ನವದೆಹಲಿ:ಇತ್ತೀಚಿನ ದಿನಗಳಲ್ಲಿ ಹೆಚ್ಚು ಹೆಚ್ಚು ಡ್ರಗ್ಸ್​ ಪ್ರಕರಣಗಳು ದಾಖಲಾಗುತ್ತಿವೆ. ವಿದೇಶಗಳಿಂದ ವಿವಿಧ ರೀತಿಯಲ್ಲಿ ಡ್ರಗ್ಸ್​ ಕಳ್ಳಸಾಗಣೆ ಮಾಡುತ್ತಿರುವ ಸುದ್ದಿಗಳನ್ನು ನೀವು ಕೇಳಿರುತ್ತೀರಿ. ಆದರೆ ಇಲ್ಲೊಬ್ಬ ವ್ಯಕ್ತಿ ಡ್ರಗ್ಸ್​ ಕಳ್ಳಸಾಗಣೆ ಮಾಡಲು ಬಳಸಿಕೊಂಡ ಮಾರ್ಗ ಕೇಳಿದರೆ ನೀವು ದಂಗಾಗುವುದು ಗ್ಯಾರಂಟಿ.
ಇದನ್ನೂ ಓದಿ:ಲವ್​ ಜಿಹಾದ್​ ಎಂದು ಕೇಸ್ ಹಾಕಿದ್ಲು- ಆಮೇಲೆ ನೋಡಿದ್ರೆ ಎಲ್ಲಾ ಮೊದಲೇ ಮುಗಿಸಿದ್ಲು!
ದೆಹಲಿಯ ಅಂತರರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಡ್ರಗ್ಸ್​ ಕಳ್ಳಸಾಗಣೆಯಾಗುವ ಆಂತರಿಕ ಮಾಹಿತಿಯನ್ನು ಆಧರಿಸಿ, ಶನಿವಾರದಂದು ವಿಮಾನ ನಿಲ್ದಾಣದಲ್ಲಿ ಕಸ್ಟಮ್ಸ್​ ಅಧಿಕಾರಿಗಳು ಹದ್ದಿನ ಕಣ್ಣಿಟ್ಟು ಕಾಯುತ್ತಿದ್ದರು. ಅಫ್ಘಾನಿಸ್ತಾನ ಮೂಲದ ಒಬ್ಬ ವ್ಯಕ್ತಿಯ ಮೇಲೆ ಅನುಮಾನ ಬಂದ ಹಿನ್ನೆಲೆಯಲ್ಲಿ ಆತನನ್ನು ಪರೀಕ್ಷೆಗೆ ಒಳಪಡಿಸಲಾಗಿದೆ. ಆತನ ಹೊಟ್ಟೆಯ ಭಾಗದಲ್ಲಿ ಅನುಮಾನಾಸ್ಪದ ವಸ್ತು ಇರುವ ಅನುಮಾನ ಬಂದಿದ್ದು, ಆತನನ್ನು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲಾಗಿತ್ತು. ಆಗ ಒಂದು ದೊಡ್ಡ ರಹಸ್ಯ ಬಯಲಾಗಿದೆ.
ಇದನ್ನೂ ಓದಿ:ಕರೊನಾ ಲಸಿಕೆ ಕಾಯುವಿಕೆ ಅಂತ್ಯ: ಕೋವಿಶೀಲ್ಡ್​, ಕೋವಾಕ್ಸಿನ್​ ಬಳಕೆಗೆ ಅನುಮೋದನೆ
ಅಫ್ಘಾನ್​ ವ್ಯಕ್ತಿಯ ಹೊಟ್ಟೆಯೊಳಗೆ ಬರೋಬ್ಬರಿ 89 ಪ್ಲಾಸ್ಟಿಕ್​ ಮಾತ್ರೆಗಳು ಸಿಕ್ಕಿವೆ. ಅದನ್ನೆಲ್ಲ ನಾರ್ಕೋಟಿಕ್ಸ್​ ವಿಭಾಗದಲ್ಲಿ ಪರಿಶೀಲನೆಗೆ ಒಳಪಡಿಸಿದಾಗ ಅದು ಹೆರಾಯಿನ್​ ಎನ್ನುವುದು ಗೊತ್ತಾಗಿದೆ. 89 ಮಾತ್ರೆಗಳಲ್ಲಿ ಬರೋಬ್ಬರಿ 635 ಗ್ರಾಂ ಹೆರಾಯಿನ್​ ಅನ್ನು ಕಳ್ಳಸಾಗಣೆ ಮಾಡಲು ಆತ ಪ್ರಯತ್ನಿಸಿದ್ದ. ಈ ಡ್ರಗ್ಸ್​ನ ಬೆಲೆ ಸುಮಾರು 4 ಕೋಟಿ ರೂಪಾಯಿ ಎಂದು ಅಧಿಕಾರಿಗಳು ತಿಳಿಸಿದ್ದಾರೆ. (ಏಜೆನ್ಸೀಸ್​)
ಅಮ್ಮ ಸತ್ತಿಲ್ಲ, ಮಲಗಿದ್ದಾಳೆ! 20 ದಿನದಿಂದ ಶವವನ್ನೇ ಪೂಜಿಸುತ್ತಿರುವ ಮಕ್ಕಳು! ಕಣ್ಣೀರು ತರಿಸುತ್ತೆ ಈ ಮಕ್ಕಳ ನಂಬಿಕೆ

ಮಗನ ಹೆಂಡತಿಗೆ ಮಾವ ಹೀಗಾ ಮಾಡೋದು?! ತನಿಖೆಯಲ್ಲಿ ಬಯಲಾಯಿತು ಮಾವನ ನಿಜ ಬಣ್ಣ

ಬೆಂಗಳೂರು:  ಪಾಲಕರು ಪ್ರತಿ ಮಗುವಿನ ಮೊದಲ ಶಿಕ್ಷಕರು, ಅವರ ರೋಲ್ ಮಾಡೆಲ್. ಮಕ್ಕಳ ನಡವಳಿಕೆಯ ಮೇಲೆ…
ಅನೇಕ ಜನರು ತಮ್ಮ ಭವಿಷ್ಯವನ್ನು ತಿಳಿದುಕೊಳ್ಳಲು ತುಂಬಾ ಆಸಕ್ತಿ ಹೊಂದಿರುತ್ತಾರೆ. ಮುಂದಿನ ದಿನಗಳಲ್ಲಿ ನಮ್ಮ ಜೀವನದಲ್ಲಿ…
ಬೆಂಗಳೂರು:  ಇಡ್ಲಿ ಅಂದ್ರೆ ಯಾರಿಗೆ ತಾನೇ ಇಷ್ಟವಿಲ್ಲ ಹೇಳಿ.  ಹೆಚ್ಚಿನವರು ಇಡ್ಲಿಯನ್ನು ಇಷ್ಟಪಟ್ಟು ತಿನ್ನುತ್ತಾರೆ. ಇಡ್ಲಿ…
Sign in to your account
Please enter an answer in digits:six − 2 =
Remember me
