿದೆ.
ಹಿಂಸಾಚಾರದಲ್ಲಿ ಭಾಗಿಯಾಗಿದ್ದಾರೆ ಎಂದು ಗುರುತಿಸಲಾಗಿರುವ ಒಂಭತ್ತು ಜನರ ಭಾವಚಿತ್ರಗಳನ್ನು ಇದಕ್ಕೂ ಮೊದಲು ದೆಹಲಿ ಪೊಲೀಸರು ಬಿಡುಗಡೆ ಮಾಡಿದ್ದರು. (ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:nineteen − five =
Remember me
