ನವದೆಹಲಿ:ನಾ;ಲ್ಕು ವರ್ಷದ ಬಾಲಕಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪದ ಮೇಲೆ ದೆಹಲಿ ಪೊಲೀಸರು ಶಾಲಾ ಅಟೆಂಡರ್​ನನ್ನು ವಶಕ್ಕೆ ಪಡೆದಿದ್ಧಾರೆ.
ಬಂಧಿತ ಆರೋಪಿ ಹೆಸರು ಸುನೀಲ್​ ಕುಮಾರ್​(43) ಎಂದು ತಿಳಿದು ಬಂದಿದ್ದು ದೆಹಲಿಯ ರೋಹಿಣಿ ಪ್ರದೇಶದಲ್ಲಿರುವ ಶಾಲೆಯಲ್ಲಿ ಕೃತ್ಯ ಎಸಗಲಾಗಿದೆ ಎಂದು ತಿಳಿದು ಬಂದಿದೆ.
ಈ ಕುರಿತು ಪ್ರತಿಕ್ರಿಯಿಸಿರುವ ಹಿರಿಯ ಅಧಿಕಾರಿ ಒಬ್ಬರು ಸಂತ್ರಸ್ತ ಬಾಲಕಿಯ ತಾಯಿ ದಕ್ಷಿಣ ರೋಹಿಣಿ ಪೊಲೀಸ್​ ಠಾಣೆಯಲ್ಲಿ ತಮ್ಮ ಮಗಳ ಮೇಲೆ ಲೈಂಗಿಕ ದೌರ್ಜನ್ಯ ಎಸಗಿರುವ ಕುರಿತು ದೂರನ್ನು ದಾಖಲಿಸಿದ್ದರು.
ಪ್ರಕರಣ ದಾಖಲಿಸಿಕೊಂಡು ಬಾಲಕಿಯ ವಿಚಾರಣೆ ನಡೆಸಿದಾಗ ಆರೋಪಿ ದಪ್ಪ ಮೀಸೆ ಬಿಟ್ಟಿರುವುದಾಗಿ ಬಾಲಕಿ ಹೇಳಿದ್ದಳು. ಗುರುತನ್ನು ಆಧರಿಸಿ ಅಪರಾಧಿಯನ್ನು ಬಂಧಿಸಿದ್ದೇವೆ ಎಂದು ತಿಳಿಸಿದ್ದಾರೆ.
ಇದನ್ನೂ ಓದಿ:ಅನ್ಯ ಮಹಿಳೆಯ ಜತೆ ಕಾಣಿಸಿಕೊಂಡ ಪತಿ; ಫಜೀತಿ ತಂದ ಟ್ರಾಫಿಕ್​ ಕ್ಯಾಮರಾ!
ಆರೋಪಿ ಶಾಲಾ ಅಟೆಂಡರ್​ ವಿರುದ್ಧ ಭಾರತ ದಂಡ ಸಂಹಿತೆ(IPC Section) 354, ಸೆಕ್ಷನ್​ 10ರ ಅಡಿ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಬಾಲಕಿಯನ್ನು ಶಾಲೆಗೆ ಮಾರ್ಚ್​ 1ರಂದು ಸೇರಿಸಲಾಗಿತ್ತು ಘಟನೆ ಬಳಿಕ ವೈದ್ಯರು ಆಪ್ತ ಸಮಾಲೋಚನೆ ನಡೆಸಿದ ಬಳಿಕ ಆರೋಪಿಯನ್ನು ಸಂತ್ರಸ್ತೆ ಗುರುತು ಹಿಡಿದ ಕಾರಣ ನಾವು ಅವರನ್ನು ಬಂಧಿಸಿದ್ದೆವು ಎಂದು ಹಿರಿಯ ಪೊಲೀಸ್​ ಅಧಿಕಾರಿ ಒಬ್ಬರು ತಿಳಿಸಿದ್ದಾರೆ.
ಬೆಂಗಳೂರು: ಬೆಳಗ್ಗಿನ ಉಪಹಾರ, ಮಧ್ಯಾಹ್ನದ ಊಟ, ರಾತ್ರಿ ಊಟ ಯಾವುದೇ ಸಮಯದಲ್ಲಿ ನೀವು ಸೇವಿಸುವ ಯಾವುದೇ…
ಮಕ್ಕಳು ತಿನ್ನುವ ಆಹಾರದಲ್ಲಿ ಹೆಚ್ಚಿನ ಕಾಳಜಿ ವಹಿಸಬೇಕು. ಮಕ್ಕಳ ಉತ್ತಮ ಆರೋಗ್ಯಕ್ಕಾಗಿ ಹಣ್ಣುಗಳನ್ನು ಹಾಲಿನಲ್ಲಿ ಬೆರೆಸಿ…
ಬೆಂಗಳೂರು: ಕೆಲವರು ತೂಕ ಇಳಿಸಿಕೊಳ್ಳಲು ಪ್ರಯತ್ನಿಸುತ್ತಾರೆ. ಆದರೆ, ಕೆಲವರು ಏನನ್ನೂ ಮಾಡದೆ ತೂಕವನ್ನು ಕಳೆದುಕೊಳ್ಳುತ್ತಾರೆ. ಇದಕ್ಕೆ…
Sign in to your account
Please enter an answer in digits:3 × two =
Remember me
