ಅಹಮದಾಬಾದ್​ (ಗುಜರಾತ್):ಶ್ರೀಲಂಕಾ ಮೂಲದ ನಾಲ್ವರು ಶಂಕಿತ ಐಸಿಸ್​ ಉಗ್ರರನ್ನು ಅಹಮದಾಬಾದ್‌ನ ಸರ್ದಾರ್ ವಲ್ಲಭಭಾಯಿ ಪಟೇಲ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂಧಿಸಲಾಗಿದೆ. ಅವರನ್ನು ಎಟಿಎಸ್ ಅಧಿಕಾರಿಗಳು ತೀವ್ರ ವಿಚಾರಣೆ ನಡೆಸಲು ಉಗ್ರರನ್ನು ಅಜ್ಞಾತ ಸ್ಥಳಕ್ಕೆ ಕರೆದೊಯ್ದಿದೆ ಎಂದು ವರದಿಯಾಗಿದೆ.
ಇದನ್ನೂ ಓದಿ:ಜೂನ್ 10ಕ್ಕೆ ಒಡಿಶಾದಲ್ಲಿ ಬಿಜೆಪಿಯ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕಾರ ಖಚಿತ: ಪ್ರಧಾನಿ ಮೋದಿ
ವಿಮಾನ ನಿಲ್ದಾಣದಲ್ಲಿ ಕಾಯುತ್ತಿದ್ದಾಗ, ಗುಜರಾತ್ ಭಯೋತ್ಪಾದನಾ ನಿಗ್ರಹ ದಳ (ಎಟಿಎಸ್) ನಾಲ್ವರು ಶಂಕಿತ ಐಸಿಸ್ ಭಯೋತ್ಪಾದಕರನ್ನು ಬಂಧಿಸಿದೆ. ಉಗ್ರರನ್ನು ಮೊಹಮ್ಮದ್ ನುಸ್ರತ್, ಮೊಹಮ್ಮದ್ ನಫ್ರಾನ್, ಮೊಹಮ್ಮದ್ ಫಾರಿಸ್ ಮತ್ತು ಮೊಹಮದ್ ರಸ್ದೀನ್ ಎಂದು ಗುರುತಿಸಲಾಗಿದೆ. ಇವರು ಅಹಮದಾಬಾದ್ ವಿಮಾನ ನಿಲ್ದಾಣದಲ್ಲಿ ಪಾಕಿಸ್ತಾನದ ಹ್ಯಾಂಡ್ಲರ್​ಗಳಿಂದ ಸಂದೇಶಕ್ಕಾಗಿ ಕಾಯುತ್ತಿದ್ದರು ಎಂದು ಮೂಲಗಳು ತಿಳಿಸಿವೆ. ಅವರ ಮೊಬೈಲ್​ನಲ್ಲಿರುವ ಕೆಲವು ಚಾಟ್​ಗಳನ್ನು ಪೊಲೀಸರು ಪತ್ತೆ ಮಾಡಿದ್ದು ಫೋನ್​ಗಳನ್ನು ವಶಕ್ಕೆ ಪಡೆದಿದ್ದಾರೆ.
ಈ ಪ್ರಕರಣ ಕುರಿತು ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿದ ಡೆಪ್ಯುಟಿ ಜನರಲ್ ಆಫ್ ಪೊಲೀಸ್ ವಿಕಾಸ್ ಸಹಾಯ್, ನಾಲ್ವರು ಭಯೋತ್ಪಾದಕರು ಶ್ರೀಲಂಕಾ ಮೂಲದವರು ಮತ್ತು ಇಸ್ಲಾಮಿಕ್ ಸ್ಟೇಟ್ ಸಿದ್ಧಾಂತದಿಂದ ತೀವ್ರಗಾಮಿಗಳಾಗಿದ್ದಾರೆ. ಅವರು ಕೇವಲ ತಮಿಳು ಮಾತ್ರ ಮಾತನಾಡುತ್ತಾರೆ ಮತ್ತು ಹಿಂದಿ ಅಥವಾ ಇಂಗ್ಲಿಷ್ ಅರ್ಥವಾಗುವುದಿಲ್ಲ ಎಂದು ಹೇಳಿದರು.
