ಚಿಂದ್ವಾರಾ (ಮಧ್ಯಪ್ರದೇಶ):ಮೂರು ವರ್ಷದ ಬಾಲಕಿಗೆ ಹತ್ತು ರೂಪಾಯಿಯ ಆಮಿಷ ಒಡ್ಡಿ, ಆಕೆಯ ಮೇಲೆ ಅತ್ಯಾಚಾರ ಮಾಡಿದ್ದೂ ಅಲ್ಲದೇ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮಧ್ಯಪ್ರದೇಶದ ಚಿಂದ್ವಾರಾದಲ್ಲಿ ನಡೆದಿದೆ.
ರಿತೇಶ್ ಸಿಂಗ್ ದುರ್ವೆ(22) ಹಾಗೂ ಧನ್ಪಾಲ್(21) ಎಂಬ ಯುವಕರು ಬಾಲಕಿಯ ಮೇಲೆ ಅತ್ಯಾಚರ ಎಸಗಿ ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಜಲಾಶಯಕ್ಕೆ ಎಸೆದಿದ್ದಾರೆ.
ಮನೆಯ ಬಳಿ ಆಟಾಡುತ್ತಿದ್ದ ಬಾಲಕಿಗೆ 10ರೂ ಕೊಟ್ಟು ಆಮಿಷವೊಡ್ಡಿ ತಮ್ಮ ಮನೆಗೆ ಕರೆದುಕೊಂಡು ಹೋಗಿ ಇಬ್ಬರು ಸೇರಿ ಅತ್ಯಾಚಾರ ಮಾಡಿದ್ದಾರೆ. ನಂತರ ಆಕೆಯನ್ನು ಕೊಂದು ಪ್ಲಾಸ್ಟಿಕ್ ಚೀಲದಲ್ಲಿ ತುಂಬಿಸಿ ಜಲಾಶಯಕ್ಕೆ ಎಸೆದಿದ್ದಾರೆ.
ಇದನ್ನೂ ಓದಿ:ಅಂಗಡಿಗೆ ಬೆಂಕಿ, ಸಾಮಗ್ರಿ ಜತೆ ಮಾಲೀಕನೂ ಜೀವಂತ ದಹನ
ಬಾಲಕಿಯನ್ನು ಎಷ್ಟು ಹುಡುಕಿದರೂ ಪಾಲಕರಿಗೆ ಆಕೆ ಎಲ್ಲಿ ಹೋದಳು ಎಂಬುದು ತಿಳಿಯಲಿಲ್ಲ. ನಂತರ ಪೊಲೀಸರಲ್ಲಿ ದೂರು ದಾಖಲು ಮಾಡಿದ್ದಾರೆ.
ಆಕೆಯ ಶವ ಮೂರು ದಿನಗಳ ಬಳಿಕ ಸರೋವರದಲ್ಲಿ ಪತ್ತೆಯಾದಾಗ ಆಕೆಯ ಮೇಲೆ ಅತ್ಯಾಚಾರ ನಡೆದಿರುವುದು ತಿಳಿದುಬಂದಿದೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಈ ಕೃತ್ಯ ಎಸಗಿರುವುದಾಗಿ ಒಪ್ಪಿಕೊಂಡಿದ್ದಾರೆ ಎನ್ನಲಾಗಿದೆ.(ಏಜೆನ್ಸೀಸ್‌)
ವಿಳಾಸ ಕೊಡಿ ಪ್ಲೀಸ್‌… ಅಜ್ಜಿಯ ಹುಡುಕಾಟದಲ್ಲಿ ನಟ ಸೋನು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:twelve + 11 =
Remember me
