ಮುಂಬೈ:ಕರೊನಾ ವೈರಸ್​ ದಾಳಿಗೆ ಪೂರ್ತಿ ವಿಶ್ವವೇ ತತ್ತರಿಸಿದ್ದು ಭಾರತದಲ್ಲಿಯು ಸಹ ಸೋಂಕಿನ ಪ್ರಮಾಣ ದಿನೇದಿನೆ ಹೆಚ್ಚಳವಾಗುತ್ತಿದೆ. ಇಂದು ಮಹಾರಾಷ್ಟ್ರದಲ್ಲಿ ನಾಲ್ವರಲ್ಲಿ ಸೋಂಕಿರುವುದು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 37ಕ್ಕೆ ಏರಿಕೆ ಕಂಡಿದೆ.
ದೇಶದಲ್ಲಿ ಕರೊನಾ ವೈರಸ್​ ದಾಳಿಯಿಂದ ಅತಿ ಹೆಚ್ಚು ಸಮಸ್ಯೆ ಎದುರಿಸುತ್ತಿರುವ ಮಹಾರಾಷ್ಟ್ರದಲ್ಲಿ ಇಂದು ನಾಲ್ವರಲ್ಲಿ ಸೋಂಕು ಇರುವುದು ಧೃಡವಾಗಿದೆ. ಈ ಮೂಲಕ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ. ಇಂದು ವೈರಸ್​ ಪತ್ತೆಯಾಗಿರುವವರಲ್ಲಿ ಮೂವರು ಮುಂಬೈ ನಿವಾಸಿಗಳಾಗಿದ್ದು, ಒಬ್ಬ ನವಿ ಮುಂಬೈ ನಿವಾಸಿ ಎಂದು ರಾಜ್ಯ ಸರ್ಕಾರ ತಿಳಿಸಿದೆ.
ನಿನ್ನೆ (ಮಾ. 15) ರಾಜ್ಯದಲ್ಲಿ ಶಾಪಿಂಗ್​ ಮಾಲ್​ಗಳನ್ನು ಮಾರ್ಚ್​ ಅಂತ್ಯದವರೆಗೆ ಮುಚ್ಚುವಂತೆ ಆರೋಗ್ಯ ಸಚಿವ ರಾಜೇಶ್​ ತೋಪ್​ ಆದೇಶ ಹೊರಡಿಸಿದ್ದರು. ದೇಶದಲ್ಲಿ ಕರೊನಾ ಪೀಡಿತರ ಸಂಖ್ಯೆ 100 ದಾಟಿದೆ. ಭಾನುವಾರದಂದು ಅತಿ ಹೆಚ್ಚು ಜನರಲ್ಲಿ (25) ಸೋಂಕು ಇರುವುದು ಧೃಢವಾಗಿತ್ತು.(ಏಜೆನ್ಸೀಸ್​)
ಒಂದೇ ದಿನದಲ್ಲಿ 25 ಜನರಲ್ಲಿ ಕರೊನಾ ಸೋಂಕು ಪತ್ತೆ; ಭಾರತದಲ್ಲಿ ಅತಿ ಹೆಚ್ಚು ಸೋಂಕು ಪತ್ತೆಯಾದ ದಿನವಿದು

VIDEO: ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಯ ಡ್ಯಾನ್ಸ್ ಪ್ರಕರಣಕ್ಕೆ ಹೊಸ ಟ್ವಿಸ್ಟ್​: ಹಳೆಯ ವಿಡಿಯೋ ವೈರಲ್ ಮಾಡಿದ ಆಯಾಳ ಪತಿ!

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:12 − 3 =
Remember me
