ಮುಂಬೈ:ಸತತ ಮೂರನೇ ದಿನವೂ ಭಾರತದ ಷೇರುಪೇಟೆಯಲ್ಲಿ ತಲ್ಲಣ ಮುಂದುವರಿದಿತ್ತು. ಶುಕ್ರವಾರ ಬಿಎಸ್​ಇ ಸೆನ್ಸೆಕ್ಸ್, ಎನ್​ಎಸ್​ಇ ನಿಫ್ಟಿ ಆರಂಭಿಕ ಚೇತರಿಕೆ ತೋರಿದರೂ ಬಳಿಕ ಜಾಗತಿಕ ವಿದ್ಯಮಾನಗಳಿಗೆ ಅನುಗುಣವಾಗಿ ಕುಸಿತ ಕಂಡಿದೆ. ಸೆನ್ಸೆಕ್ಸ್ ಬೆಳಗ್ಗೆ 60,000ದ ಗಡಿದಾಟಿದರೂ, ಬಳಿಕ 677.77 ಅಂಶ (1.13%) ಕುಸಿದು 59,306.93 ಅಂಶದಲ್ಲಿ ದಿನದ ವಹಿವಾಟು ಮುಗಿಸಿದೆ. ಇದೇ ರೀತಿ ನಿಫ್ಟಿ 185.60 ಅಂಶ (1.04%) ಕುಸಿದು 17,671.65 ಅಂಶದಲ್ಲಿ ದಿನದ ವಹಿವಾಟು ಕೊನೆಗೊಳಿಸಿದೆ.
ಐಆರ್​ಸಿಟಿ ಷೇರು ಮೌಲ್ಯ ಕುಸಿತ: ಐಆರ್​ಸಿಟಿಯು ಕನ್ವಿನೆನ್ಸ್ ಫೀಸ್ ಮೂಲಕ ಸಂಗ್ರಹಿಸುತ್ತಿದ್ದ ಆದಾಯದಲ್ಲಿ ಶೇಕಡ 50 ಕೇಂದ್ರ ಸರ್ಕಾರಕ್ಕೆ ನೀಡಬೇಕೆಂಬ ನಿರ್ಧಾರವನ್ನು ರೈಲ್ವೆ ಸಚಿವಾಲಯ ತೆಗೆದುಕೊಂಡಿತ್ತು. ಇದರಿಂದ ಐಆರ್​ಸಿಟಿ ಷೇರು ಮೌಲ್ಯ 820 ರೂಪಾಯಿಯಲ್ಲಿದ್ದುದು ದಿಢೀರ್ 685 ರೂಪಾಯಿಗೆ ಕುಸಿದಿತ್ತು. ಬಳಿಕ ಸರ್ಕಾರ ಆದೇಶ ಹಿಂಪಡೆದ ಕಾರಣ ಷೇರುಮೌಲ್ಯ ಚೇತರಿಕೆ ಕಂಡು 905ರ ಗಡಿದಾಟಿತ್ತು.
ಚಿನ್ನ, ಬೆಳ್ಳಿ ಕುಸಿತ: ಚಿನ್ನದ ದರ 10 ಗ್ರಾಮಿಗೆ 271 ರೂಪಾಯಿ ಕುಸಿದು 46,887 ರೂಪಾಯಿ ಆಗಿತ್ತು. ಬೆಳ್ಳಿಯ ದರ ಒಂದು ಕಿಲೋಕ್ಕೆ 687 ರೂಪಾಯಿ ಕುಸಿದು 63,210 ರೂಪಾಯಿ ಆಗಿತ್ತು.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen + twenty =
Remember me
