ಮಧ್ಯಪ್ರಧೇಶ:ಮುಂದಿನ ವರ್ಷ ನಡೆಯಲಿರುವ ಲೋಕಸಭೆ ಚುನಾವಣೆಗೂ ಮುನ್ನ ನಡೆಯುತ್ತಿರುವ ಪಂಚ ರಾಜ್ಯಗಳ ಚುನಾವಣಾ ಪೈಕಿ ಇದೀಗ ನಾಲ್ಕು ರಾಜ್ಯಗಳ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಕುತೂಹಲದಿಂದ ಕಾಯುತ್ತಿರುವ ಫಲಿತಾಂಶ ಪ್ರಕಟಣೆಗೆ ಸದ್ಯ ಕ್ಷಣಗಣನೆ ಆರಂಭಗೊಂಡಿದೆ. ಈ ಮಧ್ಯೆ ರಿಸಲ್ಟ್​ ಹಿಂದಿನ ಲೆಕ್ಕಾಚಾರಗಳು, ಸಮೀಕ್ಷೆಗಳು ತಿಳಿಸಿರುವುದೇನು? ಎಂಬುದರ ವಿವರ ಹೀಗಿದೆ.
ಇದನ್ನೂ ಓದಿ:ಶವಾಗಾರದಲ್ಲಿ ಹುಟ್ಟಿತು ಸಿನಿಮಾ ಕಥೆ! ‘ಕೈವ’ನ ರಕ್ತಸಿಕ್ತ ಚರಿತ್ರೆ ಬಿಚ್ಚಿಟ್ಟ ನಿರ್ದೇಶಕ ಜಯತೀರ್ಥ
ಮಧ್ಯಪ್ರದೇಶ, ರಾಜಸ್ಥಾನ, ತೆಲಂಗಾಣ ಮತ್ತು ಛತ್ತೀಸ್​ಗಢ ಅಸೆಂಬ್ಲಿಗಳ ಚುನಾವಣಾ ಫಲಿತಾಂಶ ಇಂದು ಪ್ರಕಟವಾಗಲಿದ್ದು, ಮಿಜೋರಾಂನಲ್ಲಿ ಸೋಮವಾರ ಮತ ಎಣಿಕೆ ನಡೆಯಲಿದೆ ಎಂದು ಭಾರತ ಚುನಾವಣೆ ಆಯೋಗ ತಿಳಿಸಿದೆ. ನಾಲ್ಕೂ ರಾಜ್ಯಗಳಲ್ಲಿ ಮತ ಎಣಿಕೆಗೆ ಸಕಲ ತಯಾರಿಗಳನ್ನು ಮಾಡಿಕೊಳ್ಳಲಾಗಿದೆ.
ಮತಗಟ್ಟೆ ಸಮೀಕ್ಷೆಗಳು ಒಂದಷ್ಟು ಲೆಕ್ಕಾಚಾರಗಳನ್ನು ಕೊಂಚ ಮಟ್ಟಿಗೆ ತಗ್ಗಿಸಿವೆ. ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ಆಸುಪಾಸಿನ ಫಲಿತಾಂಶ ದೊರೆಯಲಿದೆ ಎಂದು ನಿರೀಕ್ಷಿಸಲಾಗುತ್ತಿದೆ. ಛತ್ತೀಸ್‌ಗಢದಲ್ಲಿ ಗೆಲುವಿನ ಮುಖೇನ ಅಧಿಕಾರ ಉಳಿಸಿಕೊಳ್ಳುವ ಭರದಲ್ಲಿ ಕಾಂಗ್ರೆಸ್ ಇದ್ದು, ಉಳಿದಂತೆ ತೆಲಂಗಾಣದಲ್ಲಿ ಬಿಜೆಪಿ-ಕಾಂಗ್ರೆಸ್ ಮಧ್ಯೆ ಕೂಡ ಬಿರುಸಿನ ಪೈಪೋಟಿ ಇದೆ.
ಇದನ್ನೂ ಓದಿ:ಕೃಷಿ ನವೋದ್ಯಮಗಳ ಮೂಲಕ ರೈತರ ಅಭ್ಯುದಯ; ಸ್ಟಾರ್ಟಪ್​ಗಳ ಪ್ರೋತ್ಸಾಹಕ್ಕೆ ಮಹತ್ವದ ಯೋಜನೆ
ಇನ್ನು ರಾಜಸ್ಥಾನದಲ್ಲಿ ಇತಿಹಾಸ ಮರುಕಳಿಸಲಿದೆ ಎಂಬ ನಿರೀಕ್ಷೆ ಹೆಚ್ಚಿದ್ದು, ಬಿಜೆಪಿಗೆ ಬಹುಮತ ಸಿಗಲಿದೆ ಎಂಬುದು ಸದ್ಯ ಸಮೀಕ್ಷೆಗಳ ಸಾರಾಂಶವಾಗಿದೆ,(ಏಜೆನ್ಸೀಸ್).
ಇಂದು ಭವಿಷ್ಯ ನಿರ್ಧಾರ; 4 ರಾಜ್ಯಗಳ ಚುನಾವಣಾ ಫಲಿತಾಂಶ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:6 − six =
Remember me
