ಶ್ರೀನಗರ:ಇಂದು ಜಮ್ಮುಕಾಶ್ಮೀರದಲ್ಲಿ ಬಿಜೆಪಿ ಮುಖಂಡನೋರ್ವನ ಮೇಲೆ ಉಗ್ರರು ಗುಂಡಿನ ದಾಳಿ ನಡೆಸಿದ ಬೆನ್ನಲ್ಲೇ, ಬಿಜೆಪಿಯ ನಾಲ್ವರು ಮುಖಂಡರು ಪಕ್ಷಕ್ಕೆ ರಾಜೀನಾಮೆ ನೀಡಿದ್ದಾರೆ.
ಇಂದು ಬುಡ್​ಗಾಮ್​​ ಜಿಲ್ಲೆಯ ಒಬಿಸಿ ಮೋರ್ಚಾ ಅಧ್ಯಕ್ಷ ಅಬ್ದುಲ್​ ಹಮೀದ್​ ನಜರ್​ ಮೇಲೆ ಗುಂಡಿನ ದಾಳಿ ನಡೆದಿದೆ. ಅವರು ತೀವ್ರವಾಗಿ ಗಾಯಗೊಂಡಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.
ಇದೀಗ ಬುಡ್​ಗಾಮ್ ಜಿಲ್ಲೆಯ ಬಿಜೆಪಿ ಎಂಎಂ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸೇರಿ ಒಟ್ಟು ನಾಲ್ವರು ರಾಜೀನಾಮೆ ನೀಡಿದ್ದಾರೆ.ಇಂದು ಮುಂಜಾನೆ ಉಗ್ರರು ಅಬ್ದುಲ್​ ಮೇಲೆ ಗುಂಡು ಹಾರಿಸಿದ್ದಾರೆ. ಕಾಶ್ಮೀರದಲ್ಲಿ ಬಿಜೆಪಿ ನಾಯಕರ ಮೇಲಿನ ದಾಳಿಗಳು ಹೆಚ್ಚಾಗುತ್ತಿವೆ. ಇದು ಪಾಕಿಸ್ತಾನ ಹತಾಶೆಯಿಂದ ಮಾಡುತ್ತಿರುವ ಕೆಲಸ ಎಂದು ಜಮ್ಮುಕಾಶ್ಮೀರ ಬಿಜೆಪಿ ಅಧ್ಯಕ್ಷ ರವೀಂದ್ರ ರೈನಾ ತಿಳಿಸಿದ್ದಾರೆ.ಇದನ್ನೂ ಓದಿ:PHOTO GALLERY: ಕಿಚ್ಚ ಸುದೀಪ್​ ದತ್ತು ಪಡೆದ ಶಾಲೆಗಳ ನೈಜ ಸ್ಥಿತಿ ಇಲ್ಲಿದೆ ನೋಡಿ..
ಜಮ್ಮುಕಾಶ್ಮೀರದಲ್ಲಿ ಬಿಜೆಪಿ ನಾಯಕರ ಸಂಖ್ಯೆ ಹೆಚ್ಚುತ್ತಿರುವುದನ್ನು ಪಾಕಿಸ್ತಾನಕ್ಕೆ ಸಹಿಸಲಾಗುತ್ತಿಲ್ಲ. ಹಾಗಾಗಿ ಉಗ್ರರನ್ನು ಛೂ ಬಿಡುವ ಮೂಲಕ, ಹೇಡಿತನದ ನಡೆ ತೋರುತ್ತಿದೆ ಎಂದು ಹೇಳಿದ್ದಾರೆ.
ಜುಲೈನಲ್ಲಿ ಬಂಡಿಪೋರಾ ಬಿಜೆಪಿ ನಾಯಕ ಶೇಖ್​ ವಾಸೀಂ ಬಾರಿ ಅವರನ್ನು ಉಗ್ರರು ಕೊಂದಿದ್ದಾರೆ. ಅವರ ಸೋದರ, ತಂದೆಯೂ ಕೂಡ ಸಾವನ್ನಪ್ಪಿದ್ದಾರೆ. ಇವೆಲ್ಲ ಬೆಳವಣಿಗೆಗಳ ಬಳಿಕ ಈಗ ನಾಲ್ಕು ಮುಖಂಡರು ರಾಜೀನಾಮೆ ನೀಡಿದ್ದಾರೆ. (ಏಜೆನ್ಸೀಸ್​)
ಕಡತಗಳಿಗೆ ಸಹಿ ಹಾಕಲೆಂದೆ ಐಎಎಸ್ ಅಧಿಕಾರಿಯಾದೆ; ಅಪ್ಪನ ಕನಸು ನನಸಾದ ಸಾರ್ಥಕತೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:one × four =
Remember me