ಐಸಿಸ್ ಉಗ್ರರು ಮೊದಲು ಕೊಲಂಬೊದಿಂದ ಚೆನ್ನೈಗೆ ಆಗಮಿಸಿ ನಂತರ ಮೇ 19 ಭಾನುವಾರ ರಂದು ಅಹಮದಾಬಾದ್ ತಲುಪಿದ್ದಾರೆ ಎನ್ನಲಾಗಿದೆ. “ನಾಲ್ವರು ಭಯೋತ್ಪಾದಕರು ಮೇ 18 ಅಥವಾ 19 ರಂದು ರೈಲು ಅಥವಾ ವಿಮಾನದ ಮೂಲಕ ಅಹಮದಾಬಾದ್ ತಲುಪಲಿದ್ದಾರೆ ಎಂಬ ಮಾಹಿತಿ ನಮಗೆ ಮೊದಲ ಬಂದಿತ್ತು. ಇದರಿಂದ ಎಚ್ಚೆತ್ತು ವಿವಿಧ ತಂಡಗಳನ್ನು ರಚಿಸಿ ತಂತ್ರವನ್ನು ರೂಪಿಸಲಾಗಿತ್ತು ಎಂದು ಹೇಳಿದ್ದಾರೆ.
ದಕ್ಷಿಣ ಭಾರತದಿಂದ ಬರುವ ರೈಲುಗಳು ಮತ್ತು ವಿಮಾನಗಳ ಪ್ರಯಾಣಿಕರ ಮೇಲೆ ನಿಗಾವಹಿಸಲಾಗಿತ್ತು. ಈ ಕಾರಣದಿಂದ ನಮಗೆ ಈ ನಾಲ್ವರು ನಾಲ್ವರೂ ಇಂಡಿಗೋ ವಿಮಾನದ ಮೂಲಕ ಅದೇ PNR ನಂಬರ್‌ನಲ್ಲಿ ಚೆನ್ನೈನಿಂದ ಅಹಮದಾಬಾದ್‌ಗೆ ಪ್ರಯಾಣಿಸುತ್ತಿದ್ದರು ಎಂದು ದೃಢೀಕರಣಕ್ಕಾಗಿ ಕೊಲಂಬೊದಲ್ಲಿ ಪರಿಶೀಲನೆ ನಡೆಸಲಾಗಿದೆ ಎಂದು ಡಿಜಿಪಿ ತಿಳಿಸಿದ್ದಾರೆ.
ಬಂಧಿತ ಉಗ್ರರಿಂದ ಎರಡು ಮೊಬೈಲ್ ಫೋನ್‌ಗಳು, ಭಾರತ ಮತ್ತು ಶ್ರೀಲಂಕಾದ ಕರೆನ್ಸಿ, ಕೆಲವು ಶಸ್ತ್ರಾಸ್ತ್ರಗಳು ಮತ್ತು ಇಸ್ಲಾಮಿಕ್ ಸ್ಟೇಟ್ ಧ್ವಜವನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಹೇಳಿದರು.
ಭಯೋತ್ಪಾದಕರು ಪಾಕಿಸ್ತಾನದಲ್ಲಿರುವ ಅಬು ಎಂಬ ಇಸ್ಲಾಮಿಕ್ ಸ್ಟೇಟ್ ಕಾರ್ಯಕರ್ತನ ಸಂಪರ್ಕಕ್ಕೆ ಬಂದಿದ್ದಾರೆ. ಹಾಗೂ ಗುಜರಾತಿನಲ್ಲಿ ಆತ್ಮಾಹುತಿ ದಾಳಿ ನಡೆಸಲು ಅವರಿಗೆ ಜವಾಬ್ದಾರಿ ವಹಿಸಿದ್ದ ಎನ್ನಲಾಗಿದೆ. ಇದರಿಂದ ಅವರಿಗೆ ಬಾಂಬ್ ತಯಾರಿಸಲು 4 ಲಕ್ಷ ರೂ. ಅವರ ಫೋನ್‌ಗಳನ್ನು ಸಹಾಯ ಮಾಡಿದ್ದ ಎಂಬ ಅಘಾತಕಾರಿ ಮಾಹಿತಿ ತಿಳಿಸಿದ್ದಾರೆ.
ಕರ್ನಾಟಕ ವಿಧಾನಪರಿಷತ್ತಿನ 11 ಸ್ಥಾನಕ್ಕೆ ಚುನಾವಣೆ ಘೋಷಣೆ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:four + 18 =
Remember me
