ಶ್ರೀನಗರ: ದಕ್ಷಿಣ ಕಾಶ್ಮೀರದ ಶೋಪಿಯಾನ್ ಜಿಲ್ಲೆಯ ಕಿಲೂರಾ ಗ್ರಾಮದಲ್ಲಿ ರಕ್ಷಣಾ ಪಡೆ ಯೋಧರು ಉಗ್ರ ನಿಗ್ರಹ ಕಾರ್ಯಾಚರಣೆ ಮುಂದುವರಿಸಿದ್ದು, ಎನ್​ಕೌಂಟರ್​ನಲ್ಲಿ ನಾಲ್ವರು ಉಗ್ರರು ಹತರಾಗಿದ್ದಾರೆ. ಮತ್ತೋರ್ವ ಉಗ್ರ ರಕ್ಷಣಾ ಪಡೆಗೆ ಶರಣಾಗತನಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾಶ್ಮೀರದ ಐಜಿ ಪೊಲೀಸ್​ ವಿಜಯಕುಮಾರ್ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಇಂದಿನ ಎನ್​ಕೌಂಟರ್​ನಲ್ಲಿ ಶಕೂರ್ ಪಾರ್ರೇ ಅಲ್ ಬದ್ರ್​ ಎಂಬ ಜಿಲ್ಲಾ ಕಮಾಂಡರ್​, ಮತ್ತೋರ್ವ ಉಗ್ರ ಸುಹೈಲ್ ಭಟ್​ ಹತರಾಗಿದ್ದಾರೆ. ಸುಹೈಲ್​ ಎಂಬಾಂತ ಕನ್ಮೋಹ್​ನ ಸರಪಂಚ್​ನನ್ನು ಅಪಹರಿಸಿ ಹತ್ಯೆಗೈದ ಪ್ರಕರಣದಲ್ಲಿ ಬೇಕಾದವನಾಗಿದ್ದ. ಒಟ್ಟು ನಾಲ್ವರು ಉಗ್ರರು ಹತರಾಗಿದ್ದು ಇನ್ನೋರ್ವ ಉಗ್ರ ಶರಣಾಗಿದ್ದಾನೆ. ಸ್ಥಳದಿಂದ ಭಾರಿ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಇದನ್ನೂ ಓದಿ:ನೀಟ್, ಜೆಇಇ ನಡೆಸಲು ಬೆಂಬಲ ಸೂಚಿಸಿದ ಉತ್ತರ ಪ್ರದೇಶ
ಇದಕ್ಕೂ ಮುನ್ನ, ಶುಕ್ರವಾರ ಬೆಳಗ್ಗೆ ಅಪಹರಣಕ್ಕೆ ಒಳಗಾಗಿದ್ದ ಸರಪಂಚ್​ ನಿಸಾರ್ ಅಹ್ಮದ್ ಭಟ್​ ಅವರ ಮೃತದೇಹ ಶೋಪಿಯಾನ್​ನಲ್ಲಿ ಪತ್ತೆಯಾಗಿತ್ತು. ಸ್ಥಳೀಯರು ಈ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿದ್ದರು. ಭಟ್​ ಆಗಸ್ಟ್ 19ರಂದು ನಾಪತ್ತೆಯಾಗಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಆಡಿಯೋ ಟೇಪ್ ಒಂದು ವೈರಲ್ ಆಗಿತ್ತು. ಅದರಲ್ಲಿ ಉಗ್ರರಿಂದ ಅಪಹರಣಕ್ಕೆ ಒಳಗಾಗಿ ಭಟ್ ಕೊಲ್ಲಲ್ಪಟ್ಟ ಮಾಹಿತಿ ಇತ್ತು ಎಂದು ಪೊಲೀಸರು ತಿಳಿಸಿದ್ದಾರೆ. (ಏಜೆನ್ಸೀಸ್)
ಫ್ಯೂಯೆಲ್ ಇಕಾನಮಿಯ ಸ್ಟೈಲಿಶ್​ ಕಿಯಾ ಸೋನೆಟ್​ ಬುಕ್ಕಿಂಗ್ ಶುರು

ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:20 − 5 =
Remember me
