ಮೂರು ವರ್ಷದ ಕಂದಮ್ಮವೊಂದು ಮುದ್ದು ಮುದ್ದಾಗಿ ಹಾಡಿದ ದಿಲ್​ ಹೈ ಚೋಟಾ ಸಾ… ಚೋಟಿ ಸಿ ಆಶಾ…. ಹಾಡು ನೆಟ್ಟಿಗರ ಮನಗೆದ್ದಿದೆ.
ರೊಜಾ ಹಿಂದಿ ಚಿತ್ರದ ಜನಪ್ರಿಯ ಗೀತೆಯನ್ನು ತನ್ನ ತಂದೆ ಮಾಧವ ಬೀನಾ ಅಗರವಾಲ್​ ಅವರೊಂದಿಗೆ ಹಾಡಿರುವ ವೇದಾ ಅಗರವಾಲ್​ ಈ ವಿಡಿಯೋ ಜಾಲತಾಣದಲ್ಲಿ ಅಪಾರ ಗಮನ ಸೆಳೆದಿದೆ.
ತನ್ನ ತಂದೆಯೊಂದಿಗೆ ವೇದಿಕೆ ಮೇಲಿರುವ ಪುಟಾಣಿ ವೇದಾ, ತಾನೊಬ್ಬಳೆ ಹಾಡುತ್ತೇನೆ. ನೀವು ಹಿಂದೆ ನಿಲ್ಲಿ ಎಂದು ತಂದೆಯನ್ನು ಸರಿಸುವಾಗ ಪ್ರೇಕ್ಷಕರು ಹರ್ಷೋದ್ಗಾರ ಮಾಡುತ್ತಾರೆ. ನಂತರ ತಾನೇ ಹಾಡಲು ಆರಂಭಿಸುತ್ತಾಳೆ. ಆಮೇಲೆ ಆಕೆಯ ತಂದೆಯೂ ಬಂದು ಹಾಡು ಹಾಡುತ್ತಾರೆ.
ಈ ವಿಡಿಯೋವನ್ನು ವೇದಾ ಅವಳ ಅಮ್ಮ ಮೇಘಾ ಅಗರವಾಲ್​ ಟ್ವೀಟರ್​ನಲ್ಲಿ ಶೇರ್​ ಮಾಡಿದ್ದು 15 ಸಾವಿರಕ್ಕೂ ಹೆಚ್ಚು ಮಂದಿ ಲೈಕ್​ ಮಾಡಿದ್ದು, 7.7 ಲಕ್ಷ ಮಂದಿ ಇದನ್ನು ವೀಕ್ಷಿಸಿದ್ದಾರೆ.
ನನ್ನ 3 ವರ್ಷದ ಮಗಳು ಆಕೆಯ ತಂದೆಯೊಂದಿಗೆ ಮೊದಲ ಬಾರಿಗೆ ವೇದಿಕೆಯಲ್ಲಿ ಹಾಡುತ್ತಿದ್ದಾಳೆ. ಆಕೆಯನ್ನು ಹರಸಿ ಎಂದು ಬರೆದುಕೊಂಡಿದ್ದಾರೆ ಮೇಘಾ ಅಗರವಾಲ್​.(ಏಜೆನ್ಸೀಸ್​)

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:three − 1 =
Remember me
