ಅಹಮದಾಬಾದ್​: ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರ ಆರೋಗ್ಯದ ಬಗ್ಗೆ ಕಳೆದ ಕೆಲವು ದಿನಗಳಿಂದ ಇಲ್ಲಸಲ್ಲದ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡಿದ್ದವು. ಈ ರೂಮರ್​ ಹಬ್ಬಿಸಿದ್ದ ನಾಲ್ವರು ಈಗ ಪೊಲೀಸರ ಅತಿಥಿಯಾಗಿದ್ದಾರೆ.
ಇದನ್ನೂ ಓದಿ:ಅಮಿತ್ ಷಾ ರ‍್ಯಾಲಿಯಲ್ಲಿ ಗೋಲಿ ಮಾರೋ ಘೋಷಣೆ: ಮತ್ತೊಬ್ಬ ಅರೆಸ್ಟ್​, ಬಂಧಿತರ ಸಂಖ್ಯೆ ನಾಲ್ಕಕ್ಕೆ ಏರಿಕೆ
ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದ ರೂಮರ್​ಗಳನ್ನು ಗಮನಿಸಿ ಕೇಂದ್ರ ಗೃಹ ಸಚಿವ ಅಮಿತ್ ಷಾ ಶನಿವಾರ ಸ್ಪಷ್ಟೀಕರಣವನ್ನೂ ಟ್ವೀಟ್ ಮೂಲಕ ನೀಡಿದ್ದರು. ಇದರ ಬೆನ್ನಲ್ಲೇ, ಅವರ ತವರು ರಾಜ್ಯ ಗುಜರಾತ್​ನಿಂದ ನಾಲ್ವರ ಬಂಧನದ ಸುದ್ದಿ ಪ್ರಕಟವಾಗಿದೆ.
ಇದನ್ನೂ ಓದಿ:ಪಶ್ಚಿಮ ಬಂಗಾಳದಲ್ಲಿ ಅಮಿತ್ ಷಾ ರ‍್ಯಾಲಿಗೆ ಸೇರಲು ಯತ್ನಿಸಿದ್ದ ಗನ್​ ಹಿಡಿದ ವ್ಯಕ್ತಿ!: ಯಾರಾತ?
ಬಂಧಿತರನ್ನು ಫಿರೋಜ್​ ಖಾನ್​, ಸರ್ಫರಾಜ್​, ಸಾಜ್ಜದ್ ಅಲಿ, ಶಿರಾಜ್​ ಹುಸೇನ್ ಎಂದು ಗುರುತಿಸಲಾಗಿದ್ದು, ಸೈಬರ್ ಅಪರಾಧದ ಪ್ರಕಾರ ಎಫ್​ಐಆರ್ ದಾಖಲಾಗಿದೆ. ಇವರು ಇಲ್ಲ ಸಲ್ಲದ ಸುದ್ದಿಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದುದು ಪತ್ತೆಯಾದ ಕಾರಣ ಅಹಮದಾಬಾದ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. (ಏಜೆನ್ಸೀಸ್)
ಷಾ ಅವರ ಆರೋಗ್ಯಕ್ಕೇನಾಯಿತು!?- ಅವರ ಟ್ವೀಟ್​​ನಲ್ಲೇನಿದೆ?

ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
ಭಾರತದಲ್ಲಿ ಬೇಳೆಕಾಳುಗಳು ಜನರು ಬಹುಮುಖ್ಯ ಭಕ್ಷ್ಯವಾಗಿದೆ. ಬೇಳೆಕಾಳುಗಳನ್ನು ವಾರಕ್ಕೊಮ್ಮೆಯಾದರೂ ತಿನ್ನಲಾಗುತ್ತದೆ. ಈ ಬೇಳೆಕಾಳುಗಳು ಪೋಷಕಾಂಶಗಳ ಆಗರವಾಗಿದ್ದು,…
ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
Sign in to your account
Please enter an answer in digits:5 × three =
Remember me
