ನವದೆಹಲಿ :ಉಲ್ಬಣವಾಗುತ್ತಿರುವ ಕರೊನಾ ಸೋಂಕಿನ ಹಿನ್ನೆಲೆಯಲ್ಲಿ, ಪ್ರಧಾನಿ ನರೇಂದ್ರ ಮೋದಿ ಅವರು ನೀಡಿದ ಕರೆಯ ಮೇರೆಗೆ, ಇಂದಿನಿಂದ ಭಾರತದಾದ್ಯಂತ ನಾಲ್ಕು ದಿನಗಳ “ಟೀಕಾ ಉತ್ಸವ್” ಅರ್ಥಾತ್ ‘ಲಸಿಕೆ ಉತ್ಸವ’ ಆರಂಭವಾಗುತ್ತಿದೆ. ಈ ಸಮಯದಲ್ಲಿ ಸಾಮೂಹಿಕ ಲಸಿಕಾ ಕಾರ್ಯಕ್ರಮದ ಮೂಲಕ ಅತಿ ಹೆಚ್ಚು ಸಂಖ್ಯೆಯಲ್ಲಿ ಅರ್ಹ ವಯೋಮಾನದ ಜನರಿಗೆ ಕರೊನಾ ಲಸಿಕೆ ನೀಡುವ ಉದ್ದೇಶವಿದೆ.
“ಏಪ್ರಿಲ್ 11 ರಿಂದ 14 ಅನ್ನು ಟೀಕಾ ಉತ್ಸವವಾಗಿ ನಾವು ಆಚರಿಸಬಹುದೇ ? ಈ ಸಮಯದಲ್ಲಿ ಒಂದೂ ಲಸಿಕೆಯನ್ನು ವ್ಯರ್ಥ ಮಾಡದೆ ಎಷ್ಟು ಸಾಧ್ಯವೋ ಅಷ್ಟೂ ಅರ್ಹ ಜನರಿಗೆ ಲಸಿಕೆ ನೀಡಬೇಕು” ಎಂದು ಇತ್ತೀಚೆಗೆ ನಡೆದ ಎಲ್ಲಾ ರಾಜ್ಯಗಳ ಮತ್ತು ಕೇಂದ್ರಾಡಳಿತ ಪ್ರದೇಶಗಳ ಮುಖ್ಯಮಂತ್ರಿಗಳ ಸಭೆಯಲ್ಲಿ ಮೋದಿ ಪ್ರಸ್ತಾವನೆ ಇಟ್ಟಿದ್ದರು.
ಇದನ್ನೂ ಓದಿ:ಮತದಾನ ನಡೆದ ಕೆಲವೇ ದಿನಗಳಲ್ಲಿ ತಮಿಳುನಾಡಿನ ಕಾಂಗ್ರೆಸ್​ ಅಭ್ಯರ್ಥಿ ಕರೊನಾಗೆ ಬಲಿ..!
ಕರ್ನಾಟಕದಲ್ಲಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರು, ಲಸಿಕೆಯು ಕರೊನಾ ವೈರಸ್ ವಿರುದ್ಧ ಹೋರಾಡಲು ಅತಿದೊಡ್ಡ ಶಸ್ತ್ರವಾಗಿದೆ ಎಂದಿದ್ದು, ಅರ್ಹ ವಯೋಮಾನದ ಜನರೆಲ್ಲಾ ಲಸಿಕೆ ಪಡೆಯಬೇಕೆಂದು ಕರೆ ನೀಡಿದ್ದಾರೆ.
ಉತ್ತರಪ್ರದೇಶ, ಬಿಹಾರ ಸೇರಿದಂತೆ ಹಲವು ರಾಜ್ಯಗಳು ಈ ಸಮಯದಲ್ಲಿ ದುಪ್ಪಟ್ಟು ಪ್ರಮಾಣದಲ್ಲಿ ಲಸಿಕೆ ನೀಡಲು ಸಿದ್ಧತೆ ನಡೆಸಿವೆ. ಉ.ಪ್ರ.ದಲ್ಲಿ 6,000 ಲಸಿಕಾ ಕೇಂದ್ರಗಳನ್ನು ತೆರೆಯಲಾಗುತ್ತಿದ್ದು, ಸಿಎಂ ಯೋಗಿ ಆದಿತ್ಯನಾಥ್ ಮತ್ತು ರಾಜ್ಯಪಾಲರು ಲಸಿಕಾಕರಣದ ಬಗ್ಗೆ ವೆಬಿನಾರ್​ಗಳನ್ನು ನಡೆಸಲಿದ್ದಾರೆ. ‘ಟೀಕಾ ಉತ್ಸವ್’​ ಸಮಯದಲ್ಲಿ ಬಿಹಾರದಲ್ಲಿ ನಾಲ್ಕು ಲಕ್ಷ ಜನರಿಗೆ ಲಸಿಕೆ ನೀಡುವ ಗುರಿ ಇದೆ. ಇದಕ್ಕಾಗಿ ಜನರು ಲಸಿಕೆ ಪಡೆಯಲು ಹೆಚ್ಚಿನ ಸಂಖ್ಯೆಯಲ್ಲಿ ಮುಂದಾಗಬೇಕು ಎಂದು ಸಿಎಂ ನಿತೀಶ್ ಕುಮಾರ್ ಕರೆ ನೀಡಿದ್ದಾರೆ.
ಇದನ್ನೂ ಓದಿ:ರೇವ್ ಪಾರ್ಟಿ ಮೇಲೆ ದಾಳಿ: ನೂರಕ್ಕೂ ಹೆಚ್ಚು ಯುವಕ-ಯುವತಿಯರನ್ನು ವಶಕ್ಕೆ ಪಡೆದ ಹಾಸನ ಪೊಲೀಸರು!
ಈ ಮಧ್ಯೆ, ಪಂಜಾಬ್, ರಾಜಾಸ್ತಾನ್, ಮಹಾರಾಷ್ಟ್ರ, ಝಾರ್ಖಂಡ್, ದೆಹಲಿ ಸಿಎಂಗಳು ತಮ್ಮ ಲಸಿಕೆಯ ಸ್ಟಾಕ್ ಖಾಲಿಯಾಗುತ್ತಿದೆ ಎಂದು ಎಚ್ಚರಿಸಿವೆ. ಈ ಬಗ್ಗೆ ಕೇಂದ್ರ ಆರೋಗ್ಯ ಸಚಿವ ಡಾ.ಹರ್ಷವರ್ಧನ್ ಅವರು ಲಸಿಕೆಯನ್ನು ಸಮರ್ಪಕವಾಗಿ ಬಳಸಬೇಕು ಎಂದು ತಾಕೀತು ಮಾಡಿದ್ದು, ಮುಂದೆ ಏನು ಕ್ರಮ ತೆಗೆದುಕೊಳ್ಳಲಾಗುವುದು ಎಂದು ಕಾದುನೋಡಬೇಕಾಗಿದೆ.(ಏಜೆನ್ಸೀಸ್)
“ಕರೊನಾ ಲಸಿಕೆ ರಫ್ತು ಕೂಡಲೇ ನಿಲ್ಲಿಸಿ” : ಪ್ರಧಾನಿ ಮೋದಿಗೆ ರಾಹುಲ್ ಗಾಂಧಿ ಪತ್ರ
ಕರೊನಾ : ಸಕ್ರಿಯ ಪ್ರಕರಣಗಳಲ್ಲಿ ಇವು ಟಾಪ್​ ಟೆನ್ ಜಿಲ್ಲೆಗಳು


ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:two + 17 =
Remember me
