ತಮಿಳುನಾಡು:ಚಲಿಸುತ್ತಿದ್ದ ರೈಲಿನ ನಾಲ್ಕು ಬೋಗಿಗಳು ಬೇರ್ಪಟ್ಟಿರುವ ಘಟನೆ ಸೈದಾಪೇಟ್ ಎಂಬಲ್ಲಿ ನಡೆದಿದೆ. ಘಟನೆಯಿಂದ ಬೋಗಿಯಲ್ಲಿದ್ದ ಪ್ರಯಾಣಿಕರು ಒಂದು ಕ್ಷಣ ಗಾಬರಿಗೊಳಗಾಗಿದ್ದಾರೆ. ಅವಘಡದಿಂದಾಗಿ ಚೆನ್ನೈ ಬೀಚ್ ಮತ್ತು ತಾಂಬರಂ-ಚೆಂಗಲಪಟ್ಟು ನಡುವಿನ ರೈಲು ಸೇವೆಯಲ್ಲಿ ಸುಮಾರು ಒಂದೂವರೆ ಗಂಟೆಗಳ ಕಾಲ ವ್ಯತ್ಯಯ ಉಂಟಾಗಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಹಿಂದುಗಳ ಜಾತ್ರೆಯಲ್ಲಿ ಆರೇಂಜ್ ಜ್ಯೂಸ್ ವಿತರಿಸಿದ ಮುಸ್ಲಿಮರು; ಭಾವೈಕ್ಯತೆಗೆ ಸಾಕ್ಷಿಯಾದ ಜನರು
ಬೆಳಗ್ಗೆ 5 ಗಂಟೆಗೆ ಬೀಚ್ ನಿಲ್ದಾಣದಿಂದ ಹೊರಟ ರೈಲು ಚೆಂಗಲ್ಪಟ್ಟು ಕಡೆಗೆ ಹೋಗುತ್ತಿತ್ತು. ಈ ವೇಳೆ ಅವಘಡ ಸಂಭವಿಸಿದೆ. ಸೈದಾಪೇಟ್ ರೈಲು ನಿಲ್ದಾಣದಲ್ಲಿ ರೈಲು ತನ್ನ ವೇಗ ಹೆಚ್ಚಿಸುವ ಸಂದರ್ಭದಲ್ಲಿ ಹಿಂದಿನ ನಾಲ್ಕು ಬೋಗಿಗಳು ಕೋಚ್​ನಿಂದ ಬೇರ್ಪಟ್ಟಿವೆ. ಘಟನೆಯಿಂದ ಎಗ್ಮೋರ್ ಮತ್ತು ಚೆಂಗಲ್ಪಟ್ಟು ನಡುವಿನ ಎಲ್ಲಾ ಇತರ ಇಎಂಯು ಉಪನಗರ ರೈಲುಗಳು ಸ್ಥಗಿತಗೊಂಡಿವೆ.
ಘಟನೆ ಸಂಭವಿಸುತ್ತಿದ್ದಂತೆ ನಿರ್ವಹಣಾ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಪರಿಶೀಲನೆ ನಡೆಸಿದ್ದಾರೆ. ಬಳಿಕ ಬೇರ್ಪಟ್ಟಿರುವ ಬೋಗಿಗಳನ್ನು ಲೊಕೊಮೊಟಿವ್ ವರ್ಕ್‌ಶಾಪ್‌ಗೆ ಸ್ಥಳಾಂತರಿಸಲಾಗಿದೆ. ಈ ಬಗ್ಗೆ ರೈಲ್ವೆ ಅಧಿಕಾರಿಗಳು ಸಮಗ್ರ ತನಿಖೆ ನಡೆಸಬೇಕು ಎಂದು ಪ್ರಯಾಣಿಕರು ಒತ್ತಾಯಿಸಿದ್ದಾರೆ.(ಏಜೆನ್ಸೀಸ್)
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:17 − 6 =
Remember me
