ಅಮರಾವತಿ​:ಕ್ರಿಸ್​ಮಸ್​ ಪ್ರಯುಕ್ತ ಮಕ್ಕಳು ಮಾಡುತ್ತಿದ್ದ ಮೆರವಣಿಗೆಯ ಮೇಲೆ ಲಾರಿಯೊಂದು ಚಲಿಸಿದ್ದು, ನಾಲ್ವರು ಮಕ್ಕಳು ಸಾವನ್ನಪ್ಪಿರುವ ದುರ್ಘಟನೆ ಆಂಧ್ರಪ್ರದೇಶದ ಕರ್ನೂಲು ಜಿಲ್ಲೆಯಲ್ಲಿ ನಡೆದಿದೆ.
ಇದನ್ನೂ ಓದಿ:ಹೆಂಡತಿ, ಮಕ್ಕಳನ್ನು ಕೊಂದು, ಆತ್ಮಹತ್ಯೆ ಮಾಡಿಕೊಂಡ ಪತಿ! ಕಿಟಕಿಯಿಂದ ನೋಡಿದ ಗ್ರಾಮಸ್ಥರಿಗೆ ಕಾದಿತ್ತು ಶಾಕ್​!
ಮಂಗಳವಾರದಂದು ಹೈದರಾಬಾದ್-ಕಡಪಾ ರಾಷ್ಟ್ರೀಯ ಹೆದ್ದಾರಿ ಸಮೀಪದ ಯರಂಗುಂಟ್ಲಾ ಗ್ರಾಮದಲ್ಲಿ ಮಕ್ಕಳ ಮೆರವಣಿಗೆ ಏರ್ಪಡಿಸಲಾಗಿತ್ತು. ಸುಮಾರು 40 ಮಕ್ಕಳು ಹಾಗೂ ಹಿರಿಯರು ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಈ ವೇಳೆ ಹೆದ್ದಾರಿಯಲ್ಲಿ ಬರುತ್ತಿದ್ದ ಲಾರಿ ನಿಯಂತ್ರಣ ತಪ್ಪಿದ್ದು, ಮೆರವಣಿಗೆಯ ಮೇಲೆ ಹರಿದಿದೆ. 8ರಿಂದ 15 ವಯಸ್ಸಿನ ಮೂರು ಮಕ್ಕಳು ಸ್ಥಳದಲ್ಲಿಯೇ ಮೃತರಾಗಿದ್ದಾರೆ. ಇನ್ನೊಂದು ಮಗು ಆಸ್ಪತ್ರೆಗೆ ದಾಖಲಾಗಿ ಒಂದು ಗಂಟೆಯಲ್ಲಿ ಸಾವನ್ನಪ್ಪಿದೆ. 12 ಜನರಿಗೆ ಗಾಯವಾಗಿದೆ. ಅದರಲ್ಲಿ ಐದು ಮಂದಿಗೆ ಗಂಭೀರ ಗಾಯವಾಗಿದ್ದು ಅವರನ್ನು ಕರ್ನೂಲು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಉಳಿದವರನ್ನು ನಂದ್ಯಾಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಗಾಯಾಳುಗಳಲ್ಲಿ ಎಂಟು ಮಕ್ಕಳಿರುವುದಾಗಿ ತಿಳಿಸಲಾಗಿದೆ.
ಇದನ್ನೂ ಓದಿ:ದೇವಸ್ಥಾನಕ್ಕೆ ಕದಿಯಲು ಹೋದವ ಅಲ್ಲೇ ಮಲಗಿದ! ಪೊಲೀಸರು ಬಂದು ಎಬ್ಬಿಸಿದರೆ, ‘ಚಳಿ, ಮಲಗಲು ಬಿಡಿ’ ಎಂದ!
ಅಪಘಾತ ಮಾಡಿದ ಲಾರಿ ಚಾಲಕ, ಗಾಡಿಯನ್ನು ನಿಲ್ಲಿಸದೆ ತೆರಳಿದ್ದಾನೆ. ಗ್ರಾಮಸ್ಥರ ಸಹಾಯದೊಂದಿಗೆ ಆತನನ್ನು ಬಾತಲೂರು ಬಳಿ ಹಿಡಿಯಲಾಗಿದೆ. ಪ್ರಕರಣದ ಕುರಿತು ತನಿಖೆ ಮುಂದುವರಿಸಿರುವುದಾಗಿ ಪೊಲೀಸರು ತಿಳಿಸಿದ್ದಾರೆ. ಮೃತ ಮಕ್ಕಳ ಬಗ್ಗೆ ಸಂತಾಪ ಸೂಚಿಸಿರುವ ಮುಖ್ಯಮಂತ್ರಿ ಜಗನ್​ ಮೋಹನ್​ ರೆಡ್ಡಿ, ಗಾಯಾಳುಗಳಿಗೆ ಸೂಕ್ತ ಚಿಕಿತ್ಸೆ ನೀಡುವಂತೆ ಸೂಚನೆ ನೀಡಿದ್ದಾರೆ. (ಏಜೆನ್ಸೀಸ್​)
https://www.vijayavani.net/bride-leaves-from-marriage-hall/
ಜೀವಂತ ಗೂಬೆ ತಲೆ ಕತ್ತರಿಸಿದ ಆರೇ ತಿಂಗಳಲ್ಲಿ ಯುವತಿಗೆ ಬಂತು ಘೋರ ಸಾವು: ಜೀವಿಯ ಶಾಪ ತಟ್ಟಿತಾ?!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:eleven − seven =
Remember me
