ನವದೆಹಲಿ:ಸದಾ ಪಿತೂರಿ ನಡೆಸುವ ಪಾಕಿಸ್ತಾನಕ್ಕೆ ಸ್ವಲ್ಪ ದಿನಗಳ ಹಿಂದೆ ಭಾರತ ಒಂದು ಕಟ್ಟುನಿಟ್ಟಿನ ಸೂಚನೆ ನೀಡಿತ್ತು. ಭಾರತದಲ್ಲಿರುವ ಪಾಕ್​ನ ಹೈಕಮೀಷನ್​ ಮೂಲಕ ಬೇಹುಗಾರಿಕೆ ನಡೆಸುವುದು, ಹಾಗೇ ತಮ್ಮ ದೇಶದಲ್ಲಿರುವ ಭಾರತದ ಹೈಕಮಿಷನ್​ ಅಧಿಕಾರಿಗಳು, ರಾಯಭಾರಿ ಅಧಿಕಾರಿಗಳನ್ನು ಅಪಹರಣ ಮಾಡುವಂತಹ ನೀಚ ಕೆಲಸದಲ್ಲೇ ತೊಡಗಿಕೊಂಡಿದೆ ಪಾಕಿಸ್ತಾನ.
ಈ ಕೃತ್ಯಗಳನ್ನು ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಪಾಕಿಸ್ತಾನಕ್ಕೆ ಹೇಳಿದ್ದ ಭಾರತ, ನವದೆಹಲಿಯಲ್ಲಿ ನಿಮ್ಮ ಹೈಕಮಿಷನ್​ನಲ್ಲಿರುವ ಅರ್ಧದಷ್ಟು ಸಿಬ್ಬಂದಿಯನ್ನು ಒಂದು ವಾರದೊಳಗೆ ವಾಪಸ್​ ಕರೆಸಿಕೊಳ್ಳಿ ಎಂದು ಖಡಕ್​ ಆಗಿ ಹೇಳಿತ್ತು. ಹಾಗೇ, ಪಾಕಿಸ್ತಾನದಲ್ಲಿರುವ ಭಾರತದ ಹೈಕಮಿಷನ್​ ಮತ್ತು ರಾಯಭಾರಿ ಕಚೇರಿಯಲ್ಲಿ ಅರ್ಧದಷ್ಟು ಸಿಬ್ಬಂದಿಯನ್ನು ನಾವು ವಾಪಸ್​ ಕರೆಸಿಕೊಳ್ಳುತ್ತೇವೆ ಎಂದು ಸೂಚನೆಯಲ್ಲಿ ಉಲ್ಲೇಖಿಸಿತ್ತು.ಇದನ್ನೂ ಓದಿ:ಕರೊನಾದಿಂದ ಚೇತರಿಸಿಕೊಳ್ಳುತ್ತಿರುವವರ ಪ್ರಮಾಣದಲ್ಲಿ ರಾಷ್ಟ್ರವನ್ನು ಹಿಂದಿಕ್ಕಿದ ದೆಹಲಿ….
ಅದರ ಅನ್ವಯ ಪಾಕಿಸ್ತಾನದಿಂದ 38 ಭಾರತೀಯ ಅಧಿಕಾರಿಗಳು ದೇಶಕ್ಕೆ ವಾಪಸ್​ ಆಗುತ್ತಿದ್ದಾರೆ. ಅವರೆಲ್ಲ ಎರಡು ಬಸ್​ ಮತ್ತು ಒಂದು ಟ್ರಕ್​ ಮೂಲಕ ವಾಘಾ ಗಡಿಯನ್ನು ತಲುಪಿದ್ದಾರೆ. ಈ 38 ಅಧಿಕಾರಿಗಳಲ್ಲಿ 6 ಮಂದಿ ರಾಯಭಾರಿ ಕಚೇರಿ ಸಿಬ್ಬಂದಿಯಾಗಿದ್ದಾರೆ.
ಅಷ್ಟೇ ಅಲ್ಲ, ಭಾರತದಲ್ಲಿರುವ ಪಾಕ್​ ಹೈಕಮಿಷನ್​ನ ಸುಮಾರು 143 ಅಧಿಕಾರಿಗಳೂ ಕೂಡ ತಮ್ಮ ದೇಶಕ್ಕೆ ವಾಪಸ್​ ಆಗಿದ್ದಾರೆ. (ಏಜೆನ್ಸೀಸ್​)
ಕೋವಿಡ್​ಗೆ ಭಾರತದಲ್ಲಿ ಸಿದ್ಧವಾಗಿದೆ ಕೊವಾಕ್ಸಿನ್​ ಚುಚ್ಚುಮದ್ದು, ನಾಳೆಯಿಂದ ಮಾನವರ ಮೇಲೆ ಪ್ರಯೋಗ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:sixteen + 14 =
Remember me
