ಶ್ರೀನಗರ: ಜಮ್ಮು-ಕಾಶ್ಮೀರದಲ್ಲಿ ವಿಧ್ವಂಸಕ ಕೃತ್ಯಗಳನ್ನು ನಡೆಸುತ್ತಿರುವ ಪಾಕ್ ಪ್ರೇರಿತ, ಪ್ರಾಯೋಜಿತ ಉಗ್ರರನ್ನು ನಿಗ್ರಹಿಸುವ ಕಾರ್ಯಾಚರಣೆಯನ್ನು ಭಾರತೀಯ ಸೇನಾ ಪಡೆ ಮತ್ತು ಪೊಲೀಸರು ಮುಂದುವರಿಸಿದ್ದಾರೆ. ಕುಲ್ಗಾಂವ್ ಜಿಲ್ಲೆಯಲ್ಲಿ ಮತ್ತೆ ನಾಲ್ವರು ಉಗ್ರರು ರಕ್ಷಣಾ ಪಡೆ ಮೇಲೆ ದಾಳಿ ನಡೆಸಿ ಹತರಾಗಿದ್ದಾರೆ.
ಕಾಶ್ಮೀರ ಝೋನ್ ಪೊಲೀಸ್ ಟ್ವೀಟ್ ಮಾಡಿರುವ ಪ್ರಕಾರ, ಜಮ್ಮು-ಕಾಶ್ಮೀರದ ಕುಲ್ಗಾಂವ್ ಮತ್ತು ಅನಂತನಾಗ್​ನಲ್ಲಿ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಈ ವೇಳೆ, ಕುಲ್ಗಾಂವ್ ಜಿಲ್ಲೆಯ ನಿಪೋರಾ ಪ್ರದೇಶದಲ್ಲಿ ಇಬ್ಬರು ಉಗ್ರರು ರಕ್ಷಣಾ ಪಡೆ ಮೇಲೆ ದಾಳಿ ನಡೆಸಿದ್ದರು. ರಕ್ಷಣಾ ಪಡೆ ಸಿಬ್ಬಂದಿ ಪ್ರತಿದಾಳಿ ನಡೆಸಿದಾಗ ತಪ್ಪಿಸಿಕೊಳ್ಳು ಮುಂದಾಗಿದ್ದ ಆ ಇಬ್ಬರು ಉಗ್ರರು ಗುಂಡಿನ ದಾಳಿಗೆ ಬಲಿಯಾಗಿದ್ದಾರೆ.
ಇದನ್ನೂ ಓದಿ:ಸೆರೆ ಸಿಕ್ಕ ಪಾಕ್​ ಉಗ್ರರು: ಭಯಾನಕ ಜಾಲ ಭೇದಿಸಿದ ಭಾರತೀಯ ಯೋಧರು
ಇದೇ ರೀತಿ, ಅನಂತ​ನಾಗ್​ ಜಿಲ್ಲೆಯಲ್ಲೂ ಉಗ್ರ ನಿಗ್ರಹ ಕಾರ್ಯ ಮುಂದುವರಿದ ವೇಳೆ ಇಬ್ಬರು ಉಗ್ರರು ತಪ್ಪಿಸಿಕೊಳ್ಳುವ ಸಲುವಾಗಿ ರಕ್ಷಣಾ ಪಡೆ ಮೇಲೆ ಗುಂಡಿನ ದಾಳಿ ನಡೆಸಿದ್ದರು. ರಕ್ಷಣಾ ಪಡೆ ಸಿಬ್ಬಂದಿ ನಡೆಸಿದ ಪ್ರತಿದಾಳಿಗೆ ಆ ಇಬ್ಬರು ಉಗ್ರರು ಹತರಾಗಿದ್ದಾರೆ. ಎಎನ್​ಐ ವರದಿ ಪ್ರಕಾರ, ಅನಂತನಾಗ್ ಜಿಲ್ಲೆಯ ಲಾಲ್ಲನ್ ಪ್ರದೇಶದಲ್ಲಿ ಈ ಕಾರ್ಯಾಚರಣೆ ನಡೆದಿತ್ತು.
ಈ ಎರಡೂ ಜಿಲ್ಲೆಗಳಲ್ಲಿ ಈಗ ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿದಿದೆ. ಭಾರತೀಯ ಸೇನೆ, ಸೆಂಟ್ರಲ್ ರಿಸರ್ವ್ ಪೊಲೀಸ್ ಫೋರ್ಸ್​(ಸಿಆರ್​ಪಿಎಫ್) ಮತ್ತು ಸ್ಥಳೀಯ ಪೊಲೀಸರು ಸೇರಿ ಜಂಟಿ ಕಾರ್ಯಾಚರಣೆಯನ್ನು ಮುಂದುವರಿಸಿದ್ದಾರೆ. (ಏಜೆನ್ಸೀಸ್)
ಬೆಂಬಲ ಬೆಲೆ ಬದಲು ಶಾಸನಾತ್ಮಕ ಕನಿಷ್ಠ ದರ ನೀಡಿ

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:five + eight =
Remember me
