ಬಿಹಾರ:ಕರೊನಾ ಸಮಯದಲ್ಲಿ ಸಂಕಷ್ಟಕ್ಕೀಡಾಗಿದ್ದ ಹಲವರಿಗೆ ನಾನಾ ಥರದಲ್ಲಿ ನೆರವಾಗಿದ್ದ ಬಾಲಿವುಡ್ ನಟ ಸೋನು ಸೂದ್ ಇದೀಗ ಎರಡೂವರೆ ವರ್ಷಗಳ ಮಗುವೊಂದು ಹೊಸ ಜೀವನ ಪಡೆದುಕೊಳ್ಳಲು ಸಹಾಯ ಮಾಡಿದ್ದಾರೆ.
ಬಿಹಾರದ ನವಾಡ ಜಿಲ್ಲೆಯ ಎರಡೂವರೆ ವರ್ಷದ ಹುಡುಗಿಗೆ ಹುಟ್ಟಿನಿಂದಲೇ ಎರಡು ಕೈ-ಕಾಲು ಹೆಚ್ಚುವರಿ ಆಗಿತ್ತು. ಅಂದರೆ ಒಟ್ಟು ನಾಲ್ಕು ಕೈ, ನಾಲ್ಕು ಕಾಲುಗಳನ್ನು ಹೊಂದಿದ್ದರಿಂದ ಕಷ್ಟ ಅನುಭವಿಸುತ್ತಿದ್ದ ಈ ಮಗುವಿಗೆ ಚಿಕಿತ್ಸೆ ಭಾರಿ ಹಣ ಬೇಕಾದ್ದರಿಂದ ಮಾಧ್ಯಮವೊಂದು ಈ ಕುರಿತು ಬೆಳಕು ಚೆಲ್ಲಿತ್ತು.
ಇದು ನಟ ಸೋನು ಸೂದ್ ಗಮನಕ್ಕೂ ಬಂದಿತ್ತು. ಮೇ 28ರಂದು ಈ ಕುರಿತು ರಿಟ್ವೀಟ್ ಮಾಡಿದ್ದ ಸೋನು ಸೂದ್, ಚಿಂತೆ ಮಾಡಿಕೊಳ್ಳಬೇಡಿ, ಚಿಕಿತ್ಸೆ ಶುರುವಾಗಿದೆ, ಪ್ರಾರ್ಥಿಸಿ ಎಂಬುದಾಗಿ ಟ್ವೀಟ್ ಮಾಡಿದ್ದರು. ಇಂದು ಆ ಕುರಿತು ಮತ್ತೆ ಟ್ವೀಟ್ ಮೂಲಕ ಮಾಹಿತಿ ಹಂಚಿಕೊಂಡಿರುವ ಸೋನು ಸೂದ್, ಜಗತ್ತಿನ ಅತ್ಯಂತ ಕ್ಲಿಷ್ಟ ಶಸ್ತ್ರಚಿಕಿತ್ಸೆಗಳಲ್ಲಿ ಒಂದು ಯಶಸ್ವಿಯಾಗಿದೆ ಎಂದು ಆಪರೇಷನ್​ಗೆ ಒಳಗಾಗಿರುವ ಆ ಮಗುವಿನ ಫೋಟೋ ಪೋಸ್ಟ್ ಮಾಡಿಕೊಂಡಿದ್ದಾರೆ. ವೈದ್ಯರು ಮಗುವಿಗೆ ಹೆಚ್ಚುವರಿಯಾಗಿ ಇರುವ ಎರಡು ಕೈ ಹಾಗೂ ಎರಡು ಕಾಲುಗಳನ್ನುಶಸ್ತ್ರಚಿಕಿತ್ಸೆ ಮಾಡಿ ತೆಗೆದಿದ್ದು, ಮಗು ಈಗ ಎಲ್ಲರಂತೆ ಸಹಜ ಜೀವನ ನಡೆಸುವಂತಾಗಿದೆ.
ಯುವತಿಯನ್ನು ಬೆಂಗಳೂರಿಗೆ ಕರೆದೊಯ್ಯಲು 3 ಆ್ಯಂಬುಲೆನ್ಸ್, ಶಿವಮೊಗ್ಗದಿಂದಲೇ ಜೀರೋ ಟ್ರಾಫಿಕ್​!

ಹೋಮ್​ವರ್ಕ್ ಮಾಡದ 5 ವರ್ಷದ ಮಗಳಿಗೆ ಅಮ್ಮನಿಂದಲೇ ಇದೆಂಥ ಶಿಕ್ಷೆ!

ರಾಜಧಾನಿಯಲ್ಲಿ ಸಿಗ್ತಿದೆ ಅರ್ಧಬೆಲೆಗೆ ಮದ್ಯ, ಕಳ್ಳಸಾಗಾಟ ಶುರು: 70ಕ್ಕೂ ಅಧಿಕ ಮಂದಿಯ ಬಂಧನ..

ಬೆಂಗಳೂರು: ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿನ ಬದಲಾವಣೆಯಿಂದಾಗಿ ಅನೇಕ ಜನರು ಅಧಿಕ ತೂಕದಿಂದ ಬಳಲುತ್ತಿದ್ದಾರೆ. ಆದರೆ…
ಬೆಂಗಳೂರು:  ಔಷಧೀಯ ಗುಣಗಳಿಂದ ಸಮೃದ್ಧವಾಗಿರುವ ತೆಂಗಿನ ನೀರು ನಿಮ್ಮ  ಆರೋಗ್ಯವನ್ನು ಹೆಚ್ಚಿನ ಪ್ರಮಾಣದಲ್ಲಿ ಸುಧಾರಿಸುತ್ತದೆ. ನೀವು…
ಬೆಂಗಳೂರು:  ಬಿಕ್ಕಳಿಕೆ ಯಾರನ್ನಾದರೂ ನೆನಪಿಸುತ್ತದೆ ಎಂದು ದೊಡ್ಡವರು ಹೇಳುತ್ತಾರೆ. ಅಲ್ಲದೆ ಶಾಕಿಂಗ್ ಏನಾದರೂ ಹೇಳಿದರೆ ತಕ್ಷಣ…
Sign in to your account
Please enter an answer in digits:1 + thirteen =
Remember me
