ನವದೆಹಲಿ :ಕಳೆದ 24 ಗಂಟೆಗಳಲ್ಲಿ ಭಾರತದಲ್ಲಿ 39,097 ಹೊಸ ಕರೊನಾ ಪ್ರಕರಣಗಳು ವರದಿಯಾಗಿದ್ದು, ಇದು ನಿನ್ನೆಗಿಂತ ಶೇ.10.6 ರಷ್ಟು ಅಧಿಕವಾಗಿದೆ ಎಂದು ಇಂದು ಬೆಳಗಿನ ವರದಿ ಹೇಳಿದೆ. ಮತ್ತೆ 546 ಜನರು ಕರೊನಾಕ್ಕೆ ಬಲಿಯಾಗಿದ್ದು, ಈವರೆಗಿನ ಒಟ್ಟು ಸಾವಿನ ಸಂಖ್ಯೆ 4.20 ಲಕ್ಷ ತಲುಪಿದೆ.
ದೇಶದಲ್ಲಿ ನಿತ್ಯದ ಕರೊನಾ ಪಾಸಿಟಿವಿಟಿ ದರವು ಶೇ. 2.40 ರಷ್ಟಿದೆ. ಕಳೆದ 33 ದಿನಗಳಿಂದ ಈ ದರವು ಶೇ. 3 ಕ್ಕಿಂತ ಕೆಳಗಿಳಿದಿದೆ.
ಕಳೆದ 24 ಗಂಟೆಗಳಲ್ಲಿ, ಕೇರಳದಲ್ಲಿ ಅತಿ ಹೆಚ್ಚು – ಅಂದರೆ 17,518 ಹೊಸ ಸೋಂಕು ಪ್ರಕರಣಗಳು ವರದಿಯಾಗಿವೆ. 132 ಸಾವುಗಳು ಸಂಭವಿಸಿವೆ. ಮಹಾರಾಷ್ಟ್ರದಲ್ಲಿ 6,753 ಹೊಸ ಪ್ರಕರಣಗಳು ಮತ್ತು 167 ಕರೊನಾ ಸಾವುಗಳು ಸಂಭವಿಸಿವೆ. ಒಡಿಶಾದಲ್ಲಿ 1,917, ತಮಿಳುನಾಡಿನಲ್ಲಿ 1,830 ಮತ್ತು ಆಂಧ್ರ ಪ್ರದೇಶದಲ್ಲಿ 1,747 ಪ್ರಕರಣಗಳು ದಾಖಲಾಗಿವೆ ಎಂದು ಕೇಂದ್ರ ಆರೋಗ್ಯ ಸಚಿವಾಲಯ ತಿಳಿಸಿದೆ.(ಏಜೆನ್ಸೀಸ್)
ಲಸಿಕೆ ಪಡೆದವರಲ್ಲಿ ಹೆಚ್ಚಿನ ಸೋಂಕು! ಆದರೆ, ಪಡೆಯದವರಲ್ಲಿ ಹೆಚ್ಚು ಗಂಭೀರ ಸ್ಥಿತಿ

ಹದಿಹರೆಯದವರ ಬೆಳವಣಿಗೆಗೆ ಉಪಯುಕ್ತವಾದ ಭುಜಂಗಾಸನ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:14 − 1 =
Remember me
