ನವದೆಹಲಿ:ಬರೋಬ್ಬರಿ ಏಳು ವರ್ಷಗಳ ನಂತರ ನಿರ್ಭಯಾ ಅತ್ಯಾಚಾರ ಪ್ರಕರಣದ ಅಪರಾಧಿಗಳು ನೇಣುಗಂಬಕ್ಕೆ ಏರುತ್ತಿದ್ದಾರೆ. ದೆಹಲಿ ಪಟಿಯಾಲಾ ಕೋರ್ಟ್​ ಜಾರಿ ಮಾಡಿದ ಡೆತ್​ ವಾರಂಟ್ ಅನ್ವಯ ಮಾ.20ರಂದು ಮುಂಜಾನೆ 5.30ಕ್ಕೆ ಮುಕೇಶ್​ ಸಿಂಗ್​ (32), ವಿನಯ್​ ಶರ್ಮಾ (26), ಪವನ್​ ಗುಪ್ತಾ (25) ಹಾಗೂ ಅಕ್ಷಯ್​ ಕುಮಾರ್ ಸಿಂಗ್​ (31)ರನ್ನು ನೇಣಿಗೇರಿಸಲು ತಿಹಾರ್ ಜೈಲ್​ ಸಕಲ ಸಿದ್ಧತೆಯನ್ನೂ ಮಾಡಿಕೊಂಡಿದೆ.
ಮಾ.20ರ ಮರಣದಂಡನೆ ತಪ್ಪಿಸಿಕೊಳ್ಳಲು ಅಪರಾಧಿಗಳು ಪ್ರಯತ್ನ ಮಾಡಿದ್ದರು. ತಮ್ಮನ್ನು ನೇಣಿಗೇರಿಸಬಾರದು. ಗಲ್ಲುಶಿಕ್ಷೆಗೆ ತಡೆ ನೀಡಬೇಕು. ನಮಗಿನ್ನೂ ಕಾನೂನು ಪ್ರಕ್ರಿಯೆಗಳನ್ನು ನಡೆಸುವುದು ಬಾಕಿ ಇದೆ ಎಂದು ದೆಹಲಿ ಪಟಿಯಾಲಾ ಹೌಸ್ ಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು. ಆದರೆ ದೆಹಲಿ ಕೋರ್ಟ್​ ಅರ್ಜಿಗಳನ್ನು ವಜಾ ಮಾಡಿದೆ. ಹಾಗೇ ಅಪರಾಧಿಗಳಲ್ಲೋರ್ವನಾದ ಪವನ್​ ಗುಪ್ತಾ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಕ್ಯುರೇಟಿವ್​ ಅರ್ಜಿಯೂ ತಿರಸ್ಕೃತಗೊಂಡಿದೆ.
ನಾಳೆ ಮುಂಜಾನೆ 5.30ಕ್ಕೆ ನಾಲ್ವರು ಅಪರಾಧಿಗಳನ್ನು ನೇಣಿಗೇರಿಸಬೇಕು ಎಂದು ದೆಹಲಿ ಪಟಿಯಾಲಾ ಕೋರ್ಟ್​ ಆದೇಶ ನೀಡಿದೆ.
ಅಪರಾಧಿಗಳಿಗೆ ಇನ್ಯಾವುದೇ ಕಾನೂನು ಪ್ರಕ್ರಿಯೆಗಳು ಬಾಕಿ ಇಲ್ಲ. ಪವನ್​ ಮತ್ತು ಅಕ್ಷಯ್​ ಸಲ್ಲಿಸಿದ್ದ ಎರಡನೇ ಕ್ಷಮಾದಾನ ಅರ್ಜಿಯನ್ನೂ ರಾಷ್ಟ್ರಪತಿ ತಿರಸ್ಕಾರ ಮಾಡಿದ್ದಾರೆ ಎಂದು ಪಬ್ಲಿಕ್​ ಪ್ರಾಸಿಕ್ಯೂಟರ್​ ಇರ್ಫಾನ್​ ಅಹಮದ್​ ಇಂದು ಪಟಿಯಾಲಾ ನ್ಯಾಯಾಲಯಕ್ಕೆ ತಿಳಿಸಿದ್ದಾರೆ.ಇಂದು ದೆಹಲಿ ಪಟಿಯಾಲಾ ಹೌಸ್ ಕೋರ್ಟ್​ನ ಆವರಣದಲ್ಲಿ ದೊಡ್ಡ ಹೈಡ್ರಾಮಾವೇ ನಡೆಯಿತು. ಡಿವೋರ್ಸ್​ಗೆ ಮನವಿ ಸಲ್ಲಿಸಿರುವ ಅಪರಾಧಿ ಅಕ್ಷಯ್​ ಕುಮಾರ್ ಪತ್ನಿ ನ್ಯಾಯಾಲಯದ ಅಂತಿಮ ತೀರ್ಪನ್ನು ಕೇಳುತ್ತಿದ್ದಂತೆ ಮೂರ್ಛೆ ಹೋದರು.
2012ರಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಪಟ್ಟಂತೆ ಆರು ಮಂದಿಯನ್ನು ಬಂಧಿಸಲಾಗಿತ್ತು. ಅದರಲ್ಲಿ ರಾಮ ಸಿಂಗ್​ ಎಂಬಾತ ಪ್ರಕರಣದ ವಿಚಾರಣೆ ನಡೆಯುತ್ತಿದ್ದಾಗಲೇ ತಿಹಾರ್ ಜೈಲಿನಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದ. ಬಾಲಾಪರಾಧಿಯನ್ನು 2015ರಲ್ಲಿ ಬಿಡುಗಡೆ ಮಾಡಲಾಗಿತ್ತು. ಈಗುಳಿದ ನಾಲ್ವರು ನಾಳೆ ಮುಂಜಾನೆ ನೇಣಿಗೇರಲಿದ್ದಾರೆ.(ಏಜೆನ್ಸೀಸ್​)
ನಿರ್ಭಯಾ ಹಂತಕರಿಗೆ ನಾಳೆಯೇ ಗಲ್ಲು ಫಿಕ್ಸ್​; ಪವನ್​ ಗುಪ್ತಾ ಕ್ಯುರೇಟಿವ್​ ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್​

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:2 × four =
Remember me
