ನವದೆಹಲಿ:ಭಾರತದ ಮುಂದಿನ ಗಗನಯಾನ ಮಿಷನ್​ಗೆ ನಾಲ್ವರು ಗಗನಯಾತ್ರಿಗಳನ್ನು ಗುರುತಿಸಿರುವುದಾಗಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ(ಇಸ್ರೋ)ಯ ಮುಖ್ಯಸ್ಥ ಕೆ.ಶಿವನ್​ ತಿಳಿಸಿದ್ದಾರೆ.
ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಗಗನಯಾನವು ಭಾರತೀಯ ಮಾನವ ಬಾಹ್ಯಾಕಾಶ ಹಾರಾಟ ಕಾರ್ಯಕ್ರಮದ ಭಾಗವಾಗಿ 2022ರ ಬಳಿಕ 7 ದಿನಗಳ ಕಾಲ ಗಗನಯಾತ್ರಿಗಳನ್ನು ಕಳುಹಿಸಲು ಭಾರತೀಯ ಸಿಬ್ಬಂದಿ ಕಕ್ಷೀಯ ಬಾಹ್ಯಾಕಾಶ ನೌಕೆಯಾಗಿದೆ ಎಂದು ಹೇಳಿದರು.
ಹಲವಾರು ಗಗನಯಾನ ವ್ಯವಸ್ಥೆಯನ್ನು ಪರೀಕ್ಷೆ ಮಾಡಬೇಕಿದೆ. ಇದರೊಂದಿಗೆ ಸಿಬ್ಬಂದಿ ತರಬೇತಿಯು ಈ ವರ್ಷದ ಪ್ರಮುಖ ಚಟುವಟಿಕೆಯಾಗಿರಲಿದೆ ಎಂದು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದರು.
ಇದೇ ವೇಳೆ ಚಂದ್ರಯಾನ-3ರ ಬಗ್ಗೆ ಮಾತನಾಡಿದ ಅವರು ಯೋಜನೆಗೆ ಸರ್ಕಾರ ಅನುಮೋದನೆ ನೀಡಿದ್ದು, ಚಂದ್ರಯಾನ ಯೋಜನೆ ಪ್ರಗತಿಯಲ್ಲಿದೆ. ಮುಂದಿನ ವರ್ಷ ಉಡಾವಣೆಯಾಗಬಹುದೆಂದು ತಿಳಿಸಿದರು. ಸದ್ಯ ಉಡಾವಣೆ ಮಾಡಿರುವ ಚಂದ್ರಯಾನ-2 ತುಂಬಾ ಯಶಸ್ವಿಯಾಗಿದೆ. ಆದರೆ, ವಿಕ್ರಮ್​ ಲ್ಯಾಂಡರ್​ನ​ ಸಾಫ್ಟ್​ ಲ್ಯಾಂಡ್​ ಸಫಲವಾಗಲಿಲ್ಲ ಎಂದು ಇದೇ ವೇಳೆ ಬೇಸರ ವ್ಯಕ್ತಪಡಿಸಿದರು.
ಇನ್ನು ಎರಡನೇ ಬಾಹ್ಯಾಕಾಶ ಕೇಂದ್ರ ನಿರ್ಮಾಣಕ್ಕೆ ಭೂಸ್ವಾಧೀನ ಪ್ರಕ್ರಿಯೆ ನಡೆಯುತ್ತಿದ್ದು, ತಮಿಳುನಾಡಿದ ತೂತುಕುಡಿಯಲ್ಲಿ ನಿರ್ಮಾಣವಾಗಲಿದೆ ಎಂದು ತಿಳಿಸಿದರು.(ಏಜೆನ್ಸೀಸ್​)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:fifteen − ten =
Remember me
